Guinness World Records: 15 ವರ್ಷದ ಬಾಲಕನಿಂದ ಗಿನ್ನೆಸ್ ರೆಕಾರ್ಡ್! ಈತನ ಸಾಧನೆಯನ್ನೊಮ್ಮೆ ಈ ವಿಡಿಯೊದಲ್ಲಿ ನೋಡಿ
ಕೋಲ್ಕತ್ತಾದ 15 ವರ್ಷದ ಹುಡುಗ ಅರ್ನವ್ ಡಾಗಾ ಇತ್ತೀಚೆಗೆ ಕಾರ್ಡ್‍ಗಳಿಂದ ಅತಿ ಎತ್ತರದ ಮನೆ ನಿರ್ಮಿಸುವ ಮೂಲಕ ಸಾಧನೆಯನ್ನು ಮಾಡಿದ್ದಾನೆ. ಈ ವಿಚಾರವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್(Viral News) ಆಗಿದೆ.
-
ಕೋಲ್ಕತ್ತಾ: ಕೋಲ್ಕತ್ತಾದ 15 ವರ್ಷದ ಬಾಲಕ ಅರ್ನವ್ ಡಾಗಾ ಎಂಬಾತ ಒಂದೇ ದಿನದಲ್ಲಿ ಕಾರ್ಡ್-ಸ್ಟ್ಯಾಕಿಂಗ್(Card-Stacking )ನಲ್ಲಿ ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದು ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ. ಈತ ಇತ್ತೀಚೆಗೆ ಕಾರ್ಡ್‍ಗಳಿಂದ ಅತಿ ಎತ್ತರದ ಮನೆ ನಿರ್ಮಿಸುವ ಮೂಲಕ ಸಾಧನೆಯನ್ನು ಮಾಡಿದ್ದಾನೆ. ಹುಡುಗನೊಬ್ಬ 24 ಗಂಟೆಗಳಲ್ಲಿ ನಾಲ್ಕು ದಾಖಲೆಗಳನ್ನು ಮುರಿದು ಸಾಹಸ ಮಾಡಿದ್ದಾನೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್( Guinness World Records) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದು ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ಅರ್ನವ್ ಡಾಗಾ ಅಕ್ಟೋಬರ್ 19, 2024 ರಂದು ಕಾರ್ಡ್‌ನಿಂದ ಅತಿ ಎತ್ತರದ ಮನೆಯನ್ನು ನಿರ್ಮಿಸಿ ದಾಖಲೆ ಮಾಡಿರುವುದಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಿಳಿಸಿದೆ. ಹಾಗೇ ಅರ್ನವ್ ಸಾಧನೆಯ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಕಾರ್ಡ್ ಜೋಡಿಸುವ ಬಗ್ಗೆ ಬಹಳಷ್ಟು ಆಸಕ್ತಿ ಇದ್ದ ಈತ ಒಂದು ಗಂಟೆಯ ದಾಖಲೆಯನ್ನು ಮುರಿಯುವ ಪ್ರಯತ್ನದಲ್ಲಿ, 30 ಲೆವೆಲ್ಸ್‌ನ ಗೋಪುರವನ್ನು ನಿರ್ಮಿಸಿದ್ದಾನಂತೆ. ಕಾರ್ಡ್ ಜೋಡಿಸುವುದು ಒಂದು ಸವಾಲಿನ ಕಲೆಯಾಗಿದ್ದು, ಇದಕ್ಕೆ ಸಾಕಷ್ಟು ಸಮಯ ಹಾಗೂ ತಾಳ್ಮೆ ಬೇಕಾಗುತ್ತದೆ ಎಂದು ಆತ ಹೇಳಿದ್ದಾನೆ. ಇದಾದ ಬಳಿಕ ಡಾಗಾ ಹೊಸ ಗೋಪುರವನ್ನು ನಿರ್ಮಿಸಿ ಇತರ ಮೂರು ದಾಖಲೆಗಳನ್ನು ಮುರಿದಿದ್ದಾನಂತೆ.
ಡಾಗಾ ರೆಕಾರ್ಡ್ ಮಾಡುವ ಮುನ್ನ, ಎಂಟು ಮತ್ತು 12 ಗಂಟೆಗಳಲ್ಲಿ ಕಾರ್ಡ್‍ಗಳಿಂದ ಅತಿ ಎತ್ತರದ ಮನೆ ರಚಿಸಿದ ದಾಖಲೆ ಚೀನಾದ ಟಿಯಾನ್ ರುಯಿ ಅವನದ್ದಾಗಿತ್ತು. ಟಿಯಾನ್ ಈಗಾಗಲೇ ಎಂಟು ಗಂಟೆಗಳ ವಿಭಾಗದಲ್ಲಿ 62 ಲೆವಲ್ಸ್‌ನ ಗೋಪುರವನ್ನು ನಿರ್ಮಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದನಂತೆ.
ಈ ಸುದ್ದಿಯನ್ನೂ ಓದಿ:Viral News: ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಸೈನಿಕನ ಮದುವೆ ಆಮಂತ್ರಣ ಪತ್ರಿಕೆ; ಏನಿದೆ ಇದರಲ್ಲಿ?
ಕಾರ್ಡ್-ಸ್ಟ್ಯಾಕಿಂಗ್‌ನಲ್ಲಿ ಡಾಗಾ ವಿಶ್ವ ದಾಖಲೆ ನಿರ್ಮಿಸಿದ್ದು ಇದೇ ಮೊದಲಲ್ಲ! 2023 ರಲ್ಲಿ, ಅವನು ವಿಶ್ವದ ಅತಿದೊಡ್ಡ ಪ್ಲೇಯಿಂಗ್ ಕಾರ್ಡ್ ರಚನೆಯನ್ನು ನಿರ್ಮಿಸಲು 1.43 ಲಕ್ಷ ಕಾರ್ಡ್‌ಗಳನ್ನು ಬಳಸಿದ್ದನು. ಇವು ಕೋಲ್ಕತ್ತಾದ ನಾಲ್ಕು ಸಾಂಪ್ರದಾಯಿಕ ಕಟ್ಟಡಗಳಾದ ರೈಟರ್ಸ್ ಬಿಲ್ಡಿಂಗ್, ಶಹೀದ್ ಮಿನಾರ್, ಸಾಲ್ಟ್ ಲೇಕ್ ಕ್ರೀಡಾಂಗಣ ಮತ್ತು ಸೇಂಟ್ ಪೌಲ್ಸ್ ಕ್ಯಾಥೆಡ್ರಲ್ ರೀತಿ ಕಾಣುತ್ತಿದ್ದವಂತೆ.