Viral Video: ರೈಲು ಪ್ರಯಾಣದ ವೇಳೆ ಪಿಜ್ಜಾ ಆರ್ಡರ್ ಮಾಡಿದ ವಿದೇಶಿ ಯುವಕ; ಮುಂದೆ ಆಗಿದ್ದೇನು ಗೊತ್ತಾ?
ಟ್ರಾವೆಲ್ ವ್ಲಾಗರ್ ಜಸ್ಟಿನ್ ಮರ್ಫಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಆತ ಮತ್ತು ಆತನ ಸ್ನೇಹಿತರು ಭಾರತದಲ್ಲಿ 14 ಗಂಟೆಗಳ ರೈಲು ಪ್ರಯಾಣದ ಸಮಯದಲ್ಲಿ ಡೊಮಿನೋಸ್‌ನಿಂದ ಚೀಸೀ ಪಿಜ್ಜಾಗಳನ್ನು ಆರ್ಡರ್ ಮಾಡಿ ಸವಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಜಸ್ಟಿನ್ ಮರ್ಫಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ, ತನ್ನ ಮುಂದಿನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ತಲುಪಿಸುವಂತೆ ಡೊಮಿನೋಸ್‌ಗೆ ಕರೆ ಮಾಡಿ ತಿಳಿಸಿದ್ದಾನಂತೆ. ರೈಲು ಮಧುರೈ ಜಂಕ್ಷನ್‌ನಲ್ಲಿ ನಿಲ್ಲುತ್ತಿದ್ದಂತೆ, ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಕಾಯುತ್ತಿರುವ ಡೊಮಿನೊ ಡೆಲಿವರಿ ಬಾಯ್ ಅನ್ನು ನೋಡಿ ಶಾಕ್ ಆಗಿದ್ದಾನಂತೆ. ಯಾಕೆಂದರೆ ರೈಲ್ವೆ ಪ್ಲಾರ್ಟ್‌ಫಾರ್ಮ್‌ಗೆ ಅಷ್ಟು ಬೇಗ ಪಿಜ್ಜಾ ತಂದು ಕೊಡುತ್ತಾರೆ ಎಂಬ ನಂಬಿಕೆ ಆತನಿಗೆ ಇರಲಿಲ್ಲವಂತೆ! ಜಸ್ಟಿನ್ ಹಾಗೂ ಆತನ ಸ್ನೇಹಿತರು ತಮ್ಮ ಪಿಜ್ಜಾಗಳನ್ನು ತೆಗೆದುಕೊಂಡು ಡೆಲಿವರಿ ಏಜೆಂಟ್‌ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಹಾಗೇ ರೈಲಿನೊಳಗೆ ಬಂದು ಚೀಸ್‌ನಿಂದ ತುಂಬಿದ ರುಚಿಕರವಾದ ಪಿಜ್ಜಾ ಸವಿದಿದ್ದಾರೆ.
ಜಸ್ಟಿನ್ ಮರ್ಫಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ, ತನ್ನ ಮುಂದಿನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ತಲುಪಿಸುವಂತೆ ಡೊಮಿನೋಸ್‌ಗೆ ಕರೆ ಮಾಡಿ ತಿಳಿಸಿದ್ದಾನಂತೆ. ರೈಲು ಮಧುರೈ ಜಂಕ್ಷನ್‌ನಲ್ಲಿ ನಿಲ್ಲುತ್ತಿದ್ದಂತೆ, ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಕಾಯುತ್ತಿರುವ ಡೊಮಿನೊ ಡೆಲಿವರಿ ಬಾಯ್ ಅನ್ನು ನೋಡಿ ಶಾಕ್ ಆಗಿದ್ದಾನಂತೆ.ಯಾಕೆಂದರೆ ರೈಲ್ವೆ ಪ್ಲಾರ್ಟ್‌ಫಾರ್ಮ್‌ಗೆ ಅಷ್ಟು ಬೇಗ ಪಿಜ್ಜಾ ತಂದು ಕೊಡುತ್ತಾರೆ ಎಂಬ ನಂಬಿಕೆ ಆತನಿಗೆ ಇರಲಿಲ್ಲವಂತೆ! ಜಸ್ಟಿನ್ ಹಾಗೂ ಆತನ ಸ್ನೇಹಿತರು ತಮ್ಮ ಪಿಜ್ಜಾಗಳನ್ನು ತೆಗೆದುಕೊಂಡು ಡೆಲಿವರಿ ಏಜೆಂಟ್‌ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಹಾಗೇ ರೈಲಿನೊಳಗೆ ಬಂದು ಚೀಸ್‌ನಿಂದ ತುಂಬಿದ ರುಚಿಕರವಾದ ಪಿಜ್ಜಾ ಸವಿದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ಇಲ್ಲಿಯವರೆಗೆ, ಈ ವಿಡಿಯೊ ಈಗಾಗಲೇ 1.5 ಮಿಲಿಯನ್ ವ್ಯೂವ್ಸ್ ಗಳಿಸಿದೆ. "ಭಾರತದಲ್ಲಿ ಮಾತ್ರ ಈ ರೀತಿ ನಂಬಿಕೆ ಉಳಿಯಲು ಸಾಧ್ಯ" ಎಂದು ಒಬ್ಬರು ಬರೆದಿದ್ದಾರೆ. "ನೀವು ಭಾರತೀಯ ರೈಲ್ವೆಯಲ್ಲಿ ಈ ರೀತಿಯ ಖುಷಿಯ ಅನುಭವ ಪಡೆಯುತ್ತಿರುವುದನ್ನು ನೋಡಲು ಸಂತೋಷವಾಯಿತು" ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
"ನೀವು ಅವರಿಗೆ ಕರೆ ಮಾಡಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಸಾಕು, ಅವರು ನಿಮ್ಮ ಸೀಟಿನ ಬಳಿ ತಲುಪಿಸುತ್ತಾರೆ" ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. “ಭಾರತ ಮತ್ತು ಭಾರತೀಯರು ನಿಮ್ಮನ್ನು ಯಾವಾಗ ಬೇಕಾದರೂ ಅಚ್ಚರಿಗೊಳಿಸಬಹುದು" ಎಂದು ಮತ್ತೊಬ್ಬರು ಕಾಮೆಂಟ್‍ನಲ್ಲಿ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವರದಿ ಮಾಡ್ತಿದ್ದ ರಿಪೋರ್ಟರ್ ಮೇಲೆ ಗುಂಡಿನ ದಾಳಿ; ಶಾಕಿಂಗ್ ವಿಡಿಯೊ ಇಲ್ಲಿದೆ
ಭಾರತದ ರೈಲ್ವೆ ವ್ಯವಸ್ಥೆ ಬಗ್ಗೆ, ಅದರಲ್ಲಿನ ಟಾಯ್ಲೆಟ್ ಬಗ್ಗೆ ಸಾಕಷ್ಟು ವಿದೇಶಿಗರು ನಕಾರಾತ್ಮಕ ವಿಡಿಯೊ ಶೇರ್ ಮಾಡಿದ್ದರು. ಇದೀಗ ಇಂಥದ್ದೊಂದು ವಿಡಿಯೊ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.