Viral Video: ಪತ್ನಿಗಾಗಿ ಚಹಾ ತಯಾರಿಸಿದ ವಿದೇಶಿ ಪತಿ; ಆದರ್ಶ ದಂಪತಿ ಎಂದ ನೆಟ್ಟಿಗರು
ಕಂಟೆಂಟ್ ಕ್ರಿಯೇಟರ್ ಸ್ವಾತಿ ನರ್ವಾಲ್ ಇತ್ತೀಚೆಗೆ ಆಕೆಯ ವಿದೇಶಿ ಪತಿ ಆಕೆಗಾಗಿ ಚಹಾ ತಯಾರಿಸಿದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಪತಿ ಮಾಡುವ ಚಹಾ ತುಂಬಾ ಟೇಸ್ಟಿಯಾಗಿದೆ ಎಂದು ಆಕೆ ಹೇಳಿದ್ದಾಳೆ. ಈ ವಿಡಿಯೊ ಈಗ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.


ಮಹಿಳೆಯೊಬ್ಬಳು ಚಹಾ ತಯಾರಿಸಲು ತನ್ನ ಕೈಯನ್ನು ಬಳಸಿದ ತಮಾಷೆಯ ವಿಡಿಯೊವೊಂದು ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕಂಟೆಂಟ್ ಕ್ರಿಯೇಟರ್ ಸ್ವಾತಿ ನರ್ವಾಲ್ ವಿದೇಶಿ ಪತಿ ತನಗಾಗಿ ತಯಾರಿಸಿದ ಚಹಾದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾಳೆ. ಆಕೆಯ ಪತಿ ಶುಂಠಿ, ಏಲಕ್ಕಿ ಸೇರಿಸಿ ರುಚಿಕರವಾದ ಚಹಾ ತಯಾರಿಸಿದ್ದಾನೆ. ಅದರ ರುಚಿ ನೋಡಿ ಈಕೆ ಪತಿ ತನಗಿಂತ ಚೆನ್ನಾಗಿ ಚಹಾ ತಯಾರಿಸಿದ್ದಾನೆ ಎಂದು ಹೇಳಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ನೋಡಿ ಸಾಕಷ್ಟು ಜನ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. "ಅವರು ತುಂಬಾ ಒಳ್ಳೆಯ ಪ್ರೇಮಿ. ನೀವಿಬ್ಬರೂ ಅದೃಷ್ಟವಂತರು. ದೇವರು ನಿಮಗೆ ಪ್ರೀತಿ ಮತ್ತು ನಗುವನ್ನು ದಯ ಪಾಲಿಸಲಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ನನ್ನ ಪತಿ ಕೂಡ ಭಾರತೀಯನಲ್ಲ, ನಮ್ಮ ಮದುವೆಯ ನಂತರ ಅವರು ಪ್ರತಿದಿನ ಬೆಳಗ್ಗೆ ನನಗಾಗಿ ಚಹಾ ಮಾಡುತ್ತಿದ್ದರು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ...! ಈತ ನಿಜಕ್ಕೂ ಆಪದ್ಬಾಂಧವ- ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಈತ ಮಾಡಿದ್ದೇನು ಗೊತ್ತಾ?
ವಿದೇಶಿ ಪತಿ ತನ್ನ ಭಾರತೀಯ ಪತ್ನಿಗಾಗಿ ಭಾರತೀಯ ಸ್ಟೈಲ್‍ನಲ್ಲಿ ಅಡುಗೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಇಂಗ್ಲೆಂಡ್ ಮೂಲದ ಪತಿ ತನ್ನ ಭಾರತೀಯ ಪತ್ನಿಗಾಗಿ ಅಡುಗೆ ಮಾಡಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ದೇಸಿ ಶೈಲಿಯಲ್ಲಿ ಇಡ್ಲಿ, ಚಟ್ನಿ ಮತ್ತು ಮಸಾಲಾ ಟೀ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.