Viral Video: ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್ಫ್ಲುಯೆನ್ಸರ್
Viral Video: ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರು ಒಂದು ಲಕ್ಷ ರುಪಾಯಿ ಬಾಡಿಗೆ ನೀಡಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ್ದಾರೆ. ಆದರೆ ಅವರು ಇದರಿಂದ ಅಪಾರ ಪ್ರಮಾಣದ ಆರ್ಥಿಕ ನಷ್ಟ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್ಫ್ಲುಯೆನ್ಸರ್ -
ನವದೆಹಲಿ, ಏ. 18: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ನಾನಾ ಸಾಹಸಕ್ಕೆ ಮುಂದಾಗುತ್ತಲೇ ಇರುತ್ತಾರೆ. ಅದರಂತೆ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರು ಒಂದು ಲಕ್ಷ ರುಪಾಯಿ ಬಾಡಿಗೆ ನೀಡಿ ರೋಲ್ಸ್ ರಾಯ್ಸ್ ಕಾರನ್ನು ಚಹಾ ಅಂಗಡಿಯಂತೆ ವಿನ್ಯಾಸಗೊಳಿಸಿದ್ದರು. ಆದರೆ ಅವರು ಇದರಿಂದ ಅಪಾರ ಪ್ರಮಾಣದ ಆರ್ಥಿಕ ನಷ್ಟ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಸೋಷಿಯಲ್ ಮೀಡಿಯಾ ಖ್ಯಾತಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಯಾವಾಗಲೂ ಆರ್ಥಿಕ ಯಶಸ್ಸನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಡಿಲಕ್ಸ್ ಭೈಯಾಜಿ ಎಂದು ಕರೆಯಲ್ಪಡುವ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ದುಬಾರಿ ಕಾರನ್ನು ಅಸಾಂಪ್ರದಾಯಿಕ ಅಂಗಡಿಯಾಗಿ ಪರಿವರ್ತಿಸುವ ಮೂಲಕ ಆನ್‌ಲೈನ್‌ನಲ್ಲಿ ಗಮನ ಸೆಳೆದರು. ಅವರು ಸುಮಾರು 1 ಲಕ್ಷ ರುಪಾಯಿ ಬಾಡಿಗೆ ನೀಡಿ ರೋಲ್ಸ್ ರಾಯ್ಸ್ ಕಾರನ್ನು ತಂದಿದ್ದರು.
ವಿಡಿಯೊ ನೋಡಿ:
ಈ ಸ್ಟಾಲ್ ಸುತ್ತಲೂ ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಭಾರತದ ಬೀದಿ ಬದಿಯ ಚಾಯ್ ಸಂಸ್ಕೃತಿಯನ್ನು ಐಷಾರಾಮಿ ಬ್ರ್ಯಾಂಡಿಂಗ್‌ನೊಂದಿಗೆ ಸಂಯೋಜಿಸಲು ಸಂಪೂರ್ಣ ಸೆಟಪ್ ವಿನ್ಯಾಸ ಮಾಡಲಾಗಿತ್ತು. ಕೆಲವರು ಈ ಚಹಾ ಅಂಗಡಿಗೆ ಆಕರ್ಷಿತರಾಗಿದ್ದು, ಕೇಸರಿ ಮಿಶ್ರಿತ ಚಹಾವನ್ನು ಐಷಾರಾಮಿ ಕಾರಿನೊಳಗೆ ಆನಂದಿಸಿದ್ದಾರೆ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
ಒಂದು ಕಪ್ ಚಹಾಕ್ಕೆ 300 ರುಪಾಯಿ ಮೊತ್ತ ನಿಗದಿಪಡಿಸಲಾಗಿತ್ತು. ಇದರ ಮುಖ್ಯ ಆಕರ್ಷಣೆ ಸಾಮಾನ್ಯ ಜನರಿಗೂ ರೋಲ್ಸ್ ರಾಯ್ಸ್ ಒಳಗೆ ಕುಳಿತುಕೊಳ್ಳಲು ಸಿಕ್ಕಿರುವ ಅವಕಾಶ. ಆದರೆ ಡಿಲಕ್ಸ್ ಭೈಯಾಜಿ ಶೇರ್ ಮಾಡಿದ ಮಾಹಿತಿಯಂತೆ ಅವರು ಉದ್ಯಮದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ಕಾರಿನ ಬಾಡಿಗೆ ಮತ್ತು ಇತರ ಖರ್ಚಿಗಾಗಿ ಒಟ್ಟು 1.08 ಲಕ್ಷ ರುಪಾಯಿ ಖರ್ಚಾಗಿದ್ದರೆ, ಚಹಾ ಮಾರಾಟದಿಂದ ಬಂದ ಒಟ್ಟು ಆದಾಯ 88,400 ರುಪಾಯಿ.
ಈ ವಿಡಿಯೊ ಪ್ರಸ್ತುತ 23 ಮಿಲಿಯನ್ ವೀಕ್ಷಣೆ ಹೊಂದಿದೆ. ಅನೇಕ ವೀಕ್ಷಕರು ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಬಹಿರಂಗಪಡಿಸುವ ಈ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು. ನೆಟ್ಟಿಗರೊಬ್ಬರು ಲಾಭ ಆಗದಿದ್ದರೂ ಈ ಪ್ಲ್ಯಾನ್ ಅನ್ನು ʼಸೃಜನಶೀಲತೆʼ ಎಂದು ಕರೆದರು.