ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೇಗವಾಗಿ ಚಲಿಸುವ ಬಸ್‌ನ ಮುಂದೆ ಅಚಾನಕ್ ಆಗಿ ಎದುರು ಬಂದ ಬಾಲಕಿ; ಎದೆ ಝಲ್‌ ಎನಿಸುವ ದೃಶ್ಯ ವೈರಲ್‌

Viral Video: ವೇಗವಾಗಿ ಚಲಿಸುವ ಬಸ್‌ನ ಮುಂದೆ ಬಾಲಕಿಯೊಬ್ಬಳು ಅಚಾನಕ್ ಆಗಿ ಎಂಟ್ರಿ ಕೊಟ್ಟಿ ದ್ದಾಳೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣ ವಾಗಿದೆ. ಅನೇಕರು ಚಾಲಕನ ಜಾಗರೂಕತೆ ಯನ್ನು ಶ್ಲಾಘಿಸುತ್ತಿದ್ದರೆ, ಕೆಲವರು ಮಗುವಿನ ಪೋಷಕರನ್ನು ಅಜಾಗರೂಕತೆಯ ಬಗ್ಗೆ ದೂಷಿಸಿದ್ದಾರೆ.

ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕಿ

ಕೋಝಿಕ್ಕೋಡ್,ಫೆ.3: ಇತ್ತೀಚೆಗೆ ವಾಹನಗಳ ಬಳಕೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅಂತೆಯೇ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕೊಡಿಯತ್ತೂರ್ ಎಂಬಲ್ಲಿ ಭಯಾನಕ ಘಟನೆಯೊಂದು ಕಂಡುಬಂದಿದೆ. ವೇಗವಾಗಿ ಚಲಿಸುವ ಬಸ್‌ನ ಮುಂದೆ ಬಾಲಕಿಯೊಬ್ಬಳು ಅಚಾನಕ್ ಆಗಿ ಎಂಟ್ರಿಕೊಟ್ಟಿದ್ದಾಳೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು (Viral Video) ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕರು ಚಾಲಕನ ಜಾಗರೂಕತೆ ಯನ್ನು ಶ್ಲಾಘಿಸುತ್ತಿದ್ದರೆ, ಕೆಲವರು ಮಗುವಿನ ಪೋಷಕರನ್ನು ಅಜಾಗರೂಕತೆಯ ಬಗ್ಗೆ ದೂಷಿಸಿದ್ದಾರೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಬಸ್ ವೊಂದು ವೇಗವಾಗಿ ಬರುತ್ತಿದ್ದಂತೆ ಬಾಲಕಿ ಈ ಸಮಯದಲ್ಲೇ ಪಾಸ್ ಆಗಿದ್ದಾಳೆ. ಸಿಸಿಟಿವಿ ಮಾಹಿತಿ ಪ್ರಕಾರ, ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋರಿಕ್ಷಾದ ಬಳಿಯಿಂದ ಬಾಲಕಿಯೊಬ್ಬಳು ದಿಢೀರನೆ ರಸ್ತೆಯ ಮಧ್ಯಕ್ಕೆ ಓಡಿ ಬಂದಿದ್ದಾಳೆ.. ಇದೇ ಸಮಯದಲ್ಲಿ ಬಸ್ಸೊಂದು ವೇಗವಾಗಿ ಬಂದಿದೆ.‌ ಇದರಿಂದ ಎಚ್ಚೆತ್ತುಕೊಂಡ ಚಾಲಕ ತಕ್ಷಣವೇ ಬಸ್ಸನ್ನು ಪಕ್ಕಕ್ಕೆ ತಿರುಗಿಸಿದ್ದಾರೆ.

ವಿಡಿಯೋ ನೋಡಿ:



ವಿಡಿಯೊದಲ್ಲಿ ಬಾಲಕಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದ ಹಿಂದಿನಿಂದ ಇದ್ದಕ್ಕಿದ್ದಂತೆ ವೇಗವಾಗಿ ಚಲಿಸುವ ಬಸ್‌ನ ಮುಂದೆ ರಸ್ತೆಯ ಮಧ್ಯಕ್ಕೆ ಬರುತ್ತಿರುವುದು ಕಂಡುಬಂದಿದೆ. ಅದೃಷ್ಟ ವಶಾತ್, ಬಸ್ಸಿನ ಚಾಲಕನು ಮಗುವನ್ನು ಉಳಿಸಲು ತಕ್ಷಣವೇ ವಾಹನದ ದಿಕ್ಕನ್ನು ಬದಲಾಯಿಸಿ ದ್ದಾನೆ. ಇದರಿಂದಾಗಿ ಯಾವುದೇ ಅಪಘಾತ ಸಂಭವಿಸಲಿಲ್ಲ..

Viral News: ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್

ಸದ್ಯ ಮಗು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದೆ. ಅನೇಕರು ಪೋಷಕರ ನಿರ್ಲಕ್ಷ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಬಸ್ ವೇಗವಾಗಿದ್ದರೂ ಚಾಲಕ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಮತ್ತೊಬ್ಬರು ರಸ್ತೆ ಬದಿಯಲ್ಲಿ ಮಕ್ಕಳನ್ನು ಬಿಡುವಾಗ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದಿದ್ದಾರೆ.