ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವೃದ್ಧ ದಂಪತಿಯ ರೊಮ್ಯಾಂಟಿಕ್‌ ವಿಡಿಯೊ ಫುಲ್‌ ವೈರಲ್‌!

ಪತಿಯೊಬ್ಬ ತನ್ನ ಪತ್ನಿಯ ಉಗುರುಗಳಿಗೆ ನೈಲ್ ಪಾಲಿಶ್ ಹಾಕುವ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಈ ವಿಡಿಯೊ 13 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ ಮತ್ತು 900,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಇವರಿಬ್ಬರ ಪ್ರೀತಿ ನೋಡಿ ನೆಟ್ಟಿಗರು ಕೂಡ ಫುಲ್‌ ಫಿದಾ ಆಗಿದ್ದಾರೆ.

ವೃದ್ಧ ದಂಪತಿಯ ರೊಮ್ಯಾಂಟಿಕ್‌ ವಿಡಿಯೊ ಫುಲ್‌ ವೈರಲ್‌!

Profile pavithra Jun 3, 2025 5:12 PM

ನವದೆಹಲಿ: ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂದು ಹೇಳುತ್ತಾರೆ. ಬೆಳಿಗ್ಗೆ ಹುಟ್ಟಿ ಸಂಜೆ ಸಾಯುವ ಪ್ರೀತಿಯೇ ಈಗ ಹೆಚ್ಚಾಗಿದೆ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ಕೂಡ ಈಗ ಗಟ್ಟಿಯಾಗಿ ಉಳಿದಿಲ್ಲ! ಪ್ರೀತಿ ಮಾಡಿ ಒಂದಷ್ಟು ಸಮಯ ತೆಗೆದುಕೊಂಡು ಮದುವೆಯಾದ್ರೂ ವರುಷದೊಳಗೆ ಆ ಸಂಬಂಧಗಳು ಯಾವುದೋ ಕ್ಷುಲಕ ಕಾರಣಕ್ಕೆ ಮುರಿದುಹೋಗುತ್ತಿರುವ ಪ್ರಕರಣವೇ ಹೆಚ್ಚಾಗುತ್ತಿವೆ.ಇವೆಲ್ಲದರ ನಡುವೆ ಅಪರೂಪದ ಪ್ರೀತಿಯ ಕ್ಷಣಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ಗಂಡ-ಹೆಂಡತಿ ಪಾರ್ಕ್‌(Park)ನಲ್ಲಿ ಸುಮಧುರವಾದ ಹಾಡಿಗೆ ಹೆಜ್ಜೆ ಹಾಕಿದ ದೃಶ್ಯವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ರೈಲಿನಲ್ಲಿ ವಯಸ್ಸಾದ ದಂಪತಿಯ ಪ್ರೀತಿಯ ಕ್ಷಣಗಳು ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಇವರಿಬ್ಬರ ಪ್ರೀತಿ ನೋಡಿ ನೆಟ್ಟಿಗರು ಕೂಡ ಫುಲ್‌ ಫಿದಾ ಆಗಿದ್ದಾರೆ.

ವೈರಲ್ ಆಗಿರುವ 14 ಸೆಕೆಂಡುಗಳ ವಿಡಿಯೊದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಉಗುರುಗಳಿಗೆ ನೈಲ್ ಪಾಲಿಶ್ ಹಾಕುವುದು ಸೆರೆಯಾಗಿದೆ. ಈ ಹೃದಯಸ್ಪರ್ಶಿ ಕ್ಷಣವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಪ್ರೀತಿಯನ್ನು ವ್ಯಕ್ತಪಡಿಸಲು ವಯಸ್ಸು ಅಥವಾ ಮಿತಿಗಳಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ 13 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ ಮತ್ತು 900,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಒಬ್ಬ ನೆಟ್ಟಿಗರು "ಅಜ್ಜ ಒಂದೇ ಕ್ಷಣದಲ್ಲಿ ಎಲ್ಲಾ ಮಹಿಳೆಯರ ಹೃದಯಗಳನ್ನು ಗೆದ್ದಿದ್ದಾರೆ" ಎಂದು ಹೇಳಿದರೆ, ಇನ್ನೊಬ್ಬರು "ಇಂತಹ ಪ್ರೀತಿಯನ್ನು ಕಾಣುವುದು ಅಪರೂಪ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ʻಬ್ರಿಟನ್ಸ್‌ ಗಾಟ್‌ ಟಾಲೆಂಟ್‌ʼನಲ್ಲಿ ಭಾರತದ ಬಾಲಕಿಗೆ 3ನೇ ಸ್ಥಾನ; ಈಕೆ ಅದ್ಭುತ ಡಾನ್ಸ್‌ ವಿಡಿಯೊ ಇಲ್ಲಿದೆ ನೋಡಿ

ಈ ರೀತಿಯ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ವೃದ್ಧ ದಂಪತಿಯ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಮನಸ್ಸನ್ನು ಕದ್ದಿತ್ತು. ಈ ವಿಡಿಯೊದಲ್ಲಿ ಅವರು ಬಿಸ್ಕತ್‌ ತಿನ್ನುತ್ತಾ ಪ್ರೀತಿಯ ಸಂಭಾಷಣೆ ನಡೆಸುತ್ತಿರುವುದು ಸೆರೆಯಾಗಿತ್ತು. ಕೋಲ್ಕತಾರ್‌ ಫ್ರೇಮ್ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೊ 2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಅತಿ ಹೆಚ್ಚು ಲೈಕ್‍ಗಳನ್ನು ಪಡೆದಿತ್ತು. ಕಾಮೆಂಟ್‌ ವಿಭಾಗಗಳಲ್ಲಿ ಹಾರ್ಟ್‌ ಮತ್ತು ಪ್ರೀತಿಯ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.