Viral Video: ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರದಡಿಗೆ ಸಿಲುಕಿ ಸ್ಕೂಟರ್ ಸವಾರ ಅಪ್ಪಚ್ಚಿ: ವಿಡಿಯೊ ವೈರಲ್
ಸ್ಕೂಟರ್ ಸವಾರರೊಬ್ಬರು ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತಕ್ಕೀಡಾಗಿ ಸಾವನಪ್ಪಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯು ಸ್ಕಿಡ್ ಆಗಿ ಲಾರಿಯ ಚಕ್ರಕ್ಕೆ ಸಿಲುಕಿದ್ದ ಭಯಾನಕ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ವೇಳೆ ಘಟನ ಸ್ಥಳದಲ್ಲಿ ಸ್ಥಳೀಯರಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದೆ ತಮ್ಮ ಪಾಡಿಗೆ ಹೊರಟು ಹೋಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರದಡಿಗೆ ಸಿಲುಕಿದ್ದ ಸ್ಕೂಟರ್ ಸವಾರ (ಸಾಂದರ್ಭಿಕ ಚಿತ್ರ). -
ಹೈದರಾಬಾದ್: ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ದೇಶಾದ್ಯಂತ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಾದ ರಸ್ತೆ ನಿಯಮವನ್ನು ಕೂಡ ಜಾರಿಗೆ ತಂದಿದೆ. ಕುಡಿದು ವಾಹನ ಚಲಾಯಿಸಬಾರದು, ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಹೀಗೆ ನಾನಾ ತರನಾಗಿ ಕಡ್ಡಾಯ ನಿಯಮವನ್ನು ವಿವಿಧ ರಾಜ್ಯಗಳು ಪಾಲಿಸುತ್ತಿವೆ. ಹಾಗಿದ್ದರೂ ಅಪಘಾತ ಮಟ್ಟ ಮಾತ್ರ ತಗ್ಗುತ್ತಿಲ್ಲ. ಇದೀಗ ಸ್ಕೂಟರ್ ಸವಾರನೊಬ್ಬ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತಕ್ಕಿಡಾಗಿ ಸಾವನಪ್ಪಿದ್ದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯು ಸ್ಕಿಡ್ ಆಗಿ ಲಾರಿಯ ಚಕ್ರಕ್ಕೆ ಸಿಲುಕಿದ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ವೇಳೆ ಘಟನಾ ಸ್ಥಳದಲ್ಲಿ ಸ್ಥಳೀಯರಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದೆ ತಮ್ಮ ಪಾಡಿಗೆ ಹೊರಟು ಹೋಗಿದ್ದಾರೆ. ಸದ್ಯ ಈ ವಿಡಿಯೊ (Viral Video) ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ನವೆಂಬರ್ 17ರಂದು ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಕುರಗಲ್ಲು ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಅದರಲ್ಲಿ, ವ್ಯಕ್ತಿಯೊಬ್ಬರು ಸ್ಕೂಟರ್ ಸವಾರಿ ಮಾಡುತ್ತಿರುವುದು ಕಾಣಬಹುದು. ಎಡಭಾಗದಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಿ ತಾನು ಮುಂದೆ ಹೋಗಲು ಸವಾರನು ಪ್ರಯತ್ನಿಸಿದ್ದಾನೆ. ರಸ್ತೆಯಲ್ಲಿ ಕೆಲವು ಭಾಗದಲ್ಲಿ ಹೊಂಡಗಳಿದ್ದು ಬ್ಯಾಲೆನ್ಸ್ ತಪ್ಪಿದ್ದಾನೆ. ಹೀಗಾಗಿ ಬೈಕ್ ಸಮೇತ ಆತ ಸ್ಕಿಡ್ ಆಗಿ ಬಿದ್ದಿದ್ದಾನೆ.
ವೈರಲ್ ವಿಡಿಯೊ ಇಲ್ಲಿದೆ:
మనిషి ప్రాణం పోతున్నా పట్టించుకొని సమాజం
— Telugu Scribe (@TeluguScribe) November 18, 2025
గుంటూరు జిల్లా కూరగల్లులో ఓవర్ టేక్ చేస్తూ లారీ కింద పడ్డ బైకర్
బైకర్ తలపై నుండి దూసుకెళ్లిన లారీ రెండు టైర్లు
తీవ్ర గాయాలతో కొట్టుమిట్టాడుతున్నా చూస్తూ ఉన్నారే కానీ పట్టించుకొని జనం
తీవ్ర గాయాలతో కొట్టుమిట్టాడుతూ ప్రాణాలు వదిలిన బైకర్ pic.twitter.com/iBnPHob4QX
ಲಾರಿ ಕೂಡ ವೇಗದಲ್ಲಿ ಬರುತ್ತಿದ್ದ ಕಾರಣ ಚಾಲಕನಿಗೆ ಅಪಘಾತ ಸಂಭವಿಸುವ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಕ್ಷಣ ಮಾತ್ರದಲ್ಲಿ ಸ್ಕೂಟರ್ ಸವಾರ ಲಾರಿಯ ಕೆಳಗೆ ಬಿದ್ದು, ಹಿಂಭಾಗದ ಟೈರ್‌ಗಳಿಗೆ ಸಿಲುಕಿದ್ದಾನೆ. ಅಪಘಾತ ಬಹಳ ಭೀಕರವಾಗಿದ್ದು ಆತನ ತಲೆ ಮತ್ತು ದೇಹದ ಮೇಲ್ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಸ್ಕೂಟರ್ ಸವಾರನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನು ಓದಿ:Viral Video: ಫ್ಲೈ ಓವರ್‌ನಿಂದ ಹಾರಿದ ಕಾರು- ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಅಪಘಾತದ ನಡೆದ ನಂತರ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪ್ರಕರಣ ದಾಖಲಿಸಿದರು. ಅಲ್ಲಿನ ಸ್ಥಳೀಯರು ಸೇರಿದಂತೆ ಇತರ ವಾಹನ ಚಾಲಕರು ನಿರ್ಲಕ್ಷ್ಯ ಮಾಡಿದ್ದಾರೆ. ಆತ ಗಂಭೀರ ಗಾಯ ವಾದ ಕಾರಣ ಆತನನ್ನು ಉಳಿಸಲು ಮುಂದಾಗಲಿಲ್ಲ. ಇನ್ನಿ ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸುತ್ತೇವೆ ಎಂದು ಪೋಲಿಸರು ತಿಳಿಸಿದ್ದಾರೆ.
ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿನ ಸ್ಥಳೀಯರು ಅಪಘಾತವಾಗಿದ್ದ ವ್ಯಕ್ತಿಗೆ ಸಹಾಯ ಮಾಡದೆ ಇದ್ದುದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. "ವ್ಯಕ್ತಿ ಸಾಯುತ್ತಿದ್ದರೂ ಸಹ ಕಾಳಜಿ ವಹಿಸದ ಸಮಾಜ" ಎಂದು ನೆಟ್ಟಿಗರೊಬ್ಬರು ಕಟುವಾಗಿ ಟೀಕಿಸಿದ್ದಾರೆ. ಕನಿಷ್ಠ ಪಕ್ಷ ಜನರು 108ಗೆ ಕರೆ ಮಾಡಿ ಆತನಿಗೆ ನೆರವಾಗಬಹುದಿತ್ತು. ಅದನ್ನು ಕೂಡ ಮಾಡಲು ಪ್ರಯತ್ನಿಸಲಿಲ್ಲ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.