Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ, ವಿಡಿಯೋ ನೋಡಿ
ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕುಡಿದು ವಾಹನ ಚಲಾಯಿಸಿದ್ದ ಘಟನೆ ಲಕ್ನೋದಲ್ಲಿ ನಡೆದಿದೆ. ಹೊಸ ವರ್ಷಾಚರಣೆಯ ದಿನದಂದೆ ಲಕ್ನೋದ ಹಜರತ್‌ಗಂಜ್ ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕುಡಿದು ವಾಹನ ಚಲಾಯಿಸಿ ಸಂಚಾರ ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದಿದ್ದಾರೆ. ಬಳಿಕ ಅದನ್ನು ಪ್ರಶ್ನಿಸಲು ಬಂದ ಇತರ ಅಧಿಕಾರಿಗಳೊಂದಿಗೆ ಪೊಲೀಸ್ ಇನ್ ಸ್ಪೆಕ್ಟರ್ ವಾಗ್ವಾದ ನಡೆಸಿದ್ದಾನೆ.
ಕುಡಿದು ಕಾರು ಚಲಾಯಿಸಿದ ಸಬ್ ಇನ್ಸ್‌ಪೆಕ್ಟರ್ -
ಲಕ್ನೋ, ಜ.2: ಬಹುತೇಕ ನಗರ ಪ್ರದೇಶದಲ್ಲಿ ಹೊಸ ವರ್ಷಕ್ಕೆ ಪಾರ್ಟಿ, ಡಿಜೆ ಡ್ಯಾನ್ಸ್ ಇತ್ಯಾದಿಗಳು ನಡೆಯುವುದು ಸಾಮಾನ್ಯವಾಗಿದೆ. ಹದಿಹರೆಯದ (Viral Video) ಯುವಕ ಯುವತಿಯರಿಂದ ಹಿಡಿದು ವಯೋ ವೃದ್ಧರ ತನಕವು ಕಂಠ ಪೂರ್ತಿ ಕುಡಿದು ಹೊಸವರ್ಷವನ್ನು ಸಂಭ್ರಮಿಸುವ ಸಂಖ್ಯೆ ಹೆಚ್ಚಾಗಿದೆ. ಕುಡಿದ ಮತ್ತಿನಲ್ಲಿ ಗಾಡಿ ಚಲಾಯಿಸಿ ಅಪಘಾತ ನಡೆಯಬಹುದು ಎಂಬ ಕಾರಣಕ್ಕೆ ಪೊಲೀಸರು ಈ ವೇಳೆ ರಸ್ತೆಗಳಲ್ಲಿ ನಿಂತು ಪ್ರತಿ ಗಾಡಿಗಳನ್ನು ಚೆಕ್ ಮಾಡಿ ಕುಡಿದು ಗಾಡಿ ಚಲಾಯಿಸಿದ್ದವರಿಗೆ ದಂಡ ವಿಧಿಸಿದ್ದು ಇದೆ. ಆದರೆ ಇದೀಗ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕುಡಿದು ವಾಹನ ಚಲಾಯಿಸಿದ್ದ ಘಟನೆ ಲಕ್ನೋದಲ್ಲಿ ನಡೆದಿದೆ. ಹೊಸ ವರ್ಷಾಚರಣೆಯ ದಿನದಂದೆ ಲಕ್ನೋದ (Uttar Pradesh) ಹಜರತ್‌ಗಂಜ್ ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕುಡಿದು ವಾಹನ ಚಲಾಯಿಸಿ ಸಂಚಾರ ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದಿದ್ದಾರೆ. ಬಳಿಕ ಅದನ್ನು ಪ್ರಶ್ನಿಸಲು ಬಂದ ಇತರ ಅಧಿಕಾರಿ ಗಳೊಂದಿಗೆ ಪೊಲೀಸ್ ಇನ್ ಸ್ಪೆಕ್ಟರ್ ವಾಗ್ವಾದ ನಡೆಸಿದ್ದಾನೆ. ಇವೆಲ್ಲ ದೃಶ್ಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಡಿ. 31ರ ತಡರಾತ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಾರೆ. ಈ ಘಟನೆ ಗುರುವಾರ ಬೆಳಗ್ಗೆ 12.30ರ ಸುಮಾರಿಗೆ ಸಂಭವಿಸಿದ್ದು ಜನಸಂದಣಿಯನ್ನು ನಿಯಂತ್ರಿ ಸಲು ಪೊಲೀಸ್ ಅಧಿಕಾರಿಗಳು ಎಲ್ಲ ವಾಹನವನ್ನು ತಪಾಸಣೆ ಮಾಡಿದ್ದಾರೆ. ಆಗ ಅಮಿತ್ ಜೈಸ್ವಾಲ್ ಎಂಬ ಹೆಸರಿನ ವ್ಯಕ್ತಿಯು ಮದ್ಯ ಸೇವನೆ ಮಾಡಿ ಗಾಡಿ ಓಡಿಸಿ ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡದಿದ್ದು ಪೊಲೀಸರಿಗೆ ತಿಳಿದು ಬಂದಿದೆ. ಅವರ ಕಾರಿನಿಂದ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳ ಜೊತೆಗೆ ಆತ ಮನ ಬಂದಂತೆ ವರ್ತಿಸಿದ್ದಾನೆ.
ವಿಡಿಯೋ ನೋಡಿ:
#लखनऊ:- नशे में धुत एक दरोगा ने जमकर हंगामा किया। पहले बैरिकेडिंग पर कार चढ़ा दी,फिर सब-इंस्पेक्टर पर गाड़ी चढ़ाने की कोशिश की।मौके पर मौजूद डीसीपी ट्रैफिक ने जब फटकार लगाई तो दरोगा उनसे भी उलझ गया। इसके बाद डीसीपी ट्रैफिक ने नशेबाज दरोगा को पुलिस जीप में बैठवाकर थाने भिजवाया। pic.twitter.com/Lcd4TrLwZx
— Rohit Nandan Mishra (@RohitNandanMis3) January 1, 2026
ಅಧಿಕಾರಿಗಳ ಪ್ರಕಾರ, ಇನ್ಸ್‌ಪೆಕ್ಟರ್ ತಮ್ಮ ಖಾಸಗಿ ಕಾರಿನಲ್ಲಿ ಸಿವಿಲ್ ಡ್ರೆಸ್ ನಲ್ಲಿ ತೆರಳಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಸಂಚಾರಿ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಮಾರ್ಗ ಬದಲಿಸಲಾಗಿದ್ದು ಬೇರೆ ಮಾರ್ಗದಲ್ಲಿ ತೆರಳುವಂತೆ ಸಿಬಂದಿ ತಿಳಿಸಿದ್ದು ಅದಕ್ಕೆ ಈತ ವಿರೋಧ ವ್ಯಕ್ತಪಡಿಸಿದ್ದಾನೆ. ತಾನು ಒಬ್ಬರು ಅಧಿಕಾರಿ ಎಂದು ಹೇಳಿ ನಿಷಿದ್ಧ ಇದ್ದ ಮಾರ್ಗಕ್ಕೆ ತೆರಳಿದ್ದಾನೆ. ಅದಕ್ಕೆ ಸಿಬಂದಿ ಮತ್ತು ವಾಹನ ಚಾಲಕನ ನಡುವೆ ಕೆಲವು ಹೊತ್ತುಗಳ ಕಾಲ ವಾಗ್ವಾದ ಆಗಿದೆ. ಆತನು ಕೂಗಾಡುತ್ತಿದ್ದ, ಅಧಿಕಾರಿಗಳನ್ನು ಬೆದರಿಸುತ್ತಿದ್ದನು ಎಂದು ತಿಳಿಸಿದ್ದಾರೆ.
Viral Video: ಪಾರ್ಕ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಣ್ಣ-ತಂಗಿಯನ್ನು ತಡೆದ ಪೊಲೀಸ್ ಅಧಿಕಾರಿ: ನೆಟ್ಟಿಗರಿಂದ ತರಾಟೆ
ಬಳಿಕ ತನ್ನ ಕಾರು ಏರಿ ಅಧಿಕಾರಿಗಳ ಮಾತನ್ನು ಮೀರಿ ಮುಂದೆ ಹೋಗಲು ಪ್ರಯತ್ನಿಸಿ ಸ್ಥಳದಲ್ಲಿ ಸಂಚಾರವನ್ನು ನಿರ್ವಹಿಸುತ್ತಿದ್ದ ಸಿಐ ಅಶುತೋಷ್ ತ್ರಿಪಾಠಿ ಅವರಿಗೆ ಡಿಕ್ಕಿ ಹೊಡೆದು ಬಳಿಕ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದಿದ್ದಾರೆ. ಸಿಐ ಅಶುತೋಷ್ ತ್ರಿಪಾಠಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸಂಚಾರಿ ಪೊಲೀಸ್ ಡಿಸಿಪಿ ಕಮಲೇಶ್ ದೀಕ್ಷಿತ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಇನ್ಸ್‌ಪೆಕ್ಟರ್ ಡಿಸಿಪಿ ಜೊತೆಗೂ ಅನುಚಿತವಾಗಿ ವರ್ತಿಸಿದರು ಮತ್ತು ಬೆದರಿಕೆ ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನುಅಮಿತ್ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಬಾರಾಬಂಕಿ ಪೊಲೀಸ್ ಲೈನ್ಸ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆತನ ವಾಹನದಿಂದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ಬಂಧಿಸಿ, ಹಜರತ್‌ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಆ ಬಳಿಕ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದ್ದು ಸೇವೆಯಲ್ಲಿರುವ ಅಧಿಕಾರಿ ಯೊಬ್ಬರ ಕುಡಿದು ವಾಹನ ಚಲಾಯಿಸುವುದು ಮತ್ತು ದುರ್ನಡತೆಯ ಬಗ್ಗೆ ಗಂಭೀರ ಕಳವಳ ವನ್ನು ಹುಟ್ಟುಹಾಕುವಂತೆ ಮಾಡಿದೆ. ಸಾರ್ವಜನಿಕ ಸುರಕ್ಷತಾ ಕರ್ತವ್ಯಗಳ ಸಮಯದಲ್ಲಿ ಯಾವುದೇ ಅಧಿಕಾರಿ ಕಾನೂನಿನ ನಿಯಮ ಮೀರುವಂತಿಲ್ಲ ಹೀಗಾಗಿ ತಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.