Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿ ದೂರ ಆಗಿರುವ ಸುದ್ದಿ ದಿನನಿತ್ಯ ಕೇಳಿಬರುತ್ತಲೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದ ಜೋಡಿವೊಂದು ಕೇವಲ 'ಲಿಂಗ ತಾರತಮ್ಯ'ದ ವಿಚಾರವಾಗಿ ವಿಚ್ಛೇದನದ ಹೊಸ್ತಿಲು ತಲುಪಿದೆ. ಅತ್ತೆಯೂ ಅನಾರೋಗ್ಯಕ್ಕೆ ಒಳ ಗಾಗಿದ್ದು ಕೆಲಸ ಬಿಟ್ಟು ಮನೆಯಲ್ಲಿರಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ -
ನವದೆಹಲಿ,ಫೆ.9: ಇತ್ತೀಚೆಗೆ ಪ್ರೀತಿಸಿ ಮದುವೆಯಾಗುವ ಜೋಡಿಗಳ ಸಂಖ್ಯೆ ಹೆಚ್ಚಾದಂತೆ ಸಣ್ಣ ಪುಟ್ಟ ಕಾರಣಗಳಿಂದ ಡಿವೋರ್ಸ್ ಪಡೆಯುವವರ ಸಂಖ್ಯೆ ಕೂಡ ಹೆಚ್ಚಿದೆ. ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿ ದೂರ ಆಗಿರುವ ಸುದ್ದಿ ದಿನನಿತ್ಯ ಕೇಳಿಬರುತ್ತಲೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದ ಜೋಡಿವೊಂದು ಕೇವಲ 'ಲಿಂಗ ತಾರತಮ್ಯ'ದ ವಿಚಾರವಾಗಿ ವಿಚ್ಛೇದನದ ಹೊಸ್ತಿಲು ತಲುಪಿದೆ. ಅತ್ತೆಯೂ ಅನಾರೋಗ್ಯಕ್ಕೆ ಒಳಗಾಗಿದ್ದು ಕೆಲಸ ಬಿಟ್ಟು ಮನೆಯಲ್ಲಿರಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ಭಾರೀ ವೈರಲ್ (Viral News) ಆಗುತ್ತಿದೆ.
A childhood friend fell in love with this guy when we were in +2. They continued that relationship in BTech joined in Tech Mahindra together, changed companies, got married, have two kids. Bought a home with their own money, living a life that is a dream for most of us.
— బాపు బొమ్మ (@BapuBommaSpeaks) February 8, 2026
The girl…
ಈ ದಂಪತಿಗಳು ಶಾಲೆಯ ಓದುತ್ತಿರುವಾಗಲೇ ಪರಿಚಯವಾಗಿದ್ದು ಕಾಲೇಜು ಮುಗಿಸುವವರೆಗೂ ಒಟ್ಟಿಗೆ ಜೊತೆಯಾಗಿದ್ದರು, ಬಳಿಕ ಅಕ್ಕಪಕ್ಕದಲ್ಲಿ ತಮ್ಮ ವೃತ್ತಿಜೀವನವನ್ನು ನಿಭಾಯಿಸಿಕೊಂಡು ಪರಸ್ವರ ಅರ್ಥ ಮಾಡಿಕೊಂಡು ಮದುವೆಯಾದರು. ನಂತರ ಇಬ್ಬರೂ ಖ್ಯಾತ ಐಟಿ ಸಂಸ್ಥೆಯಾದ ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡಿದ್ದು ಇಬ್ಬರೂ ಸಮಾನವಾಗಿ ದುಡಿದ ಹಣದಿಂದ ದೆಹಲಿಯಲ್ಲಿ ಜಂಟಿಯಾಗಿ ಒಂದು ಮನೆಯನ್ನು ಖರೀದಿಸಿದ್ದರು.ಇವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ತನ್ನ ಎರಡೂ ಹೆರಿಯ ಸಮಯದಲ್ಲಿ ಕಡಿಮೆ ಅವಧಿಯ ರಜೆ ಪಡೆದು ಶ್ರಮವಹಿಸಿ ಕೆಲಸ ಮಾಡಿದ್ದರು.
ಇತ್ತೀಚೆಗಷ್ಟೇ ಆಕೆ ಇನ್ನೂ ಉತ್ತಮ ವೇತನ ಇರುವ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆದರೆ ತನ್ನ ಗಂಡನ ತಾಯಿ ಅನಾರೋಗ್ಯಕ್ಕೆ ಒಳಗಾದಾ ಇವರಿಬ್ಬರ ನಡುವೆ ತೊಂದರೆ ಪ್ರಾರಂಭವಾಗಿದೆ.. ಪತಿ ತನ್ನ ಪತ್ನಿಗೆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದು ತಾಯಿಯನ್ನು ನೋಡಿಕೊಳ್ಳುವಂತೆ ಒತ್ತಾಯಿಸಿದನು. ಆದರೆ ಪತ್ನಿ ಇದಕ್ಕೆ ಒಪ್ಪಿಕೊಳ್ಳದೆ ಅತ್ತೆಯ ಸೇವೆಗಾಗಿ ಕ್ಯಾರ್ ಟೇಕರ್ ನೇಮಿಸಿಕೊಳ್ಳಣ ಎಂದು ಸಲಹೆ ನೀಡಿದ್ದಾರೆ.
Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?
ಆದರೆ ಕೆಲಸ ಬಿಡಲು ಒಪ್ಪದಿದ್ದಾಗ, ಪತಿ ಮತ್ತು ಆತನ ಕುಟುಂಬದವರು ಆಕೆಯ ಮೇಲೆ ಮಾನಸಿಕವಾಗಿ ದೌರ್ಜನ್ಯ ಎಸಗಲು ಆರಂಭಿಸಿದ್ದಾರೆ. ಇದರಿಂದಾಗಿ ಪತಿಯೂ ಡೀವೊರ್ಸ್ಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ''ಮನೆಯ ಜವಾಬ್ದಾರಿ ಹೊರುವುದು ಹೆಣ್ಣಿನ ಕರ್ತವ್ಯ" ಎಂಬ ಪುರುಷ ಪ್ರಧಾನ ಮನಸ್ಥಿತಿಯಿಂದ ಆಕೆಯನ್ನು ಕುಗ್ಗಿಸಲು ಪ್ರಯತ್ನಿಸಿದ್ದು ಅಂತಿಮವಾಗಿ ಮಹಿಳೆ ಮಕ್ಕಳೊಂದಿಗೆ ತವರು ಮನೆಗೆ ತೆರಳಿದಳು. ಈ ಬೆನ್ನಲ್ಲೇ ಪತಿ ಆಕೆಗೆ ವಿಚ್ಛೇದನ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾನೆ.
ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಆಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೂ, ಚೆನ್ನಾಗಿ ಸಂಪಾದಿಸಿದರೂ, ತನ್ನ ಕುಟುಂಬವನ್ನು ನೋಡಿಕೊಂಡರೂ ಮತ್ತು ತ್ಯಾಗಗಳನ್ನು ಮಾಡಿದರೂ ಸಹ, ಅವಳನ್ನು ಇನ್ನೂ ಸಮಾಜದಲ್ಲಿ ಗೌರವಿಸಲಾಗುವುದಿಲ್ಲ ಎಂದು ಬಳಕೆದಾರರೊಬ್ಬರು ಬರೆದು ಕೊಂಡಿದ್ದಾರೆ. ಮತ್ತೊಬ್ಬರು , ಪತ್ನಿ ತನಗಿಂತ ಹೆಚ್ಚು ಗಳಿಸುತ್ತಿದ್ದಾಳೆ ಎಂಬ ಪತಿಯ ಅಹಂಕಾರ ಎಂದು ಬರೆದುಕೊಂಡಿದ್ದಾರೆ.