ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?

ಸಮುದ್ರದ ಅಲೆಯಲ್ಲಿ ವೃದ್ಧನೊಬ್ಬ ಸಿಲುಕಿಕೊಂಡಿದ್ದು ಸ್ಥಳೀಯರು ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಸ್ಥಳೀಯ ಯುವಕರು ನೀರಿಗೆ ಹಾರಿ ಅವರನ್ನು ಮರಳಿ ಕರೆತರಲು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಆದರೆ ದಡಕ್ಕೆ ಬರುತ್ತಿದ್ದಂತೆ ರಕ್ಷಕನೊಬ್ಬ ವೃದ್ಧನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ನಡೆಯುತ್ತಿದೆ.

ಗುಜರಾತ್‌ನಲ್ಲಿ ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿದ ಯುವಕರು

ಗಾಂಧಿನಗರ, ಜೂ. 17: ಗುಜರಾತ್‌ನ ದ್ವಾರಕಾದ ಗೋಮತಿ ಘಾಟ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತೀವ್ರ ಸಮುದ್ರದ ಅಲೆಗೆ ಸಿಲುಕಿಕೊಂಡ ವೃದ್ಧರೊಬ್ಬರನ್ನು ಸ್ಥಳೀಯರು ತಮ್ಮ ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಸ್ಥಳೀಯ ಯುವಕ ಗುಂಪು ನೀರಿಗೆ ಹಾರಿ ಅವರನ್ನು ಮರಳಿ ಕರೆತರಲು ತಮ್ಮ ಜೀವವನ್ನೆ ಪಣಕ್ಕಿಟ್ಟರು. ಅಚ್ಚರಿ ಎಂದರೆ ರಕ್ಷಣೆಯ ನಂತರ ದಡಕ್ಕೆ ಬರುತ್ತಿದ್ದಂತೆ ರಕ್ಷಕನೊಬ್ಬ ವೃದ್ಧರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಗೋಮತಿ ಘಾಟ್‌ನ ಕಲ್ಲಿನ ಮೆಟ್ಟಿಲುಗಳ ಬಳಿ ಭೀಕರವಾಗಿ ಅಪ್ಪಳಿಸಿದ ನೀರಿನ ಅಲೆಗಳ ಮಧ್ಯೆ ವೃದ್ಧನೊಬ್ಬರು ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿ ಸ್ಥಳೀಯ ಯುವಕರ ಗುಂಪೊಂದು ತಕ್ಷಣ ಸಮುದ್ರಕ್ಕೆ ಧುಮುಕಿ, ವೃದ್ಧರನ್ನು ಸುರಕ್ಷಿತವಾಗಿ ದಡಕ್ಕೆ ಎಳೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೊ ನೋಡಿ:



ವೈರಲ್ ಆದ ಕ್ಲಿಪ್‌ನಲ್ಲಿ, ಅಲೆಗಳು ದಡದ ಬಳಿಯ ಮೆಟ್ಟಿಲುಗಳಿಗೆ ಅಪ್ಪಳಿಸುತ್ತಿದ್ದಂತೆ ಆ ವ್ಯಕ್ತಿ ನೀರಿನಲ್ಲಿ ಹೋರಾಡುತ್ತಿರುವುದನ್ನು ಕಾಣಬಹುದು. ಈ ಕೂಡಲೇ ಯುವಕರ ಗುಂಪು ತ್ವರಿತವಾಗಿ ಕಾರ್ಯ ನಿರ್ವಹಿಸಿತು. ಕೆಲವು ಯುವಕರು ವೃದ್ಧರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದು ಅಪಾಯಕಾರಿ ಪರಿಸ್ಥಿತಿಗಳ ಹೊರತಾಗಿಯೂ ಸುರಕ್ಷಿತವಾಗಿ ದಡಕ್ಕ ಕರೆ ತಂದರು.

ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ವೃದ್ಧ ಪಾರಾಗಿ ಮೆಟ್ಟಿಲುಗಳ ಮೇಲೆ ಬರುತ್ತಿದ್ದಂತೆ, ಒಬ್ಬ ರಕ್ಷಕ ಕಪಾಳಮೋಕ್ಷ ಮಾಡಿದ್ದಾನೆ. ಇತರರನ್ನು ಅಪಾಯಕ್ಕೆ ಸಿಲುಕಿಸಿದ್ದರಿಂದ ಹತಾಶೆಯಿಂದ ವೃದ್ಧರಿಗೆ ಹೊಡೆದಿದ್ದಾನೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕರು ಯುವಕರ ಸಾಹಸವನ್ನು ಹೊಗಳಿದ್ದಾರೆ‌. ತಮ್ಮ ಜೀವ ಪಣಕಿಟ್ಟು ಪ್ರಾಣ ಉಳಿಸಿದ್ದಾರೆ. ಹತಾಶೆಯಿಂದ ಹೊಡೆದಿರುವುದು ತಪ್ಪಲ್ಲ ಎಂದು ಬರೆದಿದ್ದಾರೆ.