ಇಂದೋರ್,ಎ.3: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರೊಂದು ಹರಿದು ಹೋಗಿದ್ದುಂ ಮಗು ಪವಾಡ ಸದೃಶವಾಗಿ ಪಾರಾಗಿದೆ. ಘಟನೆಯ ವಿಡಿಯೊ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ನೋಡುಗರು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕೆಲವೇ ಸೆಕೆಂಡುಗಳ ನಂತರ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಮಗು ಎದ್ದು ನಿಂತಿದೆ.
ಈ ಘಟನೆ ಮಂಗಳವಾರ ಮಧ್ಯಾಹ್ನ ಬಾಂಬೆ ಆಸ್ಪತ್ರೆಯ ಹಿಂಭಾಗದ ಐಷಾರಾಮಿ ಶಾಂತಿ ನಿಕೇತನ ಕಾಲೋನಿಯಲ್ಲಿ ನಡೆದಿದೆ. ಮಕ್ಕಳು ಇಬ್ಬರು ಆಟವಾಡುತ್ತಿದ್ದಾಗ ಕಾರು ಹಿಂದಿನಿಂದ ಬಂದಿದ್ದು ಅವರಲ್ಲಿ ಒಬ್ಬ ಬಾಲಕ ತಪ್ಪಿಸಿ ಕೊಂಡಿದ್ದಾನೆ. ಮತ್ತೊಬ್ಬನ ಕಾಲು ಕಾರಿನ ಚಕ್ರಗಳಲ್ಲಿ ಒಂದಕ್ಕೆ ಸಿಲುಕಿಕೊಂಡು ಕೆಳಗೆ ಬಿದ್ದಿದ್ದಾನೆ. ಆಗ ಕಾರು ಸಂಪೂರ್ಣ ವಾಗಿ ಮಗುವಿನ ಮೇಲೆ ಹರಿದಿತ್ತು. ಆದರೆ ಮಗು ಏನು ಆಗದಂತೆ ಎದ್ದು ನಿಂತಿದೆ. ನಂತರ ಮಗುವಿನ ಕಾಲಿಗೆ ತೀವ್ರವಾದ ಪೆಟ್ಟಾಗಿರುವುದು ತಿಳಿದುಬಂದಿದೆ.
ವಿಡಿಯೋ ನೋಡಿ:
ಈ ಘಟನೆ ತುಂಬಾ ಮಾರಕವಾಗಿ ಕಂಡು ಬಂದಿದ್ದು ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ. ಕಾರು ಮಾಲೀಕ ಸಂಜಯ್ ಅಗರ್ವಾಲ್ ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಬಾಂಬೆ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಮಾಲೀಕರು ತಾವೇ ಖುದ್ದಾಗಿ ಚಾಲಕನನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದು, ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ವೈರಲ್ಆದ ವಿಡಿಯೊದಲ್ಲಿ ಮಕ್ಕಳು ಆಟ ಆಡುವುದರಲ್ಲಿ ಮಗ್ನರಾಗಿದ್ದಾರೆ. ಈ ಸಂದರ್ಭದಲ್ಲಿ ಕಾರೊಂದು ವೇಗವಾಗಿ ಬಂದಿದ್ದು ಒಬ್ಬ ಬಾಲಕ ಅಲ್ಲಿದ ದೂರ ಸರಿದಿದ್ದಾನೆ. ಮತ್ತೊಬ್ಬ ಬಾಲಕನ ಮೇಲೆ ಕಾರಿನ ಚಕ್ರ ಕಾಲಿನ ಮೇಲೆ ಹರಿದಾಗ ಮಗು ಕೆಳಗೆ ಬೀಳುತ್ತದೆ. ಪೂರ್ತಿ ಕಾರು ಮಗುವಿನ ಮೇಲೆ ಹಾದು ಹೋದರೂ, ಮಗು ತಕ್ಷಣ ಎದ್ದು ನಡೆಯಲು ಪ್ರಯತ್ನಿಸುತ್ತದೆ