ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀವಕ್ಕೆ ಬೆಲೆಯೇ ಇಲ್ವಾ? ಆ್ಯಂಬುಲೆನ್ಸ್‌ಗೂ ದಾರಿ ಕೊಡದೆ ನಡುರಸ್ತೆಯಲ್ಲಿ ಮಹಿಳೆಯಿಂದ ರಂಪಾಟ

Viral Video: ಮಹಿಳೆಯೊಬ್ಬರು ಮತ್ತೊಬ್ಬ ವಾಹನ ಸವಾರನೊಂದಿಗೆ ಜಗಳ ಮಾಡುತ್ತಿದ್ದು ಆ್ಯಂಬುಲೆನ್ಸ್ ಗೂ ದಾರಿ ಬಿಡದೆ ರಂಪಾಟ ಮಾಡಿದ್ದಾಳೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಆ್ಯಂಬುಲೆನ್ಸ್‌ಗೂ ದಾರಿ ಬಿಟ್ಟುಕೊಡದೆ ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಹಿಳೆ

ಜೈಪುರ,ಸೆ.10: ಇಂದು ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ. ಸಾರ್ವಜನಿಕ ಸ್ಥಳದಲ್ಲೂ ಕೆಲವರು ಅಶಿಸ್ತಿನ ನಡವಳಿಕೆಯನ್ನು ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬರು ಮತ್ತೊಬ್ಬ ವಾಹನ ಸವಾರನೊಂದಿಗೆ ಜಗಳ ಮಾಡುತ್ತಿದ್ದು ಆ್ಯಂಬುಲೆನ್ಸ್ ಗೂ ದಾರಿ ಬಿಡದೆ ರಂಪಾಟ ಮಾಡಿದ್ದಾಳೆ. ಈ ಘಟನೆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆಯೂ ಜೈಪುರದ ಪಂಚ್ಯಾವಾಲಾ ಪ್ರದೇಶದ, ವೈಶಾಲಿ ಮಾರ್ಗ ಪಶ್ಚಿಮದಲ್ಲಿರುವ HP ಪೆಟ್ರೋಲ್ ಪಂಪ್ ಬಳಿ ನಡೆದಿದೆ. ರಸ್ತೆಯಲ್ಲಿ ಆ್ಯಂಬುಲೆನ್ಸ್ ಬರುತ್ತಿದ್ದರೂ ತನಗೆ ಮಾತ್ರ ಜಗಳವೇ ಮುಖ್ಯ ಎಂಬಂತೆ ದಾರಿ ಬಿಡದೆ ನಿಂತಿದ್ದಾಳೆ. ಆ್ಯಂಬುಲೆನ್ಸ್ ಸೈರನ್ ಬಾರಿಸುತ್ತಾ ದಾರಿಗಾಗಿ ಕಾಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈಕೆಯ ಈ ನಡವಳಿಕೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು ಈಕೆಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ:



ವೈರಲ್ ವಿಡಿಯೋದ ಪ್ರಕಾರ, ಮಹಿಳೆ ತನ್ನ ಕಾರನ್ನು ಮಧ್ಯ ರಸ್ತೆಯಲ್ಲೇ ನಿಲ್ಲಿಸಿ ಮತ್ತೊಬ್ಬ ಸವಾರನೊಂದಿಗೆ ವಾಗ್ವಾದ ನಡೆಸುತ್ತಾ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಳು. ಆ್ಯಂಬುಲೆನ್ಸ್ ನಿಂತಿದ್ದರೂ ಆಕೆ ದಾರಿ ಬಿಟ್ಟು ಕೊಡಲಿಲ್ಲ. ಆ್ಯಂಬುಲೆನ್ಸ್ ಸೈರನ್ ಬಾರಿಸುತ್ತಾ ದಾರಿಗಾಗಿ ಕಾಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ 76,000ಕ್ಕೂ ಹೆಚ್ಚು ಬಾರೀ ವೀಕ್ಷಿಸಲಾಗಿದ್ದು,ಆಕೆಯ ಪರವಾನಗಿಯನ್ನು ರದ್ದುಗೊಳಿಸಿ, ಆಕೆಗೆ ಭಾರಿ ದಂಡ ವಿಧಿಸಿ. ರೋಗಿಯು ಸತ್ತರೆ, ಆಕೆಯ ಮೇಲೆ ನರಹತ್ಯೆಯ ಕ್ರಿಮಿನಲ್ ಅಪರಾಧದ ಆರೋಪ ಹೊರಿಸಬೇಕು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಕೆಲವರು, ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯನ್ನು ಪ್ರಶ್ನಿಸಿದ್ದು ವಿಡಿಯೋ ಮಾಡುವ ಬದಲು ಮಹಿಳೆಗೆ ಬುದ್ದಿ ಹೇಳಬಹುದಿತ್ತು ಎಂದಿದ್ದಾರೆ‌. ಏನೇ ಜಗಳ ಇರಲಿ, ಇನ್ನೊಂದು ಜೀವ ಅಪಾಯದಲ್ಲಿದೆ ಎನ್ನುವ ಯೋಚನೆ ಆದರೂ ಬೇಕು ಇಂತಹ ವರ್ತನೆ ತೋರುವ ಮಹಿಳೆಯರು ಇದ್ದರಾ? ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮಹಿಳೆಯ ಮೇಲೆ ಪ್ರಕರಣ ದಾಖಲಾಗಿದೆಯೇ? ಪೊಲೀಸರು ಘಟನೆಯ ತನಿಖೆ ನಡೆಸಿದ್ದಾರೆಯೇ ಇನ್ನಷ್ಟೇ ತಿಳಿದು ಬರಬೇಕಿದೆ.