ನವದೆಹಲಿ: ಇತ್ತೀಚಿನ ದಿನದಲ್ಲಿ ಅಡ್ವೆನ್ಚರ್ ಮನೋರಂಜನೆಯ ಕಡೆ ಬಹುತೇಕರು ಆಕರ್ಷಿತ ರಾಗಿದ್ದಾರೆ. ಸ್ಕೂಬಾ ಡೈವಿಂಗ್, ಬಂಗಿ ಜಂಪಿಂಗ್, ರೋಪಿಂಗ್ , ಸ್ಕೈ ಡೈವಿಂಗ್ ಹೀಗೆ ನಾನಾ ತರನಾದ ಅಡ್ವೆನ್ಚರ್ ಆ್ಯಕ್ಟಿವಿಟಿಗಳು ಬಹಳ ಟ್ರೆಂಡ್ ನಲ್ಲಿದೆ. ಅಂತೆಯೇ ಹರಿಯಾಣ ಮೂಲದ 80 ವರ್ಷದ ವೃದ್ಧ ರೊಬ್ಬರು 15,000 ಅಡಿಗಳಿಂದ ಸ್ಕೈಡೈವ್ ಮಾಡಿದ್ದಾರೆ. ಯಾವುದೇ ಭಯ ಇಲ್ಲದೆ ಬಹಳ ಆತ್ಮ ವಿಶ್ವಾಸದಿಂದ ಅವರು ಸ್ಕೈ ಡೈವ್ ಮಾಡಿದ್ದ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.
ವಯಸ್ಸು ಅನ್ನೋದು ಕೇವಲ ಸಂಖ್ಯೆ ಅಷ್ಟೇ..ಆದರೆ ಖುಷಿ ಪಡುವ ಮನಸ್ಸಿದ್ದರೆ ಎಂದಿಗೂ ಖುಷಿಯಿಂದ ಸಮಯ ಕಳೆಯ ಬಹುದು ಎನ್ನುವುದಕ್ಕೆ ಈ ವಿಡಿಯೊವೇ ಸಾಕ್ಷಿಯಾಗಿದೆ. ಹರಿ ಯಾಣದ 80 ವರ್ಷದ ವೃದ್ಧರೊಬ್ಬರು 15,000 ಅಡಿಯಿಂದ ಸ್ಕೈಡೈವ್ ಮಾಡಿ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ ಎಂದು ತೋರಿಸಿ ನೆಟ್ಟಿಗರನ್ನು ಬೆರಗು ಗೊಳಿಸಿದ್ದಾರೆ. ಮೊಮ್ಮಗ ನೊಂದಿಗೆ ಸ್ಕೈಡೈವಿಂಗ್ ಮಾಡುವ ಮೂಲಕ ಈ ಅಜ್ಜ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಸದ್ಯ ಈ ವಿಡಿಯೊಗೆ ಬಳಕೆದಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
15,000 ಅಡಿಯಿಂದ ಸ್ಕೈ ಡೈವ್ ಮಾಡಿದ ಅಜ್ಜ
ವೈರಲ್ ಆದ ವಿಡಿಯೋದಲ್ಲಿ ಭಯವಿಲ್ಲದ ಅವರ ಮಾತುಗಾರಿಕೆ, ಸ್ಕೈ ಡೈವ್ ಮಾಡುವಾಗ ಅವರ ನಗು ಮತ್ತು ಶಾಂತಯುತ ನಡವಳಿಕೆಯೂ ನಿಜಕ್ಕೂ ಆಶ್ಚರ್ಯಕರವಾಗಿದೆ. ಮೊಮ್ಮಗ ಅಂಕಿತ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ "ದಾದಾ ಜಿ ಸ್ಕೈಡೈವಿಂಗ್.. 15000 ಹೈಟ್" ಎಂದು ಕ್ಯಾಪ್ಶನ್ ಸಹ ನೀಡಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ, ಅಂಕಿತ್ ತನ್ನ ಅಜ್ಜನ ಬಳಿಗೆ ಬಂದು ಸ್ಕೈಡೈವಿಂಗ್ ಬಗ್ಗೆ ಭಯವಾಗುತ್ತಿದೆಯೇ ಎಂದು ಕೇಳುತ್ತಾನೆ. ಅದಕ್ಕೆ ಆತನ ಅಜ್ಜನು ಪ್ರತಿಕ್ರಿಯೆ ನೀಡಿ ತಾನು ಹರಿಯಾಣದವನಾಗಿದ್ದು, ಯಾವುದಕ್ಕೂ ಹೆದರುವುದಿಲ್ಲ ಎಂದು ಉತ್ತರಿಸುತ್ತಾರೆ.
Viral Video: ಎತ್ತಿನ ಬಂಡಿ ಜತೆ ತೆರಳುತ್ತಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಸಾವು: ವಿಡಿಯೊ ವೈರಲ್
ಈ ಕ್ಲಿಪ್ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದು ಇದುವರೆಗೆ 5.8 ಮಿಲಿ ಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅದರ ಜೊತೆಗೆ 6,000 ಕ್ಕೂ ಹೆಚ್ಚು ಕಾಮೆಂಟ್ ಗಳು ಮತ್ತು ಲಕ್ಷಾಂತರ ಲೈಕ್‌ಗಳನ್ನು ಕೂಡ ಗಳಿಸಿದೆ. ನೆಟ್ಟಿಗರು ವೃದ್ಧರ ಧೈರ್ಯದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಜೀವನೋತ್ಸಾಹವು ಅನೇಕ ಯುವಕರಿಗೆ ಪ್ರೇರಣೆ ಇದ್ದಂತೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ 82 ವರ್ಷದ ಮಹಿಳೆಯೊಬ್ಬರು ದೇಶದ ಅತಿ ಎತ್ತರದ ಪ್ರದೇಶವಾದ ಶಿವಪುರಿ, ಋಷಿಕೇಶದಿಂದ ಬಂಗೀ ಜಂಪಿಂಗ್ ಮಾಡಿದ್ದು ಆ ವೀಡಿಯೊವನ್ನು ಕೂಡ ವೈರಲ್ ಆಗಿತ್ತು. ಇದೀಗ ಹರಿಯಾಣ ಮೂಲದ ಇವರು ಕೂಡ ಫೇಮಸ್ ಆಗಿದ್ದಾರೆ. ಒಟ್ಟಿನಲ್ಲಿ ಯಾವುದೇ ಕೆಲಸಕ್ಕೆ ವಯೋಮಿತಿಯ ಹಂಗಿಲ್ಲ ಮನಸ್ಸಿದ್ದರೆ ಮಾರ್ಗ ಎನ್ನಲು ಇವರೇ ಒಂದು ಉತ್ತಮ ಉದಾಹರಣೆ ಎನ್ನಬಹುದು.