Vastu Tips: ಕನಸಿನ ಉದ್ಯೋಗ ಪಡೆಯಲು ಈ ನಿಯಮಗಳನ್ನು ಪಾಲಿಸಿ
ಉದ್ಯೋಗ ಸಂದರ್ಶನಕ್ಕೆ ಹೋಗುವ ಭಯ, ಆತಂಕ ಕಾಡುವುದು ಸಹಜ. ನಾವು ಎಷ್ಟೇ ತಯಾರಿ ನಡೆಸಿದರೂ ಕೆಲವೊಮ್ಮೆ ಸಾಲುವುದಿಲ್ಲ ಎನ್ನುವ ಅಭಿಪ್ರಾಯಕ್ಕೆ ಬರುತ್ತೇವೆ. ಕೆಲವರಂತೂ ನೂರಾರು ಸಂದರ್ಶನ ಎದುರಿಸಿದರೂ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವಲ್ಲಿ ಸೋಲುತ್ತಾರೆ. ಇದಕ್ಕೆ ಕಾರಣ ಏನು, ವಾಸ್ತು ಈ ಕುರಿತು ಏನು ಹೇಳಿದೆ ? ಈ ಕುರಿತು ಇಲ್ಲಿದೆ ಮಾಹಿತಿ.


ಬೆಂಗಳೂರು: ಕನಸಿನ ಉದ್ಯೋಗ (Dream job) ಪಡೆಯುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನವರು ಸಿಕ್ಕಿದ್ದೇ ಪಂಚಾಮೃತ ಎಂದುಕೊಂಡು ವೃತ್ತಿ ಬದುಕನ್ನು ಆರಂಭಿಸುತ್ತಾರೆ. ಇನ್ನು ಕೆಲವರು ತಮಗಿಷ್ಟವಾದ ಉದ್ಯೋಗವೇ ಬೇಕು ಎಂದುಕೊಂಡು ಎಷ್ಟೋ ಬಾರಿ ಸಂದರ್ಶನ (Interview) ಕೊಟ್ಟರೂ ವಿಫಲರಾಗುತ್ತಾರೆ. ಇದಕ್ಕೆಲ್ಲ ವಾಸ್ತು ಸಮಸ್ಯೆಗಳೂ (Vastu tips dream job) ಕಾರಣವಾಗಿರುತ್ತದೆ. ಉದ್ಯೋಗ ಸಂದರ್ಶನಕ್ಕೆ ಹೋಗುವ ಮೊದಲು ಎರಡು ವಾಸ್ತು ಪರಿಹಾರಗಳನ್ನು (Vastu for interview) ಮಾಡುವುದರಿಂದ ನಮಗೆ ಬೇಕಾದ ಉದ್ಯೋಗವನ್ನು ದಕ್ಕಿಸಿಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.
ಉದ್ಯೋಗ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೆಲವು ವಾಸ್ತು ಪರಿಹಾರಗಳನ್ನು ಅನುಸರಿಸುವುದು ಮುಖ್ಯ. ಹೀಗೆ ಮಾಡುವುದರಿಂದ ಬಯಸಿದ ಉದ್ಯೋಗ ನಮ್ಮದಾಗುತ್ತದೆ ಎನ್ನುತ್ತಾರೆ ಪಂಡಿತ್ ಜನ್ಮೇಶ್ ದ್ವಿವೇದಿ. ಪ್ರತಿಯೊಬ್ಬರೂ ಉತ್ತಮ ಉದ್ಯೋಗವನ್ನು ಬಯಸುತ್ತಾರೆ. ಆದರೆ ಅಂತಹ ಕೆಲಸವನ್ನು ಸುಲಭವಾಗಿ ಪಡೆಯುವುದು ಬಹಳ ಅಪರೂಪ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದರೆ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಜೊತೆಗೆ ಕೆಲವು ಸರಳ ವಾಸ್ತು ಪರಿಹಾರಗಳನ್ನು ಕೂಡ ಮಾಡಿ. ಇದರಿಂದ ಸಹಾಯವಾಗುತ್ತದೆ ಎನ್ನುತ್ತಾರೆ ಅವರು.
ದೀಪ ಬೆಳಗಿಸಿ
ವಾಸ್ತು ಶಾಸ್ತ್ರವು ಈಶಾನ್ಯ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸೈಡ್. ಈ ದಿಕ್ಕು ಜ್ಞಾನ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಂಕೇತಿಸುತ್ತದೆ. ಸಂದರ್ಶನಕ್ಕೆ ಹೋಗುವ ಮೊದಲು ಬೆಳಗ್ಗೆ ಸ್ನಾನ ಮಾಡಿ ಈ ದಿಕ್ಕಿಗೆ ಮುಖ ಮಾಡಿ ತುಪ್ಪ ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ನಿಮ್ಮ ಹೃದಯದ ಆಸೆಯನ್ನು ದೇವರಿಗೆ ವ್ಯಕ್ತಪಡಿಸಿ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು, ಮಾನಸಿಕ ಶಾಂತಿ ಸಿಗುತ್ತದೆ. ಸಂದರ್ಶನದಲ್ಲಿ ಯಶಸ್ಸು ದೊರೆಯಲು ಸಹಾಯ ಮಾಡುತ್ತದೆ.
ಈ ವಸ್ತುಗಳು ಜೇಬಿನಲ್ಲಿರಲಿ
ಸಂದರ್ಶನಕ್ಕೆ ಹೊರಡುವಾಗ ಐದು ಒಣಗಿದ ತುಳಸಿ ಎಲೆಗಳು ಅಥವಾ ಕಪ್ಪು ಎಳ್ಳು ಬೀಜಗಳ ಸಣ್ಣ ಕಟ್ಟುಗಳನ್ನು ಜೇಬಿನಲ್ಲಿ ಇರಿಸಿ. ತುಳಸಿ ಶುದ್ಧತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಕಪ್ಪು ಎಳ್ಳು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಇವುಗಳು ಕೆಟ್ಟ ಕಣ್ಣುಗಳು ನಿಮ್ಮ ಮೇಲೆ ಬೀಳುವುದನ್ನು ತಪ್ಪಿಸಿ ಅದೃಷ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: Vastu Tips: ಈ ಐದು ಫೋಟೋಗಳನ್ನು ಮನೆಯಲ್ಲಿ ಎಂದಿಗೂ ಇಡಬೇಡಿ
ಇವುಗಳನ್ನು ಪಾಲಿಸಿ
ಸಂದರ್ಶನದ ದಿನದಂದು ತಿಳಿ ಹಳದಿ ಅಥವಾ ಕೆನೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಈ ಬಣ್ಣಗಳು ಸೌಮ್ಯತೆ ಮತ್ತು ಆಕರ್ಷಣೆಯನ್ನು ಸಂಕೇತಿಸುತ್ತವೆ. ಇನ್ನು ಮನೆಯಿಂದ ಸಂದರ್ಶನಕ್ಕೆ ಹೊರಡುವಾಗ ಮೊಸರು ಮತ್ತು ಬೆಲ್ಲವನ್ನು ತಿನ್ನುವುದು ಶುಭವಾಗಿದೆ ಎನ್ನುತ್ತಾರೆ ತಜ್ಞರು. .