ಭುವನೇಶ್ವರ, ಮೇ 4: ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು ಇದಕ್ಕೆ ಯಾವುದೇ ರೀತಿಯ ಕಡಿವಾಣ ಬಿದ್ದಿಲ್ಲ. ಈ ನಡುವೆ ಒಡಿಶಾದ ಭುವನೇಶ್ವರದಲ್ಲಿನ ಅಘಾತಕಾರಿ ದೃಶ್ಯವೊಂದು ವೈರಲ್ (Viral News) ಆಗಿದೆ. ವ್ಯಕ್ತಿಯೊಬ್ಬ ಚಲಿಸುವ ಬೈಕ್‌ನಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ. ಒಂದು ಕೈಯಲ್ಲಿ ಬೈಕ್ ಚಲಾಯಿಸುತ್ತ ಮತ್ತೊಂದು ಕೈಯಿಂದ ಯುವತಿಯ ಕೂದಲನ್ನು ಎಳೆಯುತ್ತ ಹಲ್ಲೆ ಮಾಡಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೃಶ್ಯವು ಹಿಂಸಾಚಾರದ ಕ್ರೂರತೆಯನ್ನು ಪ್ರದರ್ಶಿಸಿದೆ. ಭುವನೇಶ್ವರದ ಸ್ಟುಡಿಯೋ ಸ್ಕ್ವೇರ್ ಬಳಿ ಈ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದೆ. ಓರ್ವ ವ್ಯಕ್ತಿ ಒಂದು ಕೈಯಲ್ಲಿ ಬೈಕ್ ನಿಯಂತ್ರಿಸುತ್ತ ಇನ್ನೊಂದು ಕೈಯಿಂದ ಹಿಂದೆ ಕುಳಿತಿದ್ದ ಮಹಿಳೆಯ ಕೂದಲನ್ನು ಪದೇ ಪದೆ ಎಳೆದು ಗುದ್ದಿದ್ದಾನೆ. ಸಾರ್ವಜನಿಕ ರಸ್ತೆಯಲ್ಲೇ ಯಾವುದೇ ಭಯವಿಲ್ಲದೆ ಯುವಕ ಈ ಕೃತ್ಯವನ್ನು ಎಸಗಿದ್ದಾನೆ.
ವಿಡಿಯೊ ನೋಡಿ:
ವಿಡಿಯೊವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು , ಓಡಿಶಾ ಪೊಲೀಸರಿಗೆ ಹಲವರು ಟ್ಯಾಗ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕಿರುಕುಳ ನೀಡುವ ವ್ಯಕ್ತಿ ವೈಯಕ್ತಿಕವಾಗಿ ಎಷ್ಟು ಹಿಂಸೆ ನೀಡಿರಬಹುದು? ಎಂದು ಅನೇಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕ್ಲಿಪ್‌ನಲ್ಲಿ, ಪುರುಷನು ಮಹಿಳೆಯ ತಲೆ ಮತ್ತು ಕುತ್ತಿಗೆಗೆ ಹೊಡೆಯುವುದನ್ನು ಕಾಣಬಹುದು.
ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
ಅನೇಕರು ಯುವಕನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು ಘಟನೆಯನ್ನು ರೆಕಾರ್ಡ್ ಮಾಡುವ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಯುವತಿಯನ್ನು ರಕ್ಷಿಸುವ ಬದಲು ವಿಡಿಯೊ ಮಾಡುತ್ತಾ ಸಮಯ ಕಳೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕನಿಗೆ ಇದೇ ರೀತಿಯ ಶಿಕ್ಷೆ ವಿಧಿಸಬೇಕೇಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಬ್ಬರು ಯುವತಿ ಈತನಿಂದಾಗಿ ಎಷ್ಟು ಹಿಂಸೆ ಅನುಭವಿಸರಬಹುದು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.