ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Statue of Unity: ಏಕತಾ ಪ್ರತಿಮೆಯ ವಿನ್ಯಾಸಕ, ಶಿಲ್ಪಿ ರಾಮ್ ಸುತಾರ್ ಇನ್ನಿಲ್ಲ

Statue of Unity Sculptor died: ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ (Statue of Unity) ಯ ವಿನ್ಯಾಸಕ ಹಾಗೂ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾಗಿದ್ದಾರೆ. ಭಾರತೀಯ ಶಿಲ್ಪಕಲೆಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಅವರು ತಮ್ಮ 100ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.

ಏಕತಾ ಪ್ರತಿಮೆಯ ವಿನ್ಯಾಸಕ, ಶಿಲ್ಪಿ ರಾಮ್ ಸುತಾರ್ ಕೊನೆಯುಸಿರು

ಶಿಲ್ಪಿ ರಾಮ್ ಸುತಾರ್ ಕೊನೆಯುಸಿರು -

Priyanka P
Priyanka P Dec 18, 2025 3:42 PM

ನವದೆಹಲಿ: ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ (Ram Sutar) ಅವರು ಬುಧವಾರ ರಾತ್ರಿ ನೋಯ್ಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಪುತ್ರ ತಿಳಿಸಿದ್ದಾರೆ. ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಏಕತಾ ಪ್ರತಿಮೆ (Statue of Unity) ಯನ್ನು ವಿನ್ಯಾಸಗೊಳಿಸಿದ್ದಕ್ಕೆ ಹೆಸರುವಾಸಿಯಾಗಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ (Sardar Vallabhbhai Patel) ಸಮರ್ಪಿಸಲಾದ ಈ ಪ್ರತಿಮೆಯನ್ನು ಏಕತೆಯ ಪ್ರತಿಮೆ ಎಂದೇ ಕರೆಯುತ್ತಾರೆ.

ರಾಮ್ ಸುತಾರ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ತನ್ನ ತಂದೆ ರಾಮ್ ವಂಜಿ ಸುತಾರ್ ಅವರು ಡಿಸೆಂಬರ್ 17 ರ ಮಧ್ಯರಾತ್ರಿ ನಮ್ಮ ನಿವಾಸದಲ್ಲಿ ನಿಧನರಾದ ಸುದ್ದಿಯನ್ನು ನಿಮಗೆ ತಿಳಿಸಲು ನಮಗೆ ತೀವ್ರ ದುಃಖವಾಗುತ್ತಿದೆ ಎಂದು ಅವರ ಮಗ ಅನಿಲ್ ಸುತಾರ್ ತಿಳಿಸಿದ್ದಾರೆ.

ಬಿರುಗಾಳಿಗೆ ಸಿಲುಕಿ ಕುಸಿದು ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವಿಡಿಯೋ ವೈರಲ್

ಫೆಬ್ರವರಿ 19, 1925 ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದ ಸುತಾರ್, ಬಾಲ್ಯದಿಂದಲೂ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್‌ನಿಂದ ಚಿನ್ನದ ಪದಕ ವಿಜೇತ ಸುತಾರ್ ಅವರು ಅನೇಕ ಸಾಧನಗೆಳನ್ನು ಮಾಡಿದ್ದಾರೆ.

ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗಳು ಮತ್ತು ಸಂಸತ್ತಿನ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿರುವ ಛತ್ರಪತಿ ಶಿವಾಜಿಯ ಪ್ರತಿಮೆಗಳು ಅವರ ಅತ್ಯುತ್ತಮ ಸೃಷ್ಟಿಗಳಲ್ಲಿ ಸ್ಥಾನ ಪಡೆದಿವೆ.

ದೇಶದ ಮೊದಲ ಉಪ ಪ್ರಧಾನಮಂತ್ರಿ ದಿ. ಸರ್ದಾರ್ ಪಟೇಲ್ ಅವರನ್ನು ಗೌರವಿಸುವ ಸಲುವಾಗಿ ಈ ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಸುತಾರ್ ಅವರಿಗೆ 1999 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ, ಸುತಾರ್ ಅವರಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಮಹಾರಾಷ್ಟ್ರ ಭೂಷಣ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿರುವ ಸ್ಟ್ಯಾಚು ಆಫ್ ಯುನಿಟಿಯನ್ನು ಗುಜರಾತ್ ರಾಜ್ಯದ ನರ್ಮದಾ ನದಿಯ ತಟದಲ್ಲಿರುವ ಕೆವಾಡಿಯಾ (ಏಕ್ತಾ ನಗರ) ದಲ್ಲಿ ನಿರ್ಮಿಸಲಾಗಿದೆ. ಇದರ ಎತ್ತರ 182 ಮೀಟರ್ (ಸುಮಾರು 597 ಅಡಿ). ಸರ್ದಾರ್ ಪಟೇಲ್ ಅವರ ಜನ್ಮದಿನವಾದ 31 ಅಕ್ಟೋಬರ್ 2018 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಉದ್ಘಾಟಿಸಿದರು.

ಪ್ರತಿಮೆಯ ವಿಶೇಷತೆ ಏನೆಂದರೆ, ಪ್ರತಿಮೆಯ ಒಳಗೆ ವೀಕ್ಷಣಾ ಗ್ಯಾಲರಿ ಇದ್ದು, ಅಲ್ಲಿಂದ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ನೋಡಬಹುದು. ಭೂಕಂಪ ಹಾಗೂ ಬಲವಾದ ಗಾಳಿಯನ್ನು ತಡೆಯುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಭಾರತದ ಏಕತೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ ನಿರ್ಮಾಣವಾಗಿದೆ.

ಬಾಹ್ಯಾಕಾಶದಿಂದ ನೋಡಬಹುದಾದ ಸುಂದರವಾದ ಮಾನವ ನಿರ್ಮಿತ ರಚನೆಗಳಲ್ಲಿ ವಲ್ಲಭಭಾಯಿ ಪಟೇಲ್‌ರ ಪ್ರತಿಮೆಯು ಒಂದು. ಚೀನಾದಲ್ಲಿರುವ ಸ್ಪ್ರಿಂಗ್‌ ಟೆಂಪಲ್ ಅನ್ನು ಈ ಪ್ರತಿಮೆ ಹಿಂದಿಕ್ಕಿದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 3,000 ಕೋಟಿ ಎಂದು ಹೇಳಲಾಗಿದೆ.