ಲಖನೌ, ಡಿ. 22: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ಸುಮಧುರ ಬಾಂಧವ್ಯ. ಬಂಧು ಬಳಗದ ಸಮ್ಮುಖದಲ್ಲಿ, ಮೇಳ ವಾದ್ಯಗಳ ಘೋಷದಲ್ಲಿ ಸತಿಪತಿಗಳಾಗುವ ಇಂತಹ ವಿವಾಹ ಕಾರ್ಯಕ್ರಮಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸಲಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಯುವ ಸಮುದಾಯದವರು, ಪ್ರೇಮಿಗಳು ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿದ್ದಾರೆ. ದೇವಸ್ಥಾನ, ಚರ್ಚ್‌ನಲ್ಲಿ ಮದುವೆಯಾಗಿ ರಿಜಿಸ್ಟರ್ ಆಫೀಸ್‌ನಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಜೋಡಿ ಗಾಜಿಯಾಬಾದ್‌ನ ಶಾಪಿಂಗ್ ಮಾಲ್‌ನಲ್ಲೇ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಪ್ರೇಮಿಯು ತನ್ನ ಪ್ರೇಯಸಿಯ ಹಣೆಗೆ ಸಿಂಧೂರ ಹಚ್ಚಿ ಬಳಿಕ ಮಂಗಳಸೂತ್ರ ಕಟ್ಟಿ ವಿಭಿನ್ನವಾಗಿ ಮಾಲ್‌ನಲ್ಲಿ ಮದುವೆಯಾಗಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ಒಂದು ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗಿದೆ.
ವಿಡಿಯೊದ ಆರಂಭದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮಾಲ್‌ನಲ್ಲಿ ಯುವಕನೊಬ್ಬ ಎಲ್ಲರ ಮುಂದೆಯೇ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಲು ಮೊಣಕಾಲೂರಿ ಕುಳಿತಿದ್ದ ದೃಶ್ಯವನ್ನು ಕಂಡು ಬಂದಿದೆ. ಅಲ್ಲಿದ್ದವರೆಲ್ಲ ಇದು ಲವ್ ಪ್ರಪೋಸ್ ಅಷ್ಟೇ ಎಂದುಕೊಂಡಿದ್ದರು. ಆದರೆ ಅದಾದ ಬಳಿಕ ಪೂರ್ತಿ ಮದುವೆಯೇ ನಡೆದು ಹೋಗಿದ್ದು ಅಲ್ಲಿದ್ದರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ವಿಡಿಯೊ ನೋಡಿ:
ಬಳಿಕ ಆಕೆ ಅವನ ಹತ್ತಿರ ಬಂದು ಮೊಣಕಾಲುರಿ ಕುಳಿತಿದ್ದಳು. ಆಗ ಆಕೆಯ ಹಣೆಗೆ ಆ ಯುವಕ ಸಿಂಧೂರ ಹಚ್ಚಿದ್ದಾನೆ. ಅನಂತರ ಆಕೆಯ ಕುತ್ತಿಗೆಗೆ ಮಂಗಳಸೂತ್ರ ಕಟ್ಟುತ್ತಿರುವುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು. ಅಲ್ಲಿದ್ದ ಜನರು ತಮ್ಮ ಫೋನ್‌ಗಳಲ್ಲಿ ಈ ಕ್ಷಣವನ್ನು ರೆಕಾರ್ಡ್ ಮಾಡಿದ್ದು ಅದರಲ್ಲೊಬ್ಬರು ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
Greater Noida West ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಕೆಲವೇ ಗಂಟೆಯಲ್ಲಿ ಇದು ಲಕ್ಷಾಂತರ ವೀವ್ಸ್ , ಲೈಕ್ಸ್ ಪಡೆದುಕೊಂಡಿದೆ. ಈ ಯುವ ಪ್ರೇಮಿಗಳು ಯಾರು? ಮಾಲ್‌ನಲ್ಲಿ ವಿವಾಹವಾಗಲು ಕಾರಣ ಏನು? ಇವರ ಮದುವೆ ಮಾಡಿಸಲು ಹೆತ್ತವರ ವಿರೋಧ ಇದ್ದ ಕಾರಣಕ್ಕೆ ಇಲ್ಲಿ ವಿವಾಹವಾಗಿದ್ದಾರಾ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಅನೇಕರು ಪ್ರಶ್ನಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಖ್ಯಾತಿಪಡೆಯುವ ಉದ್ದೇಶದಿಂದ ಏನು ಬೇಕಾದರು ಮಾಡುತ್ತಾರೆ. ಪ್ರಚಾರಕ್ಕಾಗಿ ಹೀಗೆ ಮಾಡಿದ್ದರೆ ಅದು ತಪ್ಪು. ನಿಜವಾಗಿಯೂ ಬೇರೆ ಆಗಬಾರದು, ಒಟ್ಟಿಗೆ ಬಾಳ್ವೆ ನಡೆಸಬೇಕು ಎಂಬ ಉದ್ದೇಶ ಅವರಿಗಿದ್ದರೆ ಅದು ತಪ್ಪಲ್ಲ. ನಿಮ್ಮ ಹೆತ್ತವರ ಸಮ್ಮುಖದಲ್ಲಿ ಒಪ್ಪಿಸಿ ಮದುವೆ ಆಗಬಹುದಿತ್ತು ಎಂದು ಬರೆದುಕೊಂಡಿದ್ದಾರೆ. ಇಂತಹ ಯುವಕರಿಗೆ ಇಷ್ಟೊಂದು ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ? ಇದು ಮಾಲ್ ಅಥವಾ ಮದುವೆ ಮಂಟಪವೇ? ಜನರು ಇಂತಹದ್ದನ್ನು ಬೆಂಬಲಿಸಬಾರದು ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.