Viral Video: ಚಾಲಕನ ನಿರ್ಲಕ್ಷ್ಯ ತಂದ ಆಪತ್ತು; ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಎಳೆದೊಯ್ದ ಕಾರ್
Viral News: ಕಾರ್ ಚಾಲಕನ ನಿರ್ಲಕ್ಷ್ಯದಿಂದ ಇಂಧನ ತುಂಬಿಸಲು ಬಂದ ಪೆಟ್ರೋಲ್ ಬಂಕ್ ನೌಕರ ತೀವ್ರವಾಗಿ ಗಾಯಗೊಂಡ ಘಟನೆ ಕೇರಳಂನಲ್ಲಿ ನಡೆದಿದೆ. ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸುತ್ತಿದ್ದ ನೌಕರ ರಾಮಚಂದ್ರನ್ ಫ್ಯೂಯಲ್ ನೊಝಲ್ ಹೊರತೆಗೆಯಲು ಯತ್ನಿಸುತ್ತಿದ್ದರು. ಈ ವೇಳೆ ವ್ಯಾಗನ್ ಆರ್ ಕಾರಿನ ಚಾಲಕ ತಕ್ಷಣವೇ ಮುಂದಕ್ಕೆ ಚಲಾಯಿಸಿದ್ದಾನೆ. ಪೈಪ್ ಇನ್ನೂ ಗ್ಯಾಪ್‌ನಲ್ಲೇ ಸಿಲುಕಿದ್ದರಿಂದ, ರಾಮಚಂದ್ರನ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಕಾರು ಮುಂದಕ್ಕೆ ಚಲಿಸಿದ್ದರಿಂದ ಸುಮಾರು ದೂರದ ತನಕ ಎಳೆಯಲ್ಪಟ್ಟಿದ್ದಾರೆ.
ಕೇರಳಂನ ಪೆಟ್ರೋಲ್ ಪಂಪ್ ನೌಕರನನ್ನು ಎಳೆದೊಯ್ದ ವ್ಯಾಗನ್ ಆರ್ ಕಾರ್ -
ತಿರುವನಂತಪುರಂ, ಸೆ. 9: ಕೇರಳಂನ ಆಲಪ್ಪುಳ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಇಂಧನ ತುಂಬಿಸಲು ಬಂದ ಪೆಟ್ರೋಲ್ ಬಂಕ್ ನೌಕರ ತೀವ್ರವಾಗಿ ಗಾಯಗೊಂಡಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸುತ್ತಿದ್ದ ನೌಕರ ರಾಮಚಂದ್ರನ್ ಫ್ಯೂಯಲ್ ನೊಝಲ್ ಹೊರತೆಗೆಯಲು ಯತ್ನಿಸುತ್ತಿದ್ದರು. ಈ ವೇಳೆ ವ್ಯಾಗನ್ ಆರ್ ಕಾರಿನ ಚಾಲಕ ತಕ್ಷಣ ಮುಂದಕ್ಕೆ ಚಲಾಯಿಸಿದ್ದಾನೆ. ಪೈಪ್ ಇನ್ನೂ ಪೆಟ್ರೋಲ್ ಟ್ಯಾಂಕ್‌ನಲ್ಲೇ ಇದ್ದುದರಿಂದ ನೌಕರ ರಾಮಚಂದ್ರನ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಕಾರು ಮುಂದಕ್ಕೆ ಚಲಿಸಿದ್ದರಿಂದ ಅವರು ಸುಮಾರು ದೂರದ ಎಳೆಯಲ್ಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರಿ ವೈರಲ್ (Viral News) ಆಗಿದೆ.
ಆಲಪ್ಪುಳದ ಪಕ್ಕಿ ಜಂಕ್ಷನ್ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಇಂಧನ ತುಂಬುತ್ತಿದ್ದಂತೆ ರಾಮಚಂದ್ರನ್ ನಳಿಕೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾಗ ವ್ಯಾಗನ್ ಆರ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿತು.
ವಿಡಿಯೊ ನೋಡಿ:
A petrol pump employee sustained rib injuries after a fuel dispenser hose became caught in a car at a Bharat Petroleum outlet near Kalarcode Pakki Junction, Alappuzha, Kerala.
— Hate Detector 🔍 (@HateDetectors) September 9, 2026
The incident occurred around noon on September 6 when the car reportedly moved forward before the… pic.twitter.com/Ywej6dseoW
ಅಪಘಾತದ ನಂತರ ಸಹೋದ್ಯೋಗಿಗಳು ತಕ್ಷಣ ಗಾಯಗೊಂಡ ರಾಮಚಂದ್ರನ್ ಅವರಿಗೆ ಸಹಾಯ ಮಾಡಲು ಧಾವಿಸಿದರು. ಅವರನ್ನು ಆರಂಭದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ರಾಮಚಂದ್ರನ್ ಅವರ ಪಕ್ಕಟೆಲುಬುಗಳಿಗೆ ತೀವ್ರ ಪೆಟ್ಟಾಗಿದ್ದು, ದೇಹದ ಇತರ ಭಾಗಗಳಿಗೂ ಗಾಯಗಳಾಗಿವೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ವೈರಲ್ ಆದ ದೃಶ್ಯದಲ್ಲಿ ನೌಕರ ರಾಮಚಂದ್ರನ್ ಫ್ಯೂಯಲ್ ನೊಝಲ್ ಹೊರತೆಗೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಈ ವೇಳೆ ವ್ಯಾಗನ್ ಆರ್ ಕಾರಿನ ಚಾಲಕ ತಕ್ಷಣವೇ ಚಲಾಯಿಸಿದ್ದಾನೆ. ಪೈಪ್ ಇನ್ನೂ ಟ್ಯಾಂಕ್‌ನಲ್ಲೇ ಸಿಲುಕಿದ್ದರಿಂದ ರಾಮಚಂದ್ರನ್ ಆಯ ತಪ್ಪಿ ಬಿದ್ದಿದ್ದಾರೆ. ಕಾರಿನ ರಭಸಕ್ಕೆ ಅವರು ಬಂಕ್‌ನ ನೆಲದ ಮೇಲೆ ಕೆಲ ಮೀಟರ್‌ಗಳಷ್ಟು ದೂರ ಎಳೆಯಲ್ಪಟ್ಟಿದ್ದಾರೆ.
ಸಿಸಿಟಿವಿ ವಿಡಿಯೊ ಕಾಣಿಸಿಕೊಂಡ ನಂತರ ಸ್ಥಳೀಯ ಪೊಲೀಸರು ಘಟನೆಯನ್ನು ಗಮನಿಸಿದ್ದಾರೆ. ತನಿಖಾಧಿಕಾರಿಗಳು ದೃಶ್ಯಗಳನ್ನು ಪರಿಶೀಲಿಸುತ್ತಿದ್ದು ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ವ್ಯಾಗನ್ ಆರ್ ಚಾಲಕನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ರಾಮಚಂದ್ರನ್ ಅವರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯದ ಚಾಲನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.