ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫ್ರಾನ್ಸ್‌ನಲ್ಲಿ ಉಗ್ರ ಪ್ರತಿಭಟನೆ: ಪಕ್ಕದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದೆ ಕಾಫಿ ಸವಿದ ಜೋಡಿ

Viral Video: ಫ್ರಾನ್ಸ್‌ನಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ಜೋಡಿಯೊಂದು ಪ್ಯಾರಿಸ್‌ನ ಕೆಫೆಯಲ್ಲಿ ಶಾಂತವಾಗಿ ಕೂತು ಕಾಫಿ ಹೀರಿದೆ. ಕೆಲವು ಮೀಟರ್‌ಗಳ ಹಿಂದೆ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದೆ ಕುಳಿತಿದೆ. ಈ ವಿಡಿಯೊ ವೈರಲ್‌ ಆಗಿದೆ.

ಫ್ರಾನ್ಸ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಶಾಂತವಾಗಿ ಕೂತು ಕಾಫಿ ಕುಡಿದ ಜೋಡಿ

ಪ್ಯಾರಿಸ್‌, ಅ. 22: ಹಣದುಬ್ಬರ ಮತ್ತು ವಸತಿ ದರ ಏರಿಕೆ, ಆರ್ಥಿಕ ಅಸಮಾನತೆ ಹಾಗೂ ಆಡಳಿತ ವೈಫಲ್ಯಗಳನ್ನು ಖಂಡಿಸಿ ಯುರೋಪ್‌ನಾದ್ಯಂತ ಜನಾಕ್ರೋಶ ಭುಗಿಲೆದ್ದಿದೆ. ಅದರಲ್ಲೂ ಫ್ರಾನ್ಸ್, ಬೆಲ್ಜಿಯಂ, ಇಟಲಿಯಂತ ದೇಶಗಳಲ್ಲಿ ಪ್ರತಿಭಟನೆಗಳು ಉಲ್ಬಣಗೊಂಡಿವೆ. ರಸ್ತೆಗಳೆಲ್ಲ ಉರಿ ಪಂಜಿನಂತೆ ಹೊತ್ತಿ ಉರಿಯುತ್ತಿದೆ. ಈ ನಡುವೆ ಫ್ರಾನ್ಸ್‌ನ ಪ್ಯೃಿಸ್‌ನಲ್ಲಿ ಜೋಡಿಯೊಂದು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ, ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಅತ್ಯಂತ ಶಾಂತವಾಗಿ ಕೆಫೆಯಲ್ಲಿ ಕೂತು ಕಾಫಿ ಸವಿಯುತ್ತ ಹರಟೆ ಹೊಡೆಯುತ್ತಿರುವ ದೃಶ್ಯವೊಂದು ವೈರಲ್ (Viral News) ಆಗಿದೆ.

ಫ್ರಾನ್ಸ್‌ನಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ಜೋಡಿಯೊಂದು ಪ್ಯಾರಿಸ್ ಕೆಫೆಯಲ್ಲಿ ಶಾಂತವಾಗಿ ಕೂತು ಕಾಫಿ ಕುಡಿಯುತ್ತಾ ಸಮಯ ಕಳೆದಿದೆ. ಕೆಲವು ಮೀಟರ್‌ಗಳ ಹಿಂದೆ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದೆ ಕುಳಿತಿದೆ.

ವಿಡಿಯೊ ನೋಡಿ:



ಫ್ರಾನ್ಸ್‌ನಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಜನಪರ ಸಂಘಟನೆಗಳು ನಾಯಕರು, ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಂತೂ ಪ್ರತಿಭಟನೆ ಮಿತಿ ಮೀರಿದ್ದು ಬೀದಿಗಳಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು

ಪ್ಯಾರಿಸ್‌ನ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳ ಜತೆಗೆ ಸಂಘರ್ಷಗಳು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗುವಂತಹ, ಬೆಂಕಿ ಹಚ್ಚುವಂತಹ ಘಟನೆಗಳು ಕೂಡ ನಡೆದಿವೆ‌. ಆದರೆ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದರೂ ಪಕ್ಕದ ಕೆಫೆಯೊಂದರ ಹೊರಗಿನ ಟೇಬಲ್‌ನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ, ಹಿಂದೆ ಬೆಂಕಿ ಹತ್ತಿ ಉರಿಯುತ್ತಿದ್ದರೂ ಅಲ್ಲಿಂದ ಕಿಂಚಿತ್ತೂ ಕದಲಿಲ್ಲ.

ಜ್ವಾಲೆಗಳು ಅವರ ಹಿಂದೆ ಬೀದಿಗೆ ಆವರಿಸುತ್ತಿವೆ. ಸುತ್ತಮುತ್ತಲ ಪ್ರದೇಶದಲ್ಲಿ ಅಶಾಂತಿ ಇದ್ದರೂ, ಜೋಡಿ ವಿಚಲಿತವಾಗಿಲ್ಲ. ತಮ್ಮ ಸುತ್ತಲೂ ಏನೂ ನಡೆಯುತ್ತಿಲ್ಲ ಎಂಬಂತೆ ತಮ್ಮ ಸಂಭಾಷಣೆಯನ್ನು ಮುಂದುವರಿಸಿದೆ. ಈ ಗೊಂದಲದ ನಡುವೆಯೂ ಈ ಜೋಡಿ ತೋರಿಸಿದ ಈ ಅದ್ಭುತ ಸಂಯಮ ಮತ್ತು ಸ್ಥೈರ್ಯವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಏನೇ ಆಗಲಿ ಪ್ರತಿಭಟನೆ ಬಗ್ಗೆ ತಲೆಕೆಡಿಸಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.