Viral Video: ಬೀದಿ ನಾಯಿಗೆ ಮನಬಂದಂತೆ ಥಳಿಸಿದ ವ್ಯಕ್ತಿ; ವಿಡಿಯೊ ವೈರಲ್ ಬೆನ್ನಲ್ಲೇ ಭಾರಿ ಆಕ್ರೋಶ
Man brutally assaulting stray dog: ವ್ಯಕ್ತಿಯೊಬ್ಬ 16 ವರ್ಷದ ಬೀದಿ ನಾಯಿಯ ಮೇಲೆ ದಪ್ಪ ಮರದ ಹಲಗೆಯಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಮುಂಬೈನ ಕೋಪರ್ ಖೈರಾನೆ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶ್ವಾನವನ್ನು ಅಮಾನುಷವಾಗಿ ಥಳಿಸಿದ ಕಿಡಿಗೇಡಿಗೆ ಸ್ಥಳೀಯರು ಗೂಸಾ ನೀಡಿದ್ದಾರೆ ಎನ್ನಲಾಗಿದೆ.


ಮುಂಬೈ: ವ್ಯಕ್ತಿಯೊಬ್ಬ 16 ವರ್ಷದ ಬೀದಿ ನಾಯಿಯ ಮೇಲೆ ದಪ್ಪ ಮರದ ಹಲಗೆಯಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಮುಂಬೈನ ಕೋಪರ್ ಖೈರಾನೆ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯವನ್ನು ಮೊಹಮ್ಮದ್ ರೈಜ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ, ಆ ವ್ಯಕ್ತಿ ನಾಯಿಯನ್ನು ಮರದ ಹಲಗೆಯಿಂದ ಹಲವು ಬಾರಿ ಹೊಡೆಯುವುದನ್ನು ನೋಡಬಹುದು. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗುತ್ತಿದ್ದಂತೆ, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಮುಂಬೈ ಯುನಿಟ್ 2 ರ ಪ್ರಯತ್ನಗಳನ್ನು ರೈಜ್ ಶ್ಲಾಘಿಸಿದ್ದಾರೆ.
ಶ್ವಾನಕ್ಕೆ ಹಲ್ಲೆ ಮಾಡಿದ ವ್ಯಕ್ತಿಗೆ ಸ್ಥಳೀಯರು ಗೂಸಾ ನೀಡಿದ್ದಾರೆ ಎನ್ನಲಾಗಿದೆ. ವಿಜಯ್ ರಂಗರೆ ನೇತೃತ್ವದ ರೈಜ್, ಆದಿತ್ಯ, ತರುಣ್ ಮತ್ತು ಸಂಕೇತ್ ಭಟ್ ಅವರನ್ನೊಳಗೊಂಡ ತಂಡವು ತ್ವರಿತವಾಗಿ ಕಾರ್ಯನಿರ್ವಹಿಸಿ, ಆರೋಪಿಯನ್ನು ಪತ್ತೆಹಚ್ಚಿತು. ನಂತರ ಆತನನ್ನು ತರಾಟೆಗೆ ತೆಗೆದುಕೊಂಡು ನಾಯಿಯನ್ನು ರಕ್ಷಿಸಲಾಯಿತು. ಶ್ವಾನ ಈಗ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ.
ವಿಡಿಯೊ ವೀಕ್ಷಿಸಿ:
(Action-Reaction Kinda Kalesh) A Guy attacks on Street Dog with Stick, Got thrashed by a Group later
— Ghar Ke Kalesh (@gharkekalesh) August 4, 2025
https://t.co/1WQyuBNE5E
ನಾಯಿಗೆ ಹಲ್ಲೆ ಮಾಡಿದಾತನ ತಾಯಿಯೂ ಆತನನ್ನು ಸಮರ್ಥಿಸಿಕೊಂಡಿದ್ದಾಳೆ. ಆಕೆಯ ವರ್ತನೆ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್ನ ರೂಮ್ ಒಳಗೆ ಕಟ್ಟಿ ಹಾಕಿದ ವೈಷ್ಣವ್-ಕುಸುಮಾ
ಬಡ ನಾಯಿಗೆ ಹೊಡೆದಂತೆ ಅವನಿಗೂ ಥಳಿಸಬೇಕು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನು ನಾಯಿಯನ್ನು ತುಂಬಾ ಹೊಡೆದಿದ್ದಾನೆ. ನಾಯಿ ಚೆನ್ನಾಗಿದೆಯೇ? ಎಂದು ಮತ್ತೊಬ್ಬರು ನಾಯಿಯ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಆ ವ್ಯಕ್ತಿಯನ್ನು ಗುರುತಿಸಿ ಸಾರ್ವಜನಿಕವಾಗಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಂಬೆಯ ಬೀದಿ ನಾಯಿ ಇನ್‌ಸ್ಟಾಗ್ರಾಮ್ ಗ್ರೂಪ್‍ನಲ್ಲಿ ನಾಯಿ ಈಗ ಸುರಕ್ಷಿತವಾಗಿದೆ ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹಂಚಿಕೊಂಡಿದೆ. “ತೀವ್ರವಾಗಿ ಥಳಿತಕ್ಕೊಳಗಾದ ಶ್ವಾನ ಈಗ ಸುರಕ್ಷಿತವಾಗಿದೆ. ಡಾ. ಕಾರ್ತಿಕ್ ಅಯ್ಯರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. ಅದು ಬೇಗನೆ ಚೇತರಿಸಿಕೊಳ್ಳುತ್ತಿದೆ. ಅವರು ಅದಕ್ಕೆ ಅಗತ್ಯವಿರುವ ಎಲ್ಲಾ ಕಾಳಜಿ, ಪ್ರೀತಿ ಮತ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅದು ಶೀಘ್ರದಲ್ಲೇ ಬೀದಿಯಲ್ಲಿರುವ ತನ್ನ ಎಂದಿನ ಸ್ಥಳಕ್ಕೆ ಮರಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.