ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surrogacy: ಬಯಲಾಯ್ತು ಅಕ್ರಮ ಬಾಡಿಗೆ ತಾಯ್ತನ! ಈ ಸ್ಕ್ಯಾಮ್‌ಗೆ ಬಲಿಯಾದ ದಂಪತಿಗಳ ಗೋಳಾಟ ಕೇಳೋರಿಲ್ಲ

Surrogacy exposed in Hyderabad: ಕೆಲವರಿಗೆ ತಮಗೆ ಮಕ್ಕಳು ಬೇಕು ಆದರೆ ಹೆರಲು ಸಿದ್ಧವಿಲ್ಲ ಎಂದು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಬಡ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅವರ ಮಕ್ಕಳನ್ನು ಇಂತಹ ದಂಪತಿಗಳಿಗೆ ನೀಡುವ ಮೂಲಕ ವಂಚನೆ ಎಸಗಲಾಗಿದೆ. ಈ ಬೃಹತ್ ಜಾಲವನ್ನು ಇದೀಗ ಪತ್ತೆ ಹಚ್ಚಲಾಗಿದೆ.

ಅಕ್ರಮ ಬಾಡಿಗೆ ತಾಯ್ತನ ಸ್ಕ್ಯಾಮ್‌ ಬಲಿಯಾದಿರಿ ಜೋಕೆ!

-

Priyanka P Priyanka P Sep 27, 2025 11:59 AM

ಹೈದರಾಬಾದ್‌: ಜಾರಿ ನಿರ್ದೇಶನಾಲಯವು (ED) ಬೃಹತ್ ಅಕ್ರಮ ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಣೆ ಜಾಲವನ್ನು ಬಯಲು ಮಾಡಿದೆ. ಸಂತಾನೋತ್ಪತಿ ಕೇಂದ್ರವೊಂದು (fertility centre) ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುವ ದಂಪತಿಗಳಿಗೆ ಜೈವಿಕವಾಗಿ ಸಂಬಂಧವಿಲ್ಲದ ಶಿಶುಗಳನ್ನು ಪೂರೈಸುತ್ತಿತ್ತು. ಬಡ ಮತ್ತು ದುರ್ಬಲ ಗರ್ಭಿಣಿಯರಿಂದ ಈ ಶಿಶುಗಳನ್ನು ತೆಗೆದುಕೊಂಡು, ಹೆರಿಗೆಯ ನಂತರ ತಮ್ಮ ನವಜಾತ ಶಿಶುಗಳನ್ನು (newborns) ತ್ಯಜಿಸಲು ಆಮಿಷವೊಡ್ಡಲಾಗಿತ್ತು.

2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ರ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಜೆನ್ಸಿಯು ಸೆಪ್ಟೆಂಬರ್ 25ರಂದು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಾದ್ಯಂತ ಒಂಭತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು. ಪಚಿಪಲ್ಲಿ ನಮ್ರತ ಅಥವಾ ಅತ್ಲುರಿ ನಮ್ರತ ನಡೆಸುತ್ತಿದ್ದಾರೆ ಎನ್ನಲಾದ ಯುನಿವರ್ಸಲ್ ಶ್ರುತಿ ಫರ್ಟಿಲಿಟಿ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಳಿ ನಡೆಸಿತು. ವಂಚನೆಗೊಳಗಾದ ದಂಪತಿಗಳ ದಾಖಲೆಗಳು ಮತ್ತು ನಮ್ರತ ಸಂಪಾದಿಸಿದ ಆಸ್ತಿಗಳ ವಿವರಗಳು ಸೇರಿದಂತೆ ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು.

ಇದನ್ನೂ ಓದಿ: Viral Video: ಟ್ರಕ್ ಓಡಿಸುತ್ತಲೇ 2 ನಿಮಿಷ ನಿದ್ದೆಗೆ ಜಾರಿದ ಚಾಲಕ! ಆಮೇಲೆ ನಡೆದಿದ್ದು ಘನಘೋರ ಘಟನೆ

ಆದರೆ, ಹಲವಾರು ಪ್ರಕರಣಗಳಲ್ಲಿ ಹಸ್ತಾಂತರಿಸಲಾದ ಮಕ್ಕಳು, ಪೋಷಕರಿಗೆ ಜೈವಿಕವಾಗಿ ಸಂಬಂಧ ಹೊಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಗರ್ಭಿಣಿಯಾಗಿರುವ ಬಡ ಮತ್ತು ದುರ್ಬಲ ಮಹಿಳೆಯರಿಗೆ ಹೆರಿಗೆಯಾದ ತಕ್ಷಣ ಏಜೆಂಟರು ಹಣದ ಆಮಿಷವೊಡ್ಡಿ ನವಜಾತ ಶಿಶುಗಳನ್ನು ಪಡೆಯುತ್ತಿದ್ದರು ಎನ್ನಲಾಗಿದೆ. ವಿದೇಶಿ ದಂಪತಿಯೊಬ್ಬರಿಗೆ ಡಿಎನ್‍ಎ ಪರೀಕ್ಷೆ ವೇಳೆ ಮಗು ತಮ್ಮ ರಕ್ತವನ್ನು ಹೊಂದಿಲ್ಲ ಎಂದು ತಿಳಿಯುತ್ತದೆ. ಹೀಗಾಗಿ ಅವರ ಪಾಸ್‌ಪೋರ್ಟ್ ಅರ್ಜಿ ತಿರಸ್ಕಾರಗೊಂಡಾಗ ವಂಚನೆಯು ಬೆಳಕಿಗೆ ಬಂದಿದೆ (Viral News).

ಇಡೀ ತನಿಖೆಯಿಂದ ಇದುವರೆಗೆ ಈ ಜಾಲವು ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿದ್ದು, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ನೆಲ್ಲೂರು ಮತ್ತು ಕೋಲ್ಕತ್ತಾದ ಕೇಂದ್ರಗಳ ಮೂಲಕ ಭಾರತದಾದ್ಯಂತ ಹಲವಾರು ದಂಪತಿಗಳನ್ನು ವಂಚಿಸಿದೆ ಎಂದು ತಿಳಿದುಬಂದಿದೆ. ಸಂಗ್ರಹಿಸಿದ ಹಣದ ಒಂದು ಭಾಗವನ್ನು ಏಜೆಂಟರು ಮತ್ತು ಬಾಡಿಗೆ ತಾಯಂದಿರಿಗೆ ಹಂಚಲಾಗಿದ್ದರೂ, ಅದರಲ್ಲಿ ಹೆಚ್ಚಿನ ಹಣವನ್ನು ನಮ್ರತಾ ತಮ್ಮ ಜೇಬಿಗೆ ಹಾಕಿಕೊಂಡು ಆಸ್ತಿ ಸಂಪಾದನೆ ಸೇರಿದಂತೆ ಅವರ ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಮ್ರತಾ ದಂಪತಿಗಳು ಮತ್ತು ಬಾಡಿಗೆ ತಾಯಂದಿರು ನೇರವಾಗಿ ತಮ್ಮ ಚಿಕಿತ್ಸಾಲಯವನ್ನು ಸಂಪರ್ಕಿಸಿದ್ದಾರೆಂದು ಬಿಂಬಿಸುವ ಸರೊಗಸಿ ಒಪ್ಪಂದಗಳನ್ನು ಸಿದ್ಧಪಡಿಸಿದ್ದರು. ಈ ಮೂಲಕ ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ ಎಂಬುದನ್ನು ಮೇಲ್ನೋಟಕ್ಕೆ ಬಿಂಬಿಸಲಾಗಿತ್ತು. ವಶಪಡಿಸಿಕೊಂಡ ದಾಖಲೆಗಳಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಂತೆ ಜಾರಿ ನಿರ್ದೇಶನಾಲಯವು ಮತ್ತಷ್ಟು ಬಂಧನಗಳು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.