ನವದೆಹಲಿ, ಡಿ. 21: ಭಾರತದಲ್ಲಿ ಆರೇಂಜ್ಡ್ ಮದುವೆಯಾಗುವುದೇ ಹೆಚ್ಚು (Arrange Marriage). ಸಂಪ್ರದಾಯವಾದಿಗಳು, ಹಿರಿಯರು ಲವ್ ಮ್ಯಾರೇಜ್‌ಗೆ ಸುಲಭವಾಗಿ ಒಪ್ಪಿಗೆ ಸೂಚಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ಇತ್ತೀಚೆಗೆ ಸಂಪ್ರದಾಯಿಕ ವಿವಾಹ ಪದ್ಧತಿಯನ್ನು ಪ್ರಶ್ನಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆರೇಂಜ್ಡ್ ಮ್ಯಾರೇಜ್ ಬಗ್ಗೆ ಮಹಿಳೆಯರೂ ಪ್ರಶ್ನಿಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವಿಡಿಯೊ (viral video) ಮತ್ತೊಮ್ಮೆ ಈ ಸಮಸ್ಯೆಯನ್ನು ಗಮನಕ್ಕೆ ತಂದಿದೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತಮ್ಮ ಸ್ನೇಹಿತೆಯ ನಿಯೋಜಿತ ವಿವಾಹ ಪ್ರಕ್ರಿಯೆಯಲ್ಲಿ ಎದುರಿಸಿದ ಮೂರು ಅಹಿತಕರ ಘಟನೆಯ ಅನುಭವವನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಮಹಿಳೆಯು ಟಾಕ್ಸಿಕ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕಿಂಡು ಏರ್‌ಪೋರ್ಟ್‌ನಲ್ಲಿ ಮೂಲ ಸೌಕರ್ಯದ ಕೊರತೆ: ವಿಮಾನದಿಂದ ಜಿಗಿದ ಪ್ರಯಾಣಿಕರು
ಒಬ್ಬ ವರನ ಕುಟುಂಬವು ವಧುವಿಗೆ ಪ್ರತಿದಿನ ಸುಮಾರು 30 ಜನರಿಗೆ ಅಡುಗೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ಕೇಳಿದ್ದಾರೆ. ಅವರ ಮಗನಿಗೆ ಅಡುಗೆ ಅಥವಾ ಮನೆಯ ಜವಾಬ್ದಾರಿಗಳ ಬಗ್ಗೆ ಏನೂ ತಿಳಿದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಬೇಡಿಕೆಯು ಮಹಿಳೆಯರ ವೃತ್ತಿ ಜೀವನವನ್ನು ಲೆಕ್ಕಿಸದೆ, ಮನೆಕೆಲಸದ ನಿರೀಕ್ಷೆಗಳನ್ನು ಏಕೆ ಅವರ ಮೇಲೆ ಹೇರಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಇನ್ನೊಂದು ಘಟನೆಯಲ್ಲಿ ಮದುವೆಯ ನಂತರ ಆಕೆ ತನ್ನ ಹೆತ್ತವರನ್ನು ನೋಡಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಸಂಬಂಧ ಮುರಿದು ಬಿತ್ತು. ಅವಳು ಒಬ್ಬಳೇ ಮಗಳಾಗಿದ್ದರಿಂದ ಈ ವಿಚಾರವು ಬಹಳಷ್ಟು ಸೂಕ್ಷ್ಮವಾಗಿತ್ತು. ಈ ನಿರಾಕರಣೆಯು ದ್ವಂದ್ವ ನೀತಿಯನ್ನು ಎತ್ತಿ ತೋರಿಸಿತು. ಇಲ್ಲಿ ವಧುವು ತನ್ನ ಗಂಡನ ಕುಟುಂಬಕ್ಕೆ ಆದ್ಯತೆ ನೀಡಿ ತಮ್ಮ ಕುಟುಂಬದಿಂದ ದೂರವಾಗಬೇಕೆಂದು ನಿರೀಕ್ಷಿಸಲಾಗಿದೆ.
ಮೂರನೇ ಘಟನೆಯಲ್ಲಿ, ಭಾವಿ ವರನೊಬ್ಬ ಯುವತಿ ಟ್ಯಾಟೊ ತೆಗೆಯುವಂತೆ ಹೇಳಿದ್ದಾನೆ ಎನ್ನಲಾಗಿದೆ. ಈ ಬೇಡಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಆ ಯುವತಿ ಮೂರೂ ಮದುವೆ ಪ್ರಸ್ತಾಪಗಳನ್ನು ನಿರಾಕರಿಸಿದಳು.
ಅಯ್ಯೊಯ್ಯೋ ಸೇತುವೆ ಮೇಲಿಂದ ಫುಲ್ ಅಪ್ ಮಾಡಿ ಹುಚ್ಚಾಟ ಮೆರೆದ ವ್ಯಕ್ತಿ; ವಿಡಿಯೋ ವೈರಲ್
ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ nidhi_rathi.15ರಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಯುವತಿಗೆ ಬೆಂಬಲ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಮಹಿಳೆಯರು ಸೇರಿದಂತೆ ಅನೇಕ ಬಳಕೆದಾರರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡರು. ಒಂದೇ ವೃತ್ತಿಯೊಳಗಿನ ವಿವಾಹಗಳು ಸಹ ಪಿತೃಪ್ರಭುತ್ವದ ಸಂಪ್ರದಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇತರರು, ಮಹಿಳೆಯರು ತಮ್ಮ ಮದುವೆಗೆ ಸಮಯವನ್ನು ತೆಗೆದುಕೊಳ್ಳಬೇಕು. ಆತುರವಾಗಿ ಮದುವೆಯಾಗಬಾರದು. ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಬೇಕು ಮತ್ತು ಅಸಮಾನತೆಯಲ್ಲಿ ಬೇರೂರಿರುವ ಸಂಬಂಧಗಳನ್ನು ನಿರಾಕರಿಸಬೇಕು ಎಂದು ಸಲಹೆ ನೀಡಿದರು.