ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಲಾರಿ ಓವರ್‌ಟೇಕ್‌ ಮಾಡಲು ಹೋದ ಟ್ಯಾಂಕರ್; ಕೊನೆಗೆ ಆಗಿದ್ದೇನು? ಶಾಕಿಂಗ್‌ ವಿಡಿಯೊ ವೈರಲ್

ಬೆಂಗಳೂರಿನ ರಸ್ತೆಯಲ್ಲಿ ಲಾರಿಯನ್ನು ಓವರ್‌ಟೇಕ್‌ ಮಾಡಲು ಹೋಗಿ ನೀರಿನ ಟ್ಯಾಂಕರ್ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಮುಂದೆ ಹೋಗುತ್ತಿದ್ದ ವಾಹನದ ಹಿಂಭಾಗದಲ್ಲಿ ಇರಿಸಲಾಗಿದ್ದ ಡ್ಯಾಶ್ ಕ್ಯಾಮರಾದಲ್ಲಿ ಈ ಅಪಘಾತದ ದೃಶ್ಯ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಡುರಸ್ತೆಯಲ್ಲಿ ಪಲ್ಟಿ ಹೊಡೆದ ಟ್ಯಾಂಕರ್; ವಿಡಿಯೊ ವೈರಲ್‌

Profile pavithra Apr 15, 2025 4:54 PM

ಬೆಂಗಳೂರು: ಓವರ್‌ಟೇಕ್‌ ಮಾಡುವುದರಿಂದ ಅಪಘಾತಕ್ಕೆ ಸಂಭವಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಜನ ಮತ್ತದೇ ತಪ್ಪುಗಳನ್ನು ಮಾಡಿ ತಮ್ಮ ಜೀವದ ಜತೆಗೆ ಇತರರ ಜೀವಕ್ಕೂ ಕುತ್ತು ತರುತ್ತಾರೆ. ಇದೀಗ ಬೆಂಗಳೂರಿನ ರಸ್ತೆಯಲ್ಲಿ ಲಾರಿಯನ್ನು ಓವರ್‌ಟೇಕ್‌ ಮಾಡಲು ಹೋಗಿ ನೀರಿನ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ರಸ್ತೆಯ ಅಂಚಿನಿಂದ ಲಾರಿಯನ್ನು ಓವರ್‌ಟೇಕ್‌ ಮಾಡಲು ಚಾಲಕ ಎಡಕ್ಕೆ ಚಲಿಸಿದ್ದಾನೆ. ಆದರೆ ಅವನು ವಾಹನದ ನಿಯಂತ್ರಣವನ್ನು ಕಳೆದುಕೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ವಾಟರ್ ಟ್ಯಾಂಕರ್ ವರ್ತೂರಿನಿಂದ ದೊಮ್ಮಸಂದ್ರಕ್ಕೆ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ವಾಹನದ ಹಿಂಭಾಗದಲ್ಲಿ ಇರಿಸಲಾಗಿದ್ದ ಡ್ಯಾಶ್ ಕ್ಯಾಮರಾದಲ್ಲಿ ಈ ಅಪಘಾತದ ದೃಶ್ಯ ಸೆರೆಯಾಗಿದೆ. ಟ್ಯಾಂಕರ್ ಚಾಲಕ ನಿಯಂತ್ರಣ ಕಳೆದುಕೊಂಡು ವಾಹನವು ಎಡಕ್ಕೆ ಬಿದ್ದು ರಸ್ತೆಯ ಕ್ರಾಸಿಂಗ್‍ನಲ್ಲಿ ಬಲಕ್ಕೆ ಉರುಳಿ ನಿಂತಿದೆ. ಟ್ಯಾಂಕ್ ಒಡೆದು ನೀರು ರಸ್ತೆಯ ಮೇಲೆ ಚೆಲ್ಲಿದೆ.

ಭೀಕರ ಅಪಘಾತದ ವಿಡಿಯೊ ಇಲ್ಲಿದೆ ನೋಡಿ...



ಘಟನೆಯಲ್ಲಿ ಟ್ಯಾಂಕರ್ ಚಾಲಕ ಮತ್ತು ಸಹ ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕನ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ಪ್ರಯಾಣಿಕನಿಗೂ ಗಾಯಗಳಾಗಿವೆ. ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ಕೂಡ ವರದಿಯಾಗಿತ್ತು. ಏಪ್ರಿಲ್ 10ರಂದು ಚಿಕ್ಕಮಗಳೂರು ಜಿಲ್ಲೆಯ ಜಯಪುರ ಬಳಿ ಕೆಎಸ್ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಸುಡೋ ಮರುಭೂಮಿಯಲ್ಲಿ ನೀರು, ಆಹಾರವಿಲ್ಲದೆ ಬದುಕುಳಿದಿದ್ದು ಹೇಗೆ? ಶಾಕಿಂಗ್‌ ವಿಡಿಯೊ ಇಲ್ಲಿದೆ

ಮೂರುಗದ್ದೆ ಮತ್ತು ಜಲದುರ್ಗ ನಡುವೆ ಈ ಘಟನೆ ನಡೆದಿದ್ದು, ಬೆಂಗಳೂರು-ಶೃಂಗೇರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪುಟ್ಟಪ್ಪ ಪೂಜಾರಿ ಎಂಬವರ ಮನೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಮನೆಯ ಒಂದು ಭಾಗವು ಹಾನಿಗೊಳಗಾಗಿದೆ ಮತ್ತು ಬಸ್‍ನಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು. ಅಪಘಾತದ ತೀವ್ರತೆಯಿಂದ ಮನೆಯ ನಿವಾಸಿ ಶಾಂತಾ ಅವರಿಗೂ ಗಾಯವಾಗಿದೆ.