ಕಿಂಡು ಏರ್‌ಪೋರ್ಟ್‌ನಲ್ಲಿ ಮೂಲ ಸೌಕರ್ಯದ ಕೊರತೆ: ವಿಮಾನದಿಂದ ಜಿಗಿದ ಪ್ರಯಾಣಿಕರು
ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿಂಡು ಏರ್‌ಪೋರ್ಟ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆಯಿತು. ಏರ್ ಕಾಂಗೋ ಫ್ಲೈಟ್‌ನಿಂದ ಪ್ರಯಾಣಿಕರು ಜಿಗಿದಿರುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕಿಂಡು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ -
ಕಿಂಶಾಸ, ಡಿ. 21: ಇತ್ತೀಚೆಗಷ್ಟೇ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ರದ್ದಾಗಿ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದೀಗ ಏರ್ ಕಾಂಗೋ ವಿಮಾನದ ಬೇಜವಾಬ್ದಾರಿಯಿಂದ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿಂಡು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಸೂಕ್ತ ಸೌಕರ್ಯವಿಲ್ಲದ ಕಾರಣ ಫ್ಲೈಟ್‌ನಿಂದ ಜಿಗಿದು ಹೊರಬಂದಿದ್ದಾರೆ. ಮನಿಯೆಮಾ ಪ್ರಾಂತ್ಯದಲ್ಲಿರುವ ಕಿಂಡು ವಿಮಾನ ನಿಲ್ದಾಣವು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಸೀಮಿತ ಮೂಲ ಸೌಕರ್ಯದಿಂದ ಬಳಲುತ್ತಿದೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೊವೊಂದು ಭಾರಿ ವೈರಲ್ (Viral Video) ಆಗಿದೆ.
ಇತ್ತೀಚೆಗಷ್ಟೇ ಪ್ರಾರಂಭವಾದ 'ಏರ್ ಕಾಂಗೋ' ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಿದವರು ಕಿಂಡು ವಿಮಾನದಲ್ಲಿ ನಿಲ್ದಾಣದಲ್ಲಿ ಪರದಾಡಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಯಾಣಿಕರಿಗೆ ಇಳಿಯಲು ಬೇಕಾದ ಮೆಟ್ಟಿಲುಗಳ (Mobile Stairs) ವ್ಯವಸ್ಥೆಯನ್ನು ಮಾಡಲು ವಿಮಾನ ನಿಲ್ದಾಣದ ಸಿಬ್ಬಂದಿ ವಿಫಲರಾಗಿದ್ದಾರೆ. ಹೀಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ವಿಮಾನದ ಒಳಗೆಯೇ ಪ್ರಯಾಣಿಕರು ಕಾಯಬೇಕಾಯಿತು. ಕೊನೆಗೆ ಬೇರೆ ದಾರಿ ಕಾಣದೆ, ವಿಮಾನದ ಬಾಗಿಲಿನಿಂದ ಸುಮಾರು 5ರಿಂದ 6 ಅಡಿ ಎತ್ತರದಿಂ ರನ್ ವೇ ಪಕ್ಕದ ನೆಲ ಮೇಲೆ ಒಬ್ಬೊಬ್ಬರಾಗಿ ಪ್ರಯಾಣಿಕರು ಜಿಗಿದಿದ್ದಾರೆ. ಈ ದೃಶ್ಯದ ವಿಡಿಯೊ ಸದ್ಯ ಭಾರೀ ವೈರಲ್ ಆಗಿದೆ.
ವಿಡಿಯೊ ನೋಡಿ:
Kindu : les passagers de la compagnie Air Congo obligés de sauter de l’avion par manque d’escalier pour le débarquement pic.twitter.com/eO2mlHlynS
— Les Consommateurs Lésés (@MNCL_RDC) December 19, 2025
ವೃದ್ಧರು ಮತ್ತು ಅನಾರೋಗ್ಯ ಪೀಡಿತರು ಅಷ್ಟು ಎತ್ತರದಿಂದ ಜಿಗಿಯುವುದು ಅತ್ಯಂತ ಅಪಾಯಕಾರಿಯಾಗಿದ್ದು, ವಿಮಾನಯಾನ ಸಂಸ್ಥೆಯ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಕಿಂಡು ವಿಮಾನ ನಿಲ್ದಾಣವು ಪ್ರಾದೇಶಿಕವಾಗಿ ಉತ್ತಮವಾಗಿದ್ದರೂ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಪಾಕಿಸ್ತಾನದ ಪಾರ್ಟಿ ಸಂಭ್ರಮದಲ್ಲಿ ಧುರಂದರ್ ಹಾಡಿನ ಹವಾ: ವಿಡಿಯೊ ವೈರಲ್
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಾದ ಮೆಟ್ಟಿಲುಗಳಂತಹ ಉಪಕರಣಗಳ ಕೊರತೆ ಎದುರಿಸುತ್ತಿವೆ. ಸದ್ಯ ಘಟನೆಯ ವಿಡಿಯೊವನ್ನು @fl360aero ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ʼʼವಿಮಾನ ಬಾಗಿಲಿನಿಂದ ಹಾರಿದ ಪ್ರಯಾಣಿಕರುʼʼ ಎಂದು ಬರೆಯಲಾಗಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ. ನೆಟ್ಟಿಗರೊಬ್ಬರು, ಇತ್ತೀಚೆಗೆ ವಿಮಾಯಾನ ಸಂಸ್ಥೆಗಳು ಭಾರಿ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ.