ಕೇರಳ,ಆ.20: ಮಾದಕ ವ್ಯಸನ ತ್ಯಜಿಸುವ ಜಾಗೃತಿ ಮೂಡಿಸಲು ಇಲ್ಲೊಬ್ಬ ಯುವಕ ವಿಭಿನ್ನ ಸಾಹಸ ಮಾಡಿದ್ದಾರೆ. ಮುಂಭಾಗದ ಚಕ್ರವಿಲ್ಲದೆ ಸಾವಿರಾರು ಕಿಲೋಮೀಟರ್ ಸೈಕಲ್ ಸವಾರಿ ಮಾಡುವ ಮೂಲಕ ಕೇರಳದ ಯುವಕ ಭಾರೀ ಸುದ್ದಿಯಾಗಿದ್ದಾರೆ. ಬರೋಬ್ಬರಿ 7,000 ಕಿಲೋ ಮೀಟರ್ ಸೈಕಲ್ ನಲ್ಲೇ ಪ್ರಯಾಣಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ವಿಶೇಷ ಜಾಗೃತಿ ಅಭಿಯಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಸಿವಿಲ್ ಎಂಜಿನಿಯರಿಂಗ್ ಮತ್ತು ಪದವೀಧರರಾದ ಸನೀದ್ ಅವರು ಸುಮಾರು 12 ವರ್ಷಗಳಿಂದ ಬೈಕ್ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಅವರು ಭಾರತೀಯ ಸೇನೆಗೆ ಪೆರೇಡ್ ಸ್ಟಂಟ್‌ಗಳಿಗಾಗಿ ತರಬೇತಿಯನ್ನು ಕೂಡ ನೀಡುತ್ತಾರೆ. ಇದೀಗ ಮುಂಭಾಗದ ಚಕ್ರವೇ ಇಲ್ಲದೆ ಸೈಕಲ್‌ನಲ್ಲಿ ಬರೋಬ್ಬರಿ 7,000 ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣ ಮಾಡಿದ್ದಾರೆ.
ವಿಡಿಯೋ ನೋಡಿ:
ಸನೀದ್ ಅವರ ಈ ಅಭಿಯಾನವು ಆರೋಗ್ಯಕರ ಆಯ್ಕೆಗಳಿಗಾಗಿ ಆಗಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿಯನ್ನು ಮೂಡಿಸಲು ಈ ಸಾಹಸ ಕೈಗೊಂಡಿದ್ದಾರೆ. ಕೇರಳ, ತಮಿಳುನಾಡು ಮತ್ತು ಭಾರತದಾದ್ಯಂತ ಮಾದಕ ದ್ರವ್ಯಗಳ ಸೇವನೆ ಬೇಡ ಎಂದು ಹೇಳುವ ಸಂದೇಶವನ್ನು ನೀಡಲು ಬಯಸಿದ್ದಾರೆ. ಈ ಅಭಿಯಾನಕ್ಕಾಗಿ ಫ್ರಂಟ್ ವೀಲ್ ಇಲ್ಲದೆ ಸೈಕಲ್ ತುಳಿದು ಕೇರಳದಿಂದ ನೇಪಾಳಕ್ಕೆ 7 ಸಾವಿರ ಕಿ.ಮೀ. ಸವಾರಿ ಮಾಡಿದ್ದಾರೆ.
ಈ ಹಿಂದೆ ಕೇರಳದಿಂದ ಕಾಶ್ಮೀರದವರೆಗೆ ಮುಂಭಾಗದ ಚಕ್ರವಿಲ್ಲದೆ ಸೈಕಲ್ ತುಳಿದಿದ್ದ ಸನೀದ್, ಈಗ ಕೇರಳದಿಂದ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಲು ಗುರಿ ಹೊಂದಿದ್ದಾರೆ. ಸನೀದ್ ಪ್ರತಿದಿನ ಸುಮಾರು 50 ರಿಂದ 60 ಕಿಮೀ ಕ್ರಮಿಸುತ್ತಿದ್ದು ರಸ್ತೆಯ ಪರಿಸ್ಥಿತಿಯನ್ನು ಎದುರಿಸಿ ಸೈಕಲ್ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
ಕೆಲವರು ಈ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸದರೆ ಇನ್ನು ಕೆಲವರು ಟೀಕೆ ವ್ಯಕ್ತ ಪಡಿಸಿದ್ದು ಸ್ಟಂಟ್‌ನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಕೆದಾರರೊಬ್ಬರು "ಅವರು ಬಹುಶಃ ತಮ್ಮ ಸುರಕ್ಷತೆಗಿಂತ ಇತರರ ಸುರಕ್ಷತೆಯ ಬಗ್ಗೆ ಯೋಚಿಸಬಹುದು" ಎಂದು ಬರೆದಿದ್ದಾರೆ. ಮತ್ತೊಬ್ಬರು "ಬ್ರೋ ಡ್ರಗ್ಸ್ ತೆಗೆದುಕೊಳ್ಳುವ ಜನರನ್ನು ಗೊಂದಲಗೊಳಿಸಲು ಹೀಗೆ ಮಾಡಿರಬಹುದು ಅಂದರು.