ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈ ಬಿಹಾರಿ ವಿದ್ಯಾರ್ಥಿಯ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫುಲ್‌ ಫಿದಾ!

ಬಿಹಾರದ 19 ವರ್ಷದ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಕಾಲೇಜಿನಲ್ಲಿ ಅಧ್ಯಯನ ಮಾಡಲು ಕನ್ನಡ ಕಲಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಈ ಬಗ್ಗೆ ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕನ್ನಡ ಕಲಿಯುವ ಬಗ್ಗೆ ಸಲಹೆ ಕೇಳಿದ್ದಾನೆ. ಈ ಪೋಸ್ಟ್ ವೈರಲ್(Viral News) ಆಗಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ.

ಪಟನಾ: ಇತ್ತೀಚೆಗೆ ಬಿಹಾರದ 19 ವರ್ಷದ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಕಾಲೇಜಿಗೆ ಸೇರಿಕೊಂಡಿದ್ದು, ಅಲ್ಲಿ ಕಾಲೇಜು ಶುರುವಾಗುವ ಮೊದಲು ತಾನು ಕನ್ನಡ ಕಲಿಯಬೇಕೆಂದು ಪ್ರಯತ್ನಿಸಿದ್ದಾನೆ. ಕನ್ನಡ ಭಾಷೆ ಕಲಿಯಲು ತಾನು ಮಾಡಿದ ಪ್ರಯತ್ನದ ಬಗ್ಗೆ ಆತ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಅವನ ಹೃದಯಸ್ಪರ್ಶಿ ಸಂದೇಶವು
ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.ಭಾಷೆಯ ಬಗೆಗಿನ ಅವನ ಆಸಕ್ತಿ ನೋಡಿ ನೆಟ್ಟಿಗರು ಕೂಡ ಫುಲ್ ಫಿದಾ ಆಗಿದ್ದಾರೆ.

ಈತನಿಗೆ ಬಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತಮಿಳು, ಕನ್ನಡ... ಪ್ರತಿಯೊಂದು ಭಾರತೀಯ ಭಾಷೆಯೂ ಹಿಂದಿಯಷ್ಟೇ ಪ್ರಿಯವಾದವುಗಳಂತೆ. ಈಗ ಆತ ಕರ್ನಾಟಕದಲ್ಲಿ 4ವರ್ಷಕ್ಕೂ ಹೆಚ್ಚು ಕಾಲ ವಾಸವಾಗಿರಬೇಕಾದ ಕಾರಣ ಆತ ಕನ್ನಡ ಕಲಿಯಲು ಮತ್ತು ಅಲ್ಲಿನ ಜನರ ಜೊತೆಗೆ ಬೆರೆಯಲು ಬಯಸಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾನೆ.

ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಯಲು ಬಯಸಿದ್ದಾನೆ. ಅದರಲ್ಲೂ, ವಿಶೇಷವಾಗಿ ಮಧ್ವಾಚಾರ್ಯ ಮತ್ತು ಪುರಂದರ ದಾಸರ ಕೃತಿಗಳನ್ನು ಓದಲು ಉತ್ಸುಕನಾಗಿದ್ದಾನೆ ಎಂದು ಹೇಳಿದ್ದಾನೆ. ಅದು ಅಲ್ಲದೇ, ಕನ್ನಡಿಗರಲ್ಲಿ ಕನ್ನಡವನ್ನು ಶುದ್ಧ ರೀತಿಯಲ್ಲಿ ಕಲಿಯುವುದು ಹೇಗೆ?" ಎಂದು ಪೋಸ್ಟ್‌ನಲ್ಲಿ ಕೇಳಿದ್ದಾನೆ.

ಈ ಕನ್ನಡಪ್ರೇಮಿಯ ಪೋಸ್ಟ್‌ ಈಗಾಗಲೇ 80 ಕ್ಕೂ ಹೆಚ್ಚು ಲೈಕ್ಸ್‌ ಗಳಿಸಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಬೆಂಬಲವನ್ನು ಗಳಿಸಿದೆ. ಅನೇಕ ನೆಟ್ಟಿಗರು ಕನ್ನಡ ಕಲಿಯಲು ಸರಳ ನುಡಿಗಟ್ಟುಗಳೊಂದಿಗೆ ಶುರುಮಾಡಿ ಎಂದರೆ, ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ವಿಷಯಗಳನ್ನು ನೋಡಿ ಹಾಗೇ ಸಹಪಾಠಿಗಳೊಂದಿಗೆ ಯಾವಾಗಲೂ ಕನ್ನಡದಲ್ಲಿ ಚಾಟ್ ಮಾಡಿ ಎಂಬಂತಹ ಸಲಹೆಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ವೃದ್ಧ ದಂಪತಿಯ ರೊಮ್ಯಾಂಟಿಕ್‌ ವಿಡಿಯೊ ಫುಲ್‌ ವೈರಲ್‌!

ಮತ್ತೊಬ್ಬರು, "ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ, ಅವರು ನಿಮಗೆ ಸ್ವಲ್ಪ ಕಲಿಸುತ್ತಾರೆ" ಎಂದು ಬರೆದಿದ್ದಾರೆ. "ನೀವು ಅಧ್ಯಯನ ಮಾಡಲು ಬರುತ್ತಿರುವುದರಿಂದ, ಅದರ ಬಗ್ಗೆ ಚಿಂತಿಸಬೇಡಿ. ನಿಮ್ಮ ಸಹಪಾಠಿಗಳೊಂದಿಗೆ ಮಾತನಾಡುವ ಮೂಲಕ ನೀವು ಕನ್ನಡವನ್ನು ಕಲಿಯುವಿರಿ. ಉದ್ಯೋಗಿಯಾಗಿರುವುದಕ್ಕಿಂತ ವಿದ್ಯಾರ್ಥಿಯಾಗಿರುವಾಗ ಇದು ಸುಲಭವಾಗುತ್ತದೆ. ನೀವು ಹೆಚ್ಚೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಿ ಇದರಿಂದ ಭಾಷೆ ಬೇಗ ಕಲಿಯಬಹುದು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.