ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಇತ್ತೀಚೆಗೆ ಪ್ರೇಮಿಗಳ ನಡುವಿನ ಸಣ್ಣಪುಟ್ಟ ಜಗಳದ ಹಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಹರಿಯಾಣದ ಗುರುಗ್ರಾಮ್‌ನಲ್ಲಿ ಯುವತಿಯೊಬ್ಬಳು ತನ್ನ ಪ್ರಿಯತಮನಿಗೆ ಸಾರ್ವಜನಿಕವಾಗಿ ಥಳಿಸುತ್ತಿರುವ ಘಟನೆಯೊಂದು ಕಂಡು ಬಂದಿದೆ. ಆಕೆ ಯಾಕಾಗಿ ಹಲ್ಲೆ ನಡೆಸಿದ್ದಾಳೆ ಎನ್ನುವುದು ತಿಳಿದು ಬಂದಿಲ್ಲ.

ಪ್ರಿಯಕರನ ಮೇಲೆ ಅಮಾನುಷವಾಗಿ ಥಳಿಸಿದ ಯುವತಿ: ವಿಡಿಯೊ ವೈರಲ್

ಪ್ರಿಯಕರನ ಮೇಲೆ ಹಲ್ಲೆ ನಡೆಸಿದ ಯುವತಿ -

Profile
Pushpa Kumari Feb 24, 2026 3:16 PM

ಚಂಡೀಗಢ, ಫೆ. 24: ಪ್ರೀತಿಯಲ್ಲಿ ಜಗಳ, ಕೋಪ ಸಾಮಾನ್ಯ. ಪ್ರೇಮಿಗಳ ನಡುವಿನ ಸಣ್ಣಪುಟ್ಟ ಜಗಳದ ಹಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಹರಿಯಾಣದ ಗುರುಗ್ರಾಮದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯತಮನಿಗೆ ಸಾರ್ವಜನಿಕವಾಗಿ ಥಳಿಸುತ್ತಿರುವ ಘಟನೆವೊಂದು ಕಂಡು ಬಂದಿದೆ. ಯುವತಿಯು ತನ್ನ ಪ್ರಿಯಕರನಿಗೆ ಸಾರ್ವಜನಿಕವಾಗಿ ಮನಬಂದಂತೆ ಹೊಡೆದಿದ್ದಾಳೆ. ಈ ವಿಡಿಯೊ ನೋಡಿ ನೆಟ್ಟಿಗರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗುರುಗ್ರಾಮದ ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಪದೇ ಪದೆ ಪ್ರಿಯತಮನಿಗೆ ಕಪಾಳಮೋಕ್ಷ ಮಾಡಿ, ನಿಂದಿಸಿದ್ದಾಳೆ. ವಿಶೇಷ ಅಂದ್ರೆ ಆಕೆಯೇ ಸ್ವತಃ ಪೊಲೀಸರನ್ನು ಕರೆಯಿರಿ ಎಂದು ಕೂಗುತ್ತಲೇ ಆತನ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆದರೆ ಆ ವ್ಯಕ್ತಿ ಮಾತ್ರ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಲೇ ಇಲ್ಲ ಮತ್ತು ಆಕ್ರಮಣಕಾರಿಯಾಗಿ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ದಿಗ್ಭ್ರಮೆಗೊಂಡ ಪ್ರೇಕ್ಷಕರು ಮಧ್ಯ ಪ್ರವೇಶಿಸದೆ ಅವರನ್ನೇ ನೋಡುತ್ತಿದ್ದರು.

ವಿಡಿಯೊ ನೋಡಿ:



ವೈರಲ್ ಆಗಿರುವ ವಿಡಿಯೊದಲ್ಲಿ ಯುವತಿಯೂ ಪದೇ ಪದೆ ಕಪಾಳ ಮೋಕ್ಷ ಮಾಡಿ, ನಿಂದಿಸುತ್ತಿರುವ ದೃಶ್ಯಗಳನ್ನು ನೀವು ನೋಡಬಹುದು. ಈ ದೃಶ್ಯ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು, ಇಂತಹ ಕ್ರೂರ ಮಹಿಳೆಯರು ಕೂಡ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.‌ ಈ ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಮಹಿಳೆಯ ವರ್ತನೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ.

Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ

ಒಂದು ವೇಳೆ ಈ ವ್ಯಕ್ತಿ ಯುವತಿಯ ಮೇಲೆ ಈ ರೀತಿ ಹಲ್ಲೆ ಮಾಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಕಾನೂನು ಎಲ್ಲರಿಗೂ ಸಮಾನ ಅಲ್ಲವೇ? ಎಂದು ಅನೇಕರು ಯುವಕನ ಪರ ಮಾತನಾಡಿದ್ದಾರೆ. ಬಳಕೆದಾರರೊಬ್ಬರು ಯುವತಿಯ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಹಿಳೆಯರಿಗೆ ಸ್ವಾತಂತ್ರ್ಯ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ‌.