ಲಖನೌ, ಮಾ.13: ಇತ್ತೀಚೆಗೆ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರ ನಡುವಿನ ಜಗಳ, ವಂಚನೆ ಆರೋಪಗಳು ಕೇಳಿಬರುತ್ತಲೇ ಇವೆ. ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬಳು ಬಾಡಿಗೆ ಹಣವನ್ನು ಪಾವತಿಸಲು ನಿರಾಕರಿಸಿದ್ದಲ್ಲದೆ ಕ್ಯಾಬ್ ಚಾಲಕನ ಶರ್ಟ್ ಹಿಡಿದು ರಸ್ತೆಯಲ್ಲೇ ಹೈಡ್ರಾಮಾ ಮಾಡುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ನೋಯ್ಡಾದಿಂದ ಪ್ರಯಾಣಿಸಿದ ಮಹಿಳೆಗೆ ಇಳಿಯುವ ಸ್ಥಳ ಬಂದಾಗ 600 ರುಪಾಯಿ ಪಾವತಿಸಲು ಚಾಲಕ ಕೇಳಿದ್ದಾನೆ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ.
ಮಹಿಳೆಯೊಬ್ಬಳು ಎಸಿ ಕ್ಯಾಬ್ ಅನ್ನು ಬುಕ್ ಮಾಡಿದ್ದಳು. ಆದರೆ ಶುಲ್ಕ 600 ರುಪಾಯಿ ಪಾವತಿಸಲು ನಿರಾಕರಿಸಿದ್ದು ಹಣ ಕೊಡದೆ ಹೊರಟು ಹೋಗಲು ಪ್ರಯತ್ನಿಸಿದ್ದಾಳೆ.
ವಿಡಿಯೊ ನೋಡಿ:
ಮಹಿಳೆಯ ಇಳಿಯುವ ಸ್ಥಳ ಬಂದಾಗ 600 ರೂಪಾಯಿ ಎಂದು ಚಾಲಕ ಹೇಳಿದ್ದಾನೆ. ಮಹಿಳೆ ಮೊದಲು "ನಾನು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿದ್ದೇನೆʼʼ ಎಂದು ಹೇಳಿದ್ದಾಳೆ. ಆದರೆ ಸಾಕ್ಷಿ ಕೇಳಿದಾಗ ʼʼನಾನು ನಗದು ನೀಡಿದ್ದೇನೆʼʼ ಎಂದು ಮಾತು ಬದಲಾಯಿಸಿದ್ದಾಳೆ.
ಇದರಿಂದ ಆಕ್ರೋಶಗೊಂಡ ಚಾಲಕ ಮಹಿಳೆಯ ಬ್ಯಾಗ್ ಹಿಡಿದುಕೊಂಡಿದ್ದಾನೆ. ಆದರೆ ಅವಳು ಹಣ ಪಾವತಿಸಿದ್ದೇನೆ ಪದೇ ಪದೆ ಹೇಳಿದ್ದಾಳೆ. ಬಳಿಕ ಗುಂಪಗೂಡಿದ ಜನರಲ್ಲಿ ಮಹಿಳೆ ಇದನ್ನೇ ಹೇಳಿದ್ದಾಳೆ. ಈ ಸಮಯದಲ್ಲಿ ನಿಂದನೀಯ ಭಾಷೆಯನ್ನು ಬಳಸುವುದೂ ಕಂಡು ಬಂದಿದೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ಸಂದರ್ಭದಲ್ಲಿ ಕ್ಯಾಬ್ ಚಾಲಕ ಇದ್ದಕ್ಕಿದ್ದಂತೆ ಮಹಿಳೆಯ ಫೋನ್ ಅನ್ನು ಕಸಿದುಕೊಂಡಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಹಿಳೆ ಚಾಲಕನ ಟಿ-ಶರ್ಟ್ ಹಿಡಿದು, "ನನ್ನ ಫೋನ್ ವಾಪಸ್ ಕೊಡು" ಎಂದು ಕಿರುಚಾಡಿದ್ದಾಳೆ. ʼʼಪೊಲೀಸರು ಬಂದ ಮೇಲೆ ಮಾತ್ರ ಫೋನ್ ಹಿಂತಿರುಗಿಸುತ್ತೇನೆʼʼ ಎಂದು ಕ್ಯಾಬ್ ಚಾಲಕ ಹೇಳಿದ್ದಾನೆ. ವಿಡಿಯೊದ ಕೊನೆಯಲ್ಲಿ ಚಾಲಕ ಫೋನ್ ಹಿಡಿದು ಓಡುತ್ತಿದ್ದರೆ, ಮಹಿಳೆ ಆತನನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.
ʼʼಬಡ ಚಾಲಕನಿಗೆ ಪಾವತಿಸಲು ನಿಮ್ಮ ಬಳಿ ಹಣ ಇಲ್ಲದಿದ್ದರೆ ಎಸಿ ಕ್ಯಾಬ್‌ನಲ್ಲಿ ರಾಣಿಯಂತೆ ವರ್ತಿಸುವುದನ್ನು ನಿಲ್ಲಿಸಿʼʼ ಎಂದು ಬರೆದು ಈ ವಿಡಿಯೊ ಶೇರ್ ಮಾಡಲಾಗಿದೆ. ಮಹಿಳೆಯ ವರ್ತನೆಯ ವಿರುದ್ಧ ಅನೇಕರು ಕಿಡಿಕಾರಿದ್ದು ಆಕೆಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.