ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

77 ಸೆಕೆಂಡ್ ವಿಡಿಯೊ ಶೂಟಿಂಗ್‌ಗೆ 4.5 ವರ್ಷ; 77 ಭಾರತೀಯ ಸ್ಥಳಗಳನ್ನು ಸೆರೆ ಹಿಡಿದ ಈ ಡ್ರೋನ್ ವಿಡಿಯೊ ಭಾರಿ ವೈರಲ್‌

Viral Video: ಈ ವರ್ಷದ ಗಣರಾಜ್ಯೋತ್ಸವಕ್ಕೆ ಡ್ರೋನ್ ಕ್ರಿಯೇಟರ್ ಒಬ್ಬರು ನೀಡಿದ ಕೊಡುಗೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 77 ಸೆಕೆಂಡ್‌ಗಳ ಡ್ರೋನ್ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು ಇದರಲ್ಲಿ ಭಾರತದ ವೈವಿಧ್ಯತೆಯನ್ನು ರೆಕಾರ್ಡ್ ಮಾಡಲಾಗಿದೆ.

ಭಾರತೀಯ ಪ್ರವಾಸಿ ತಾಣಗಳು

ನವದೆಹಲಿ, ಜ. 27: ಎಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿತ್ತು. 77ನೇ ಗಣರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಧ್ವಜ ಹಿಡಿದ ಮೆರವಣಿಗೆಯ ತುಣುಕುಗಳು, ದೇಶಭಕ್ತಿ ಸಾರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ‌. ಈ ವರ್ಷದ ಗಣರಾಜ್ಯೋತ್ಸವಕ್ಕೆ ಡ್ರೋನ್ ಕ್ರಿಯೇಟರ್ ಒಬ್ಬರು ನೀಡಿದ ಕೊಡುಗೆ ಇಡೀ ದೇಶದ ಜನರ ಗಮನ ಸೆಳೆದಿದೆ. 77 ಸೆಕೆಂಡ್‌ಗಳ ಡ್ರೋನ್ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು (Viral Video) ಇದರಲ್ಲಿ ಭಾರತದ ವೈವಿಧ್ಯತೆಯನ್ನು ಸೆರೆ ಹಿಡಿಯಲಾಗಿದೆ.

ಈ ವಿಡಿಯೊ ಭಾರತದ ವಿವಿಧ ರಾಜ್ಯಗಳ ಪರ್ವತಗಳು, ನದಿಗಳು ಹಾಗೂ ನಗರ ಪ್ರದೇಶಗಳನ್ನು ಸೆರೆಹಿಡಿದಿದೆ. 27 ರಾಜ್ಯ‌ ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಸುಂದರ ಸ್ಥಳಗಳನ್ನು ಈ ವಿಡಿಯೊ ಒಳಗೊಂಡಿದೆ. ಆದರೆ ಈ ವಿಡಿಯೊ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ʼʼಇದನ್ನು ಚಿತ್ರೀಕರಿಸಲು ನನಗೆ 4.5 ವರ್ಷಗಳು ಬೇಕಾದವು. ಜತೆಗೆ 4.5 ಲಕ್ಷ ರುಪಾಯಿ ಖರ್ಚಾಗಿದೆʼʼ ಎಂದು ಯುವಕ ಬರೆದುಕೊಂಡಿದ್ದಾನೆ. 77 ಸ್ಥಳಗಳನ್ನು 77 ಸೆಕೆಂಡ್‌ಗಳಲ್ಲಿ ತೋರಿಸುವ ಈ ದೃಶಕ್ಕೆ ಎ.ಆರ್. ರೆಹಮಾನ್ ಅವರ 'ಮಾ ತುಜೆ ಸಲಾಮ್' ಹಾಡು ಮತ್ತಷ್ಟು ಮೆರುಗು ನೀಡಿದೆ.

ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ವಿಡಿಯೋ ನೋಡಿ:



ವಿಡಿಯೊದಲ್ಲಿ ಪರ್ವತಗಳು, ನದಿ ತೀರಗಳು, ಹಸಿರು ಭೂ ಪ್ರದೇಶಗಳು ಕಣ್ಮನ ಸೆಳೆಯುತ್ತವೆ. ಇದರಲ್ಲಿ ರಾಜಗೀರ್ (ಬಿಹಾರ), ಎರವಾಡಿ (ತಮಿಳುನಾಡು), ಕೋನಾಪುರ ಬೆಟ್ಟ (ಕರ್ನಾಟಕ), ಹೌರಾ (ಪಶ್ಚಿಮ ಬಂಗಾಳ), ಚಿಕ್ಕಮಗಳೂರು (ಕರ್ನಾಟಕ), ಅಟಲ್ ಸೇತು (ಗೋವಾ), ಆನೈಮಲೈ (ತಮಿಳುನಾಡು), ತನ್ನಿ ಬೀಚ್ (ಕೇರಳ), ಸಿರುಮಲೈ (ತಮಿಳುನಾಡು), ಭರಚುಕ್ಕಿ, ಸಕಲೇಶ್‌ಪುರ (ಕರ್ನಾಟಕ) ಸೇರಿದಂತೆ ಹಲವು ಪ್ರಮುಖ ತಾಣಗಳು ಕಂದು ಬಂದಿವೆ. ಆದರೆ ವಿಡಿಯೊದಲ್ಲಿ ತಾಜ್ ಮಹಲ್ ಇಲ್ಲದಿರುವುದನ್ನು ಅನೇಕರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕ್ರಿಯೇಟರ್, "ತಾಜ್ ಮಹಲ್ ಪ್ರದೇಶವು ಸಂಪೂರ್ಣವಾಗಿ ಡ್ರೋನ್ ನಿಷಿದ್ಧ ವಲಯವಾಗಿದೆ. ಹಾಗಾಗಿ ಕೈಬಿಡಲಾಗಿದೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಈ ಒಂದು ವಿಡಿಯೊ ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ. ಕಮೆಂಟ್‌ ಮೂಲಕ ಯುವಕನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲಾಗುತ್ತಿದೆ. ಒಬ್ಬರು ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದೊಂದು ಅದ್ಭುತ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು ಇದು ಅದ್ಭುತವಾಗಿದೆ ಸಹೋದರ ಎಂದು ಬರೆದುಕೊಂಡಿದ್ದಾರೆ.