ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಮನೆಗಳಿಗೆ ಬಾಗಿಲೇ ಇಲ್ಲ, ಕಳ್ಳರು - ದರೋಡೆಕೋರ ಭಯ ಇಲ್ಲ": ಏನಿದು ಈ ಗ್ರಾಮದ ಪದ್ದತಿ?

Viral News: ಇತ್ತೀಚೆಗೆ ಅಪರಿಚಿತ ವ್ಯಕ್ತಿ, ಅಥವಾ ಕಳ್ಳರ ಭಯದಿಂದ ಮನೆಯ ಸುತ್ತ ಮುತ್ತ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸುತ್ತಾರೆ. ಆದರೆ ಈ ಒಂದು ಗ್ರಾಮದ ವಿಶೇಷತೆ ಕಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಹೌದು ಮಹಾರಾಷ್ಟ್ರದ ಈ ಗ್ರಾಮದಲ್ಲಿ ಯಾರು ತಮ್ಮ ಮನೆಗಳಿಗೆ ಬೀಗವೇ ಹಾಕದೇ ಹೊರನಡೆಯುತ್ತಾರೆ‌. ಈ ಗ್ರಾಮದಲ್ಲಿ ಜನರ ನಂಬಿಕೆ ಎಷ್ಟು ಸಾಂಪ್ರದಾಯಿಕವಾಗಿ ಇದೆ ಎಂದರೆ ಮನೆಗಳಿಗೆ ಬಾಗಿಲುಗಳೇ ಇರುವುದಿಲ್ಲ‌..ಈ ಸುದ್ದಿ ಕೇಳಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮನೆಗಳಿಗೆ ಬಾಗಿಲು ಮತ್ತು ಬೀಗಗಳಿಲ್ಲದ ವಿಶಿಷ್ಟ ಗ್ರಾಮ

ಮುಂಬೈ,ಏ.25: ಸಾಮಾನ್ಯವಾಗಿವಾಗಿ ನಮ್ಮಲ್ಲಿರುವ ವಸ್ತುಗಳ ಭದ್ರತೆಗಾಗಿ ಮನೆ ಬಾಗಿಲಿಗೆ ಬೀಗ ಹಾಕುವುದು ಸಾಮಾನ್ಯವಾಗಿದೆ. ಆದರಲ್ಲೂ ಇತ್ತೀಚೆಗೆ ಅಪರಿಚಿತ ವ್ಯಕ್ತಿ, ಅಥವಾ ಕಳ್ಳರ ಭಯದಿಂದ ಮನೆಯ ಸುತ್ತ ಮುತ್ತ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸುತ್ತಾರೆ. ಆದರೆ ಈ ಒಂದು ಗ್ರಾಮದ ವಿಶೇಷತೆ ಕಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ.. ಹೌದು ಮಹಾರಾಷ್ಟ್ರದ ಈ ಗ್ರಾಮದಲ್ಲಿ ಯಾರು ತಮ್ಮ ಮನೆಗಳಿಗೆ ಬೀಗವೇ ಹಾಕದೇ ಹೊರನಡೆಯುತ್ತಾರೆ‌. ಈ ಗ್ರಾಮದಲ್ಲಿ ಜನರ ನಂಬಿಕೆ ಎಷ್ಟು ಸಾಂಪ್ರದಾಯಿಕವಾಗಿ ಇದೆ ಎಂದರೆ ಮನೆಗಳಿಗೆ ಬಾಗಿಲುಗಳೇ ಇರುವುದಿಲ್ಲ‌. ಈ ಸುದ್ದಿ (Viral News) ಕೇಳಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರತಿಯೊಂದು ಮನೆ ಬಾಗಲಿಗೆ ಬೀಗ ಇದ್ದರೂ ಇಲ್ಲಿ ಕಳ್ಳತನದ ಪ್ರಕರಣ ಜಾಸ್ತಿ. ಆದರೆ ಮಹಾರಾಷ್ಟ್ರದ ಶನಿ ಶಿಂಗ್ಣಾಪುರದಲ್ಲಿ, ಬಾಗಿಲುಗಳಿಲ್ಲದೆ ಜನವಾಸ ಮಾಡುತ್ತಿದ್ದಾರೆ‌. ತಮ್ಮ ಗ್ರಾಮದಲ್ಲಿ ಇಂತಹ ಅಪಚಾರ ಕೆಲಸಗಳು ನಡೆಯುವುದಿಲ್ಲ ಎಂಬ ವಿಶ್ವಾಸವು ಇಲ್ಲಿನ ಜನರಿಗೆ ಇದೆ‌. ಇಲ್ಲಿ ಬಾಗಿಲುಗಳಿಲ್ಲದೆಯೇ ಮನೆಗಳನ್ನು ಬಹಳ ಹಿಂದಿನಿಂದಲೂ ನಿರ್ಮಿಸಲಾಗಿದೆ. ಇಂದಿಗೂ ಸಹ ಅನೇಕರು ತಮ್ಮ ಭರಣ, ನಗದು ಮತ್ತು ದಿನನಿತ್ಯದ ವಸ್ತುಗಳನ್ನು ಅಸುರಕ್ಷಿತವಾಗಿ ಬಿಟ್ಟು ಹೋಗುತ್ತಾರೆ.

Viral Video: ಶೂಟಿಂಗ್‌ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಇದಕ್ಕೆ ಒಂದು ಐತಿಹಾಸಿಕ ಕಥೆಯೂ ಇದೆ ಎಂದು ನಂಬಲಾಗಿದೆ. ಸ್ಥಳೀಯ ದಂತಕಥೆಯ ಪ್ರಕಾರ, ಈ ಗ್ರಾಮದಲ್ಲಿ ಭಾರೀ ನೆರೆಯ ಪ್ರಮಾಣದಲ್ಲಿ ಮಳೆಯಾಗಿತ್ತು. ಮಳೆಯ ನಂತರ ಪನಸ್ನಾಲಾ ನದಿಯ ಬಳಿ ಒಂದು ದೊಡ್ಡ ಕಪ್ಪು ಕಲ್ಲು ಕೂಡ ಪತ್ತೆಯಾಗಿತ್ತು. ಗ್ರಾಮಸ್ಥರು ಅದನ್ನು ಮುಟ್ಟಿದಾಗ, ಅದು ರಕ್ತಸ್ರಾವವಾಗಲು ಪ್ರಾರಂಭಿಸಿದ್ದು ಆ ರಾತ್ರಿ, ಗ್ರಾಮದ ಮುಖ್ಯಸ್ಥ ಶನಿ ದೇವನ ಕನಸು ಕಂಡನೆಂದು ಹೇಳಲಾಗುತ್ತದೆ, ಶನಿ ದೇವರು ಆ ಕಲ್ಲು ತನ್ನ ವಿಗ್ರಹದಿಂದ ಗ್ರಾಮವನ್ನು ಹಾನಿಯಿಂದ ರಕ್ಷಿಸುತ್ತಾರೆ ಎಂದು ನಂಬಲಾಗಿದೆ.

ಈ ಕಲ್ಲು ಇಲ್ಲಿ ಉದ್ಭವವಾದ ನಂತರ ಗ್ರಾಮಸ್ಥರು ಇಲ್ಲಿ ಬಾಗಿಲು ಮತ್ತು ಬೀಗಗಳನ್ನು ಬಳಸುವುದನ್ನೇ ನಿಲ್ಲಿಸಿದ್ದಾರೆ‌. ಯಾರಾದರೂ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ನಂಬಿದ್ದರು. ಕಾಲಾನಂತರದಲ್ಲಿ, ಈ ನಂಬಿಕೆ ದೈನಂದಿನ ಜೀವನದ ಭಾಗವಾಗಿ ಹೋಗಿದೆ. ಇಲ್ಲಿ ಇಂದಿಗೂ ಕೆಲವು ಮನೆಗಳು ಪ್ರವೇಶದ್ವಾರದಲ್ಲಿ ಸರಳ ಮರದ ಫಲಕ ಅಥವಾ ಬಟ್ಟೆಯ ಪರದೆಗಳನ್ನು ಮಾತ್ರ ಬಳಸುತ್ತವೆ. 2015 ರಲ್ಲಿ ನಿರ್ಮಿಸಲಾದ ಪೊಲೀಸ್ ಠಾಣೆಗೂ ಮುಂಭಾಗದ ಬಾಗಿಲುಗಳೇ ಇಲ್ಲ. ಕೆಲ ವರ್ಷಗಳಲ್ಲಿ ಸಾಂದರ್ಭಿ ಕವಾಗಿ ಕಳ್ಳತನದ ವರದಿಗಳು ಬಂದಿವೆ, ಆದರೂ ಸ್ಥಳೀಯರು ಈ ಘಟನೆಗಳು ಗ್ರಾಮದ ಹೊರಗೆ ನಡೆದಿವೆ ಎಂದು ವಾದಿಸುತ್ತಾರೆ.