ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಂಪನಿ ಕೆಲಸ ಬಿಟ್ಟು ಜಗತ್ತು ಸುತ್ತುವ ಯುವತಿ: ಒಂದೇ ಟ್ರಿಪ್‌ನಿಂದ 2.5 ಲಕ್ಷ ರೂಪಾಯಿ ಸಂಪಾದನೆ

Viral News: ಇಂಗ್ಲೆಂಡ್‌ ಮೂಲದ ಯುವತಿಯೊಬ್ಬರು ಉದ್ಯೋಗ ತೊರೆದು ತಮ್ಮಿಷ್ಟದ ಪ್ರಯಾಣವನ್ನೇ ಉದ್ಯೋಗವನ್ನಾಗಿ ಪರಿವರ್ತಿಸಿದ್ದಾರೆ. ಇದೀಗ ಅವರು ಗ್ರೂಪ್ ಟೂರ್ಸ್ ಆಯೋಜನೆ, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಬ್ರ್ಯಾಂಡ್‌ ಸಹಯೋಗಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ಇವರ ಈ ಉದ್ಯೋಗ ಆಯ್ಕೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ, ಸೆ. 25: ಸೋಷಿಯಲ್ ಮೀಡಿಯಾ ಪ್ಲಾರ್ಟ್ ಫಾರ್ಮ್ ಬಳಸಿ ಆದಾಯ ಗಳಿಸುವ ಅನೇಕರಿದ್ದಾರೆ. ಇದೀಗ ಇಂಗ್ಲೆಂಡ್‌ ಮೂಲದ ಯುವತಿಯೊಬ್ಬರು ತಮ್ಮ ಉದ್ಯೋಗ ತೊರೆದು ತಮ್ಮಿಷ್ಟದ ಪ್ರಯಾಣವನ್ನೇ ಉದ್ಯೋಗವನ್ನಾಗಿ ಪರಿವರ್ತಿಸಿದ್ದಾರೆ. ಇದೀಗ ಅವರು ಗ್ರೂಪ್ ಟೂರ್ಸ್ ಆಯೋಜನೆ, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಬ್ರ್ಯಾಂಡ್‌ ಸಹಯೋಗಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ಇವರ ಈ ಉದ್ಯೋಗ ಆಯ್ಕೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ (Viral News) ವ್ಯಕ್ತ ಪಡಿಸುತ್ತಿದ್ದಾರೆ.

ಯಾವುದೇ ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಾಗ ಅಲ್ಲಿನ ರೂಲ್ಸ್‌ಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಆದರೆ ತಮ್ಮ ಇಷ್ಟದ ಪ್ರಕಾರ ಕೆಲಸ ಮಾಡಲು ಕೆಲವೊಂದಿಷ್ಟು ನಿರ್ಧಾರ ಪ್ರಮುಖವಾಗುತ್ತದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಹೀಗಾಗಿ ​ಸಾಮಾನ್ಯ ಉದ್ಯೋಗದಿಂದ  ಹೊರಬಂದು, ತಮ್ಮಿಷ್ಟದ ಪ್ರಯಾಣವನ್ನೇ ಪೂರ್ಣಾವಧಿ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರಂತೆ.

ಕೆಲಸ ತೊರೆದರೂ ಈಗ 26 ವರ್ಷದ ರಿಯಾನನ್ ವುಡ್ ಎಂಬ ಯುವತಿ ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ವಿದೇಶದಲ್ಲಿ ಕಡಿಮೆ ವೇತನದ ಹಲವು ಉದ್ಯೋಗಗಳನ್ನು ಮಾಡಿದ ನಂತರ, ಅವರು ಪ್ರವಾಸಕ್ಕೆ ಸಂಬಂಧಿಸಿದ ಕಂಟೆಂಟ್ ಮೂಲಕ ಗಳಿಕೆ ಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ತಮ್ಮ ಪ್ರಯಾಣದ ಮೇಲಿನ ಪ್ರೀತಿಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ

ಫ್ರಾನ್ಸ್‌ನ ಲಿಯಾನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರಿಯಾನನ್ ಅವರಿಗೆ ಪ್ರವಾಸದ ಮೇಲೆ ಆಸಕ್ತಿ ಹೆಚ್ಚಿದೆ. ನಂತರ ಕೆನಡಾಕ್ಕೆ ತೆರಳಿದ ಅವರು ಅಲ್ಲಿ ಬೋಟ್ ರೆಂಟಲ್, ಜಿಪ್‌ಲೈನ್ ಕಂಪನಿ  ರೆಸಾರ್ಟ್‌ಗಳಲ್ಲಿ ಕನಿಷ್ಠ ವೇತನಕ್ಕೆ ಕೆಲಸ ಮಾಡಿದರು. ಆ ಬಳಿಕ ಸೋಶಿಯಲ್ ಮೀಡಿಯಾ ಕೋರ್ಸ್‌ಗಳನ್ನು ಮಾಡಿ ಅಕೌಂಟ್ ಹ್ಯಾಂಡಲ್‌ ಮಾಡುವ ವಿಧಾನ ಕಲಿತರು. ನಾಲ್ಕೇ ತಿಂಗಳಲ್ಲಿ ಸ್ವಿಟ್ಜರ್‌ಲ್ಯಾಂಡ್ ಟೂರ್ ಮುನ್ನಡೆಸುವ ಅವಕಾಶ ಅವರಿಗೆ ಸಿಕ್ಕಿತು.

ಇದೀಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 60,000 ಬಳಕೆದಾರರನ್ನು ಹೊಂದಿದ್ದು, ಒಂದೇ ಪ್ರವಾಸದಿಂದ 3,000 ಡಾಲರ್ ಅಂದ್ರೆ ಸುಮಾರು 2.5 ಲಕ್ಷ ರೂಪಾಯಿವರೆಗೆ ಕಮಿಷನ್ ಗಳಿಸುತ್ತಿದ್ದಾರೆ. ಇದೀಗ ತಮ್ಮದೇ ಆದ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸುವ ಪ್ಲ್ಯಾನ್ ಕೂಡ ಹೊಂದಿದ್ದಾರೆ.

ತಮಗೆ ದಿನಪೂರ್ತಿ ರಜೆ ಸಿಗುವುದು ಕಡಿಮೆ, ಕಂಟೆಂಟ್ ಕ್ರಿಯೇಟ್ ಮಾಡುವುದು, ಇಮೇಲ್ ಹಾಗೂ ಬ್ರ್ಯಾಂಡ್ ಕ್ರಿಯೇಟ್ ಮಾಡುವುದರಲ್ಲೆ ಸಮಯ ಕಳೆಯುತ್ತದೆ. ​ಸದ್ಯದಲ್ಲೇ ಸ್ವಂತ ಟ್ರಾವೆಲ್ ಏಜೆನ್ಸಿ ಪ್ರಾರಂಭಿಸುವ ಯೋಜನೆ ಇರುವುದಾಗಿ ತಿಳಿಸಿದ್ದಾರೆ.