ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಓಡುವ ಭಂಗಿಯಲ್ಲೇ ಗೌರವ ಸಲ್ಲಿಸಿದ ಶಾಲಾ ಬಾಲಕ; ಸೆಲ್ಯೂಟ್‌ ಹೊಡೆದ ನೆಟ್ಟಿಗರು

Viral Video: ಶಾಲೆ ಆರಂಭವಾಗುವ ಮೊದಲು ಮಕ್ಕಳು ಶಿಸ್ತಿನಿಂದ ಬೆಳಗ್ಗೆ ಪ್ರಾರ್ಥನೆಯಲ್ಲಿ ಕಡ್ಡಾಯ ಪಾಲ್ಗೊಳ್ಳಬೇಕು ಎಂಬ ನಿಯಮ ಇದೆ. ಇದೀಗ ಕ್ಯಾಂಪಸ್‌ನಲ್ಲಿ ರಾಷ್ಟ್ರಗೀತೆ ಪ್ರಾರಂಭವಾಗುತ್ತಿದ್ಧಂತೆ ಬಾಲಕನೊಬ್ಬ ಓಟದ ಮಧ್ಯದಲ್ಲಿಯೇ ಗೌರವ ಸಲ್ಲಿಸಿರುವ ದೃಶ್ಯ ಕಂಡುಬಂದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಬಾಲಕ

ನವದೆಹಲಿ,ಮಾ.5: ಶಾಲಾ ದಿನದಲ್ಲೇ ನಾವು ದೇಶ ಭಕ್ತಿಗೀತೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಆರಂಭಿಸುತ್ತವೆ. ಅದರಲ್ಲೂ ಶಾಲೆ ಆರಂಭವಾಗುವ ಮೊದಲು ಮಕ್ಕಳು ಶಿಸ್ತಿನಿಂದ ಬೆಳಗ್ಗೆ ಪ್ರಾರ್ಥನೆಯಲ್ಲಿ ಕಡ್ಡಾಯ ಪಾಲ್ಗೊಳ್ಳಬೇಕು ಎಂಬ ನಿಯಮವು ಇದೆ. ಅಂತೆಯೇ ಕ್ಯಾಂಪಸ್‌ನಲ್ಲಿ ರಾಷ್ಟ್ರಗೀತೆ ಪ್ರಾರಂಭ ಆದ್ದಂತೆ ಬಾಲಕನೊಬ್ಬ ಓಟದ ಮಧ್ಯದಲ್ಲಿಯೇ ಗೌರವ ಸಲ್ಲಿಸಿರುವ ದೃಶ್ಯ ಕಂಡುಬಂದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಕ್ಕಳು ಶಾಲಾ ಮೈದಾನದಾದ್ಯಂತ ಆಟವಾಡುತ್ತಿದ್ದರು, ಆಗ ರಾಷ್ಟ್ರ ಗೀತೆ ಸ್ಪೀಕರ್‌ಗಳಲ್ಲಿ ಪ್ರತಿಧ್ವನಿಸಿದೆ. ಶಾಲೆಯ ಶಿಸ್ತಿನಂತೆ ಎಲ್ಲಾ ವಿದ್ಯಾರ್ಥಿಗಳು ಇದ್ದಲ್ಲೇ ನಿಂತು ಗೌರವ ಸಲ್ಲಿಸಿದ್ದಾರೆ. ಆದರೆ ಬಾಲಕನೊಬ್ಬ ಓಡುತ್ತಿದ್ದಂತೆ ಓಟದ ಭಂಗಿಯಲ್ಲೇ ದೇಹ ಮುಂದೆ ಬಾಗಿರುವ ಸ್ಥಿತಿಯಲ್ಲೇ ನಿಂತುಬಿಟ್ಟಿದ್ದಾನೆ.

ವಿಡಿಯೊ ನೋಡಿ:



ರಾಷ್ಟ್ರಗೀತೆ ಮುಗಿಯವರೆಗೂ ಬಾಲಕ ಆತ ಅದೇ ಭಂಗಿಯಲ್ಲಿ ನಿಂತಿರುವುದು ವಿಡಿಯೊದಲ್ಲಿ ಕಾಣಬಹುದು‌. ತನ್ನ ಭಂಗಿಯನ್ನು ಯಾವುದೇ ರೀತಿ ಬದಲಾಯಿಸದೆ ನಿಂತು ಬಿಟ್ಟಿದ್ದಾನೆ. ಕೈಗಳನ್ನು ಓಡುವ ಸ್ಥಿತಿಯಲ್ಲೇ ಬಿಗಿಹಿಡಿದು ಒಂದು ಕಾಲನ್ನು ಮುಂದಕ್ಕೆ ಬಾಗಿಯೇ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದಾನೆ. ಈ ಘಟನೆಯ ವಿಡಿಯೊ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದೆ.

282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಅನೇಕ ಬಳಕೆದಾರರು ಬಾಲಕನ ನಡೆಗೆ ಹೊಗಳಿದ್ದಾರೆ. ನೆಟ್ಟಿಗರೊಬ್ಬರು ಮೌಲ್ಯಗಳು ಚಿಕ್ಕಂದಿ ನಿಂದಲೇ ಪ್ರಾರಂಭವಾಗುತ್ತವೆ ಎಂದು ಬರೆದಿದ್ದಾರೆ. ಮತ್ತೊಬ್ಬರು "ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಪುಟ್ಟ ನಾಗರಿಕ" ಎಂದಿದ್ದಾರೆ. ಬಹುತೇಕ ನೆಟ್ಟಿಗರು ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಹಲವರು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.