ದೆಹಲಿ, ಜೂ. 3: ದೇಶಪ್ರೇಮವನ್ನು ಸಾರುವ ಅನೇಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿರುವುದನ್ನು ನೀವು ಗಮನಿಸರಬಹುದು. ರಾಷ್ಟ ಧ್ವಜಕ್ಕೆ ಗೌರವ ನೀಡುವುದು, ರಾಷ್ಟ್ರ ಗೀತೆಯನ್ನು ಗೌರವಿಸುವುದು ಹೀಗೆ...ಆದರೆ ಭಾರತಕ್ಕೆ ದ್ವೇಷ ಬಯಸುವ ಅನೇಕ ಕಿಡಿಗೇಡಿಗಳು ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿರುವ ದೃಶ್ಯ ವೈರಲ್ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಫ್ರಿಸ್ಕೊ ಸಿಟಿ ಹಾಲ್ ಹೊರಗೆ ಟೆಕ್ಸಾಸ್‌ನ ವ್ಯಕ್ತಿಯೊಬ್ಬ ಭಾರತದ ಧ್ವಜವನ್ನು ಹರಿದು ಹಾಕಿದ್ದಾನೆ. ಸಾರ್ವಜನಿಕವಾಗಿಯೇ ಬಮ್ಮ ರಾಷ್ಟ ಧ್ವಜವನ್ನು ಅವಮಾನಿಸಿದ್ದಾನೆ. ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಆತನ ವಿರುದ್ಧ ಕಿಡಿಕಾರಿದ್ದಾರೆ.
ವಿಡಿಯೊ ನೋಡಿ:
ವ್ಯಕ್ತಿಯೂ ಹರ್ಷೋದ್ಗಾರ ಮಾಡುತ್ತಿದ್ದ ಜನಸಮೂಹದ ಮುಂದೆ ಭಾರತದ ಧ್ವಜವನ್ನು ಹರಿದು ಹಾಕಿದ್ದಾನೆ. ಫ್ರಿಸ್ಕೋ ನಗರದ ಸರ್ಕಾರಿ ಕಚೇರಿಯ ಎದುರು ನಿಂತ ಈತ ಮೊದಲು ಭಾರತೀಯ ಧ್ವಜವನ್ನು ಕೈಯಲ್ಲಿ ಹಿಡಿದು ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿದ್ದ ಕೆಲವರು ಆತನನ್ನು ಹುರಿದುಂಬಿಸಿದ್ದಾರೆ. ಭಾರತೀಯ ವಲಸಿಗರ ಸಂಖ್ಯೆಯನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಸಿಟಿ ಹಾಲ್ ಹೊರಗೆ ಸಿಗರೇಟ್ ಸೇದುತ್ತ ನಿಂತಿದ್ದ ಈ ಪಾಪಿ ಭಾರತದ ಧ್ವಜವನ್ನು ಹರಿದು ಹಾಕುತ್ತಿರುವುದನ್ನು ವಿಡಿಯೊ ತೋರಿಸಿದೆ. ಅವನ ಸುತ್ತಲಿನ ಹಲವರು ಈ ನಡೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡಿದ್ದಾರೆ. ಉತ್ತರ ಡಲ್ಲಾಸ್‌ನಲ್ಲಿ ಭಾರತೀಯ ವಲಸೆ ಆಕ್ರಮಣದ ವಿರುದ್ಧ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಶ್ವದಾದ್ಯಂತ ಇರುವ ಭಾರತೀಯರು ತೀವ್ರ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ಈ ಕೃತ್ಯವನ್ನು ಖಂಡಿಸುತ್ತ, ʼʼಇದು ಅನ್ಯಾಯ. ದ್ವೇಷ ಎಂದಿಗೂ ಒಳ್ಳೆಯದಲ್ಲ. ವಲಸಿಗರ ವಿರುದ್ಧ ನೀವು ಸಭ್ಯವಾಗಿ ಮತ್ತು ಗೌರವದಿಂದ ಧ್ವನಿ ಎತ್ತಬಹುದು. ಆದರೆ ಈ ರೀತಿ ದ್ವೇಷ ಮೆರೆಯುವುದು ತಪ್ಪುʼʼ ಎಂದಿದ್ದಾರೆ. ʼʼವಿದೇಶದಲ್ಲಿ ಭಾರತೀಯರ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸ್ಥಳೀಯ ಉದ್ಯೋಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಇಂತಹ ದ್ವೇಷʼʼ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.