ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಪೆಟ್ರೋಲ್ ಬಂಕ್‌ನಲ್ಲಿ ದುಡಿಯುವ ಮಹಿಳೆ; ಆಧುನಿಕ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದ ನೆಟ್ಟಿಗರು

Viral Video: ತಾಯಿಯ ಶ್ರಮ, ಸಮರ್ಪಣಾ ಭಾವವನ್ನು ಎಂದಿಗೂ ಯಾರೊಂದಿಗೂ ಹೋಲಿಕೆ ಮಾಡಲಾಗದು. ಇದೀಗ ಲಡಾಖ್‌ನ ಮಹಿಳೆಯೊಬ್ಬರು ಬೆನ್ನಿಗೆ ಮಗುವನ್ನು ಭದ್ರವಾಗಿ ಕಟ್ಟಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಈ ದೃಶ್ಯ ಸಾವಿರಾರು ಜನರ ಮನಗೆದ್ದಿದೆ.

ಲಡಾಕ್‌ನಲ್ಲಿ ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಮಹಿಳೆ

ಲೇಹ್‌, ಅ. 9: ಕಷ್ಟಪಟ್ಟು ದುಡಿಯುವ ಮನಸ್ಸಿದ್ದರೆ ಬಡತನವನ್ನು ಮೆಟ್ಟಿ ನಿಲ್ಲಬಹುದು. ಇದಕ್ಕೆ ಸಾಕ್ಷಿಯಾಗಿ ಬೆನ್ನಿಗೆ ಮಗುಗನ್ನು ಭದ್ರವಾಗಿ ಕಟ್ಟಿಯೊಂದು ಮಹಿಳೆಯೊಬ್ಬರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪತಿಯೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮತ್ತೊಬ್ಬ ಮಹಿಳೆ ಈ ದೃಶ್ಯವನ್ನು ಕ್ಯಾಮರಾದಲ್ಲಿ (Viral Video) ಸೆರೆ ಹಿಡಿದಿದ್ದಾರೆ. ಈ ವಿಡಿಯೊ 90 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಆಕೆಯ ಪರಿಶ್ರಮ ಕಂಡು ಆಧುನಿಕ ಝಾನ್ಸಿ ರಾಣಿ ಎಂದು ಕೊಂಡಾಡಿದ್ದಾರೆ.

ತಾಯಿಯ ಶ್ರಮ, ಸಮರ್ಪಣಾ ಭಾವವನ್ನು ಎಂದಿಗೂ ಯಾರೊಂದಿಗೂ ಹೋಲಿಕೆ ಮಾಡಲಾಗದು. ಇದೀಗ ಲಡಾಖ್‌ನ ಮಹಿಯೊಬ್ಬರು ಬೆನ್ನಿಗೆ ಮಗುವನ್ನು ಭದ್ರವಾಗಿ ಕಟ್ಟಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ  ಕೆಲಸ ಮಾಡುತ್ತಿರುವ ವಿಡಿಯೊ ಗಮನ ಸೆಳೆದಿದೆ.

ವಿಡಿಯೊ ನೋಡಿ:



ಇನ್‌ಸ್ಟಾಗ್ರಾಮ್‌ನಲ್ಲಿ 'ಯಾಂಕಾ ಪರದೇಶಿ' ಎಂಬ ಖಾತೆಯಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದೆ. ತಾಯಿಯೊಬ್ಬರು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುವಾಗ ತಮ್ಮ ಮಗುವನ್ನು ಸುರಕ್ಷಿತವಾಗಿ ಬೆನ್ನಿಗೆ ಕಟ್ಟಿಕೊಂಡಿರುವುದು ಕಂಡುಬರುತ್ತದೆ. ವಿಡಿಯೊದಲ್ಲಿ "ನನ್ನ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ನಾನು ಇಲ್ಲಿರುತ್ತೇನೆ" ಎನ್ನುವ ಶೀರ್ಷಿಕೆ ನೀಡಲಾಗಿದೆ.

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ಈ ವಿಡಿಯೊ ನೆಟ್ಟಿಗರ ಕಣ್ಣಾವಲಿ ಒದ್ದೆಯಾಗುವಂತೆ ಮಾಡಿದ್ದು, ಅನೇಕರು ಆಕೆಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ. ವಿಡಿಯೊ ಹಂಚಿಕೊಂಡಿದ್ದ ಮಹಿಳೆ ನಂತರ ಆ ತಾಯಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದಾರೆ. ನೆಟ್ಟಿಗರು ಆಕೆಯ ಮಗುವಿನ ಭವಿಷ್ಯಕ್ಕಾಗಿ ಕಳುಹಿಸಿಕೊಟ್ಟ ಧನಸಹಾಯ ಹಾಗೂ ಪ್ರೀತಿಯ ಸಂದೇಶಗಳನ್ನು ಆಕೆಗೆ ತಲುಪಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಬಳಕೆದಾರರೊಬ್ಬರು, ʼʼಅವರು ನಿಜವಾದ ಯೋಧೆ. ದೇವರು ಅವರನ್ನು ಆಶೀರ್ವದಿಸಲಿʼʼ ಎಂದಿದ್ದಾರೆ. ಮತ್ತೊಬ್ಬರು, ʼʼಅವರು ಆಧುನಿಕ ಕಾಲದ ಝಾನ್ಸಿ ರಾಣಿ" ಎಂದು ಕರೆದಿದ್ದಾರೆ.