ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ಕೂಟರ್‌ಗೆ ಅಡ್ಡ ಬಂದ ಬೀದಿ ಶ್ವಾನ ಉಳಿಸಲು ಹೋಗಿ ಜೀವ ಕಳೆದುಕೊಂಡ ಅಪ್ರಾಪ್ತ ಬಾಲಕ

17 ವರ್ಷದ ರೌನಕ್ ದ್ವಿವೇದಿ ಎಂಬ ಬಾಲಕ ಭಿಲಾಯಿಯ ಸುಪೇಲಾ ಪ್ರದೇಶದಲ್ಲಿ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಇದ್ದಕ್ಕಿದ್ದಂತೆ ಅಡ್ಡಬಂದ ಕಾರಣ ಸ್ಕೂಟರ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸ್ನೇಹಿತ ಗಾಯಗೊಂಡಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ರಾಯ್‌ಪುರ: ಛತ್ತೀಸ್‌ಗಢದ ಭಿಲಾಯಿಯ ಸುಪೇಲಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆತ ತನ್ನ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಬೀದಿ ನಾಯಿಯೊಂದು ಇದ್ದಕ್ಕಿದ್ದಂತೆ ಅಡ್ಡಬಂದ ಕಾರಣ ಅದನ್ನು ಉಳಿಸಲು ಹೋಗಿ ಸ್ಕೂಟರ್ ತಿರುಗಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆ ಪಕ್ಕದಲ್ಲಿರುವ ಚರಂಡಿಗೆ ಬಿದ್ದರು. ಅಪಘಾತದಲ್ಲಿ, ರೌನಕ್ ದ್ವಿವೇದಿ ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸ್ನೇಹಿತ ಗಾಯಗೊಂಡಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಾಹಿತಿ ಪ್ರಕಾರ, ರೌನಕ್ ತನ್ನ ಸ್ನೇಹಿತನೊಂದಿಗೆ ಶ್ರೀರಾಮ್ ಚೌಕ್ ಕಡೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ರೌನಕ್ ತಲೆಗೆ ಗಂಭೀರ ಗಾಯಗಳಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದರೆ ಹಿಂದೆ ಕುಳಿತಿದ್ದ ರೌನಕ್ ಅವನ ಸ್ನೇಹಿತ ಹಾರಿ ಹೋಗಿ ಚರಂಡಿ ಬಳಿ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ.

ವಿಡಿಯೊ ಇಲ್ಲಿದೆ ನೋಡಿ...



ಸ್ಥಳೀಯ ಜನರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ರೌನಕ್ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಮತ್ತು ಅವನ ಸ್ನೇಹಿತ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಸುಪೇಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತಿಳಿಸಿದ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳಲ್ಲಿ, ರೌನಕ್ ದ್ವಿವೇದಿಯ ಸ್ಕೂಟರ್ ಡಿಕ್ಕಿಯ ನಂತರ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಅವುಗಳು ವಾಹನಗಳಿಗೆ ಅಡ್ಡ ಬಂದು ಜೀವಕ್ಕೆ ಹಾನಿ ಮಾಡುವುದು ಮಾತ್ರವಲ್ಲದೇ ಜನರ ಮೇಲೆ ದಾಳಿ ಮಾಡಿದ ಹಲವು ಭಯಾನಕ ವಿಡಿಯೊಗಳು ಬೆಳಕಿಗೆ ಬರುತ್ತಿವೆ. ಕರ್ನಾಟಕದ ಚಿತ್ರದುರ್ಗದಲ್ಲಿ ಯುವತಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ನಂತರ, ಹುಬ್ಬಳ್ಳಿಯಿಂದ ಮತ್ತೊಂದು ನಾಯಿ ದಾಳಿಯ ವಿಡಿಯೊ ಹೊರಬಂದಿದೆ. ಬುಧವಾರ (ಜುಲೈ 16)ವಹುಬ್ಬಳ್ಳಿಯಲ್ಲಿ ಎರಡು ಬೀದಿ ನಾಯಿಗಳು 3 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ್ದ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ದೈತ್ಯ ಅನಕೊಂಡವನ್ನು ಬರಿಗೈಯಲ್ಲಿ ಹಿಡಿದ ವ್ಯಕ್ತಿ; ಶಾಕಿಂಗ್‌ ವಿಡಿಯೊ ವೈರಲ್

ಮತ್ತೊಂದು ಘಟನೆಯಲ್ಲಿ, ಇಂದೋರ್‌ನ ಶ್ರೀ ನಗರ ವಿಸ್ತರಣಾ ಪ್ರದೇಶದ ಕಾಲೇಜು ವಿದ್ಯಾರ್ಥಿನಿ ಜುಲೈ 12ರಂದು ಬೆಳಗಿನ ಜಾವ ಪರೀಕ್ಷೆಗೆ ಹೋಗುತ್ತಿದ್ದಾಗ ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾಳೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.