ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಹಠಾತ್ ಮಳೆ: ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು

Ganesh chaturthi 2026: ಹಠಾತ್ ಸುರಿದ ಮಳೆಯಿಂದಾಗಿ ಪಂಡಾಲ್‌ಗೆ ತರುತ್ತಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದು ನಾಶವಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬೃಹತ್ ಮೂರ್ತಿಯ ಅಡಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದ್ದು, ಈ ಘಟನೆ ಶನಿವಾರ ಸಂಜೆ ನಲಸೋಪರ ಪಶ್ಚಿಮದಲ್ಲಿ ನಡೆದಿದೆ.

ಮಳೆಯಿಂದ ಕೆಳಕ್ಕೆ ಬಿದ್ದು ನಾಶವಾದ  ಬೃಹತ್ ಗಣೇಶನ ವಿಗ್ರಹ

ಸಂಗ್ರಹ ಚಿತ್ರ -

ಮಹಾರಾಷ್ಟ್ರ: ಹಠಾತ್ ಆಗಿ ಸುರಿದ ಭಾರಿ ಮಳೆಯ ಕಾರಣದಿಂದ ಗಣೇಶನ ವಿಗ್ರಹವೊಂದು (Ganesha ido) ಕೆಳಗೆ ಬಿದ್ದು ನಾಶವಾದ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ. ಹಲವಾರು ಮಂದಿ ಇದರ ಅಡಿಯಲ್ಲಿ ಸಿಲುಕೊಂಡರು. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral video) ಆಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರದಿಂದ ಆರಂಭವಾಗಲಿರುವ ಗಣೇಶೋತ್ಸವದ (Ganesh chaturthi 2026) ಅಂಗವಾಗಿ ಪಂಡಾಲ್‌ಗೆ ಕೊಂಡೊಯ್ಯುತ್ತಿದ್ದಾಗ ಗಣೇಶ ಮೂರ್ತಿ ಭಕ್ತರ ಮೇಲೆಯೇ ಬಿದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಯ ವಿಡಿಯೊದಲ್ಲಿ ಮಳೆಯ ನಡುವೆ ಗಣೇಶ ಮೂರ್ತಿ ಪತನವಾಗುತ್ತಿರುವುದು, ಅದರ ಕೆಳಗೆ ಹಲವರು ಸಿಲುಕಿರುವುದನ್ನು ಕಾಣಬಹುದಾಗಿದೆ. ಮೂರ್ತಿ ಬೀಳುವ ಕ್ಷಣಗಳಲ್ಲಿ ಹಲವಾರು ಮಂದಿ ಮೂರ್ತಿಯನ್ನು ಮುಚ್ಚಿ ರಕ್ಷಿಸಲು ಪ್ರಯತ್ನಿಸುತ್ತಿರುವುದು ಕೂಡ ಇದರಲ್ಲಿ ಸೆರೆಯಾಗಿದೆ.

5G ನೆಟ್‌ವರ್ಕ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಟೆಲಿಕಾಂ ಟೆಕ್ನಿಷಿಯನ್‌; ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ ಸಾರ್ವಜನಿಕರು

ಪಾಲ್ಘರ್ ಜಿಲ್ಲೆಯ ನಲಸೋಪರ ಪಶ್ಚಿಮದಲ್ಲಿ ಶನಿವಾರ ಸಂಜೆ ಗಣೇಶೋತ್ಸವ ಮಂಡಳಿಯ ಸದಸ್ಯರು ಹಬ್ಬದ ಅಂಗವಾಗಿ ಕಲಾವಿದರ ಕಾರ್ಯಾಗಾರದಿಂದ ತಮ್ಮ ಪಂಡಾಲ್‌ಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಿದ್ದರು. ಈ ಸಂದರ್ಭದಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆ ಪ್ರಾರಂಭವಾಗಿದೆ.



ಈ ಸಂದರ್ಭದಲ್ಲಿ ಮಂಡಳಿಯವರು ಕೂಡಲೇ ಮೂರ್ತಿಯ ಸುತ್ತ ಸೇರಿ ಪ್ಲಾಸ್ಟಿಕ್ ಟಾರ್ಪಾಲಿನ್‌ನಿಂದ ಅದನ್ನು ಮುಚ್ಚಲು ಪ್ರಯತ್ನಿಸಿದರು. ಆದರೆ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಟ್ರಾಲಿ ಅಸ್ಥಿರಗೊಂಡು ಮೂರ್ತಿ ಓರೆಯಾಗಿ ಕೆಳಗೆ ಬಿದ್ದಿತು. ಇದರಿಂದ ಜನರು ಆತಂಕಗೊಂಡರು. ನಾಲ್ಕರಿಂದ ಐದು ಮಂದಿ ಅದರ ಅಡಿಯಲ್ಲಿ ಸಿಲುಕಿಕೊಂಡರು. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಸ್ಥಳೀಯರು ತಕ್ಷಣವೇ ಧಾವಿಸಿ ಮೂರ್ತಿಯ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿದರು.

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾಕ್ಷ್ಯ ನಾಶಕ್ಕೆ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿ; ಹೃದಯಾಘಾತದಿಂದ ಪ್ರಾಣಬಿಟ್ಟ ಕಂದಮ್ಮ

ಇನ್ನೊಂದು ಘಟನೆಯಲ್ಲಿ ಶನಿವಾರ ಠಾಣೆ ಜಿಲ್ಲೆಯ ಭಯಂದರ್ ಪ್ರದೇಶದಲ್ಲಿ ಗಣೇಶ ಮೂರ್ತಿಯೊಂದು ಬಿದ್ದಿದೆ. ನವ್‌ಘರ್‌ನಿಂದ ಭಯಂದರ್ ಪಶ್ಚಿಮದಲ್ಲಿರುವ 'ಶೀತಲ್ ಛಾಯಾ ಮಿತ್ರ ಮಂಡಲ'ದ ಪಂಡಾಲ್‌ಗೆ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ 'ಗೋಲ್ಡನ್ ನೆಸ್ಟ್ ಚೌಕ್' ಬಳಿ ಸಮತೋಲನ ತಪ್ಪಿ ಕೆಳಗೆ ಬಿದ್ದು ಹಾನಿಯಾಗಿದೆ. ಇದರಿಂದ ಒಬ್ಬ ಯುವಕ ಗಾಯಗೊಂಡಿದ್ದಾನೆ.