Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ
ಯುವಕನೊಬ್ಬ ಮಾಡಿರುವ ಅಪಾಯಕಾರಿ ಸಾಹಸವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹರಿಯಾಣದ ಹಿಸಾರ್‌ನಲ್ಲಿರುವ ಐಕಾನಿಕ್ ಒಪಿ ಜಿಂದಾಲ್ ಟವರ್‌ನ ಮೇಲೆ ಅಪಾಯಕಾರಿ ಸ್ಟಂಟ್ ಮಾಡಿದ್ದು, ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕ -
ಚಂಡೀಗಢ, ಜ. 21: ಇತ್ತೀಚೆಗೆ ರೀಲ್ಸ್ ಕ್ರೇಝ್ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಪ್ರಾಣದ ಹಂಗು ತೊರೆದು ರೀಲ್ಸ್ ಮಾಡುವವರಿದ್ದಾರೆ. ಇಂತಹ ಹರಸಾಹಸಕ್ಕೆ ಹೋಗಿ ಪ್ರಾಣ ಕಳೆದುಕೊಂಡವರು ಅನೇಕರಿದ್ದಾರೆ. ಇದೀಗ ಯುವಕನೊಬ್ಬ ಮಾಡಿರುವ ಅಪಾಯಕಾರಿ ಸಾಹಸವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹರಿಯಾಣದ ಹಿಸಾರ್‌ನಲ್ಲಿರುವ 282 ಅಡಿ ಎತ್ತರದ ಐಕಾನಿಕ್ ಒಪಿ ಜಿಂದಾಲ್ ಟವರ್‌ನ ಮೇಲೆ ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಹರಿಯಾಣದ ಹಿಸಾರ್‌ನಲ್ಲಿರುವ ಒಪಿ ಜಿಂದಾಲ್ ಟವರ್ ಮೇಲೆ ಈ ಯುವಕ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸ್ಟಂಟ್ ಮಾಡಿದ್ದಾನೆ. ರಾಜಸ್ಥಾನದ ಮೋನು ಎಂಬ ಈ ಯುವಕ 282 ಅಡಿ ಎತ್ತರದ ಟವರ್ ಹತ್ತಿದ್ದಾನೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದು, ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ವಿಡಿಯೊ ನೋಡಿ:
जिंदल टावर, हिसार….
— kapil bishnoi (@Kapil_Jyani_) January 20, 2026
कल का विडियो है ये…
ज़िंदगी कितनी सस्ती है…..!!!
रील, कंटेंट, वायरल होना ही सर्वाधिक मायने रखता है…!! pic.twitter.com/PW5ytT0ARh
ಯುವಕನು ಟವರ್‌ನ ಅತ್ಯಂತ ಎತ್ತರದ ತುದಿಯಲ್ಲಿ ನಿಂತುಕೊಂಡೇ ಪ್ರಾಣಾಪಾಯಕಾರಿ ಸಾಹಸ ಪ್ರದರ್ಶಿಸಿದ್ದಾನೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಯುವಕನು ಬಿಯರ್ ಬಾಟಲಿಗಳು ಮತ್ತು ಕ್ಯಾನ್ ಅನ್ನು ಒಳಗೊಂಡಿರುವ ಚೀಲವನ್ನು ಹೊತ್ತೊಯ್ಯುತ್ತಿದ್ದು ಅದನ್ನು ಅವನು ಸಾಹಸದ ಸಮಯದಲ್ಲಿ ಬಳಸಿದ್ದ ಎನ್ನಲಾಗಿದೆ.
ಭಾರತೀಯ ಮೊಮೊಸ್ ರುಚಿಗೆ ಅಮೆರಿಕದ ಯುವಕ ಫುಲ್ ಫಿದಾ
ಯುವಕನು ಬಿಯರ್ ಬಾಟಲಿಗಳನ್ನು ಟವರ್ ತುದಿಯ ಕಿರಿದಾದ ಜಾಗದಲ್ಲಿಟ್ಟು ಅದರ ಮೇಲೆ ನಿಂತುಕೊಂಡಿದ್ದಾನೆ. ಯಾವುದೇ ಹಗ್ಗ ಅಥವಾ ಬೆಂಬಲವಿಲ್ಲದೆ ಕೇವಲ ಕೈಗಳಿಂದ ಟವರ್ ಹಿಡಿದು ನೇತಾಡಿದ್ದಾನೆ. ಜಿಂದಾಲ್ ಟವರ್ ಭದ್ರತಾ ಸಿಬ್ಬಂದಿ ಈ ಚಟುವಟಿಕೆಯನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿದ್ದು ವಿಚಾರಣೆಯ ಸಮಯದಲ್ಲಿ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಮತ್ತು ಲಿಖಿತ ಕ್ಷಮೆಯಾಚನೆಯನ್ನು ಸಲ್ಲಿಸಿದ್ದಾನೆ. ಅಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾನೆ. ಘಟನೆಯ ನಂತರ, ಮುಂದಕ್ಕೆ ಇದೇ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಒಪಿ ಜಿಂದಾಲ್ ಟವರ್‌ನಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ.