ನವದೆಹಲಿ,ಮಾ.17: ಇಂದು ಆಫೀಸ್ ಮೀಟಿಂಗ್, ಸಂದರ್ಶನ ಅಂತ ಬಂದಾಗ ಆನ್ ಲೈನ್ ಮೂಲಕವೇ ಹೆಚ್ಚಾಗಿ ನಡೆಯುತ್ತದೆ. ಅದರಲ್ಲೂ ವಿಡಿಯೊ ಕಾಲ್ ಮೀಟಿಂಗ್ ಅಂದಾಗ ರೆಡಿಯಾಗಿ ಶಿಸ್ತಿನಿಂದ ಕುಳಿತುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬಳು ಜಿನ್- ಜಿ ಉದ್ಯೋಗಿ ವಿಡಿಯೊ ಕಾಲ್ ನಲ್ಲಿ ಭಾಗವಹಿಸಿದ ದೃಶ್ಯ (Viral News) ಮತ್ತು ಅದಕ್ಕೆ ಆಫೀಸ್ ನ ಬಾಸ್ ನೀಡಿರುವ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ.
ಆಫೀಸ್ ಮಿಟಿಂಗ್ ಆರಂಭವಾಗುತ್ತಿದ್ದಂತೆ ಒಬ್ಬ ಉದ್ಯೋಗಿ ಫೇಸ್ ಮಾಸ್ಕ್ ಧರಿಸಿ ತಮ್ಮ ಕ್ಯಾಮೆರಾವನ್ನು ಆನ್ ಮಾಡಿದ್ದು ಇದನ್ನು ಕಂಡು ಮೀಟಿಂಗ್ ನಲ್ಲಿದ್ದ ಅನೇಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಈ ವೀಡಿಯೊವನ್ನು ರಿಮೋಟ್‌ಸ್ಟಾರ್ ಲಿಮಿಟೆಡ್ ಎಂಬ ಕಂಪನಿಯು ಇನ್ ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ತಂಡದ ಮೀಟಿಂಗ್ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ, ಆದರೆ ಶೀಘ್ರದಲ್ಲೇ ಒಂದು ಮೋಜಿನ ತಿರುವು ಪಡೆದುಕೊಂಡಿದೆ.
ವಿಡಿಯೋ ನೋಡಿ:
ಯುವತಿಯೊಬ್ಬಳು ಸಾಮಾನ್ಯವಾಗಿ ಕಚೇರಿಗಳಲ್ಲಿ ಕಾಣಿಸಿಕೊಳ್ಳುವಂತೆ ಬದಲು, ಅವರು ತಲೆಗೆ ಟವೆಲ್ ಸುತ್ತಿ ಕೊಂಡು ಮುಖಕ್ಕೆ ಫೇಸ್ ಮಾಸ್ಕ್ ಹಚ್ಚಿಕೊಂಡು ಕಾಣಿಸಿಕೊಂಡಿದ್ದಾರೆ. ಮುಖಕ್ಕೆ ಹಸಿರು ಬಣ್ಣದ ಪೇಸ್ ಮಾಸ್ಕ್ ಹಾಕಿ ಜ್ಯೂಸ್ ಕುಡಿಯುತ್ತಾ ಕೆಲಸದ ವಿವರವನ್ನು ಹೇಳುತ್ತಿದ್ದಳು. ಕರೆಯಲ್ಲಿರುವ ಇತರ ಸದಸ್ಯರು ನಗುತ್ತಿರುವುದನ್ನು ಕಾಣಬಹುದು.
ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಕಂಪನಿಯ ಸಿಇಓ ಕೋಪಗೊಳ್ಳುವ ಬದಲು ತಮಾಷೆ ಮಾಡಿದ್ದಾರೆ. ಅವರು ಶಾಂತ ಮತ್ತು ಹಾಸ್ಯಮಯ ರೀತಿಯಲ್ಲಿ ಉದ್ಯೋಗಿ ತನ್ನ ಅಪ್‌ಡೇಟ್ ಅನ್ನು ಪೂರ್ಣಗೊಳಿಸಿದ ನಂತರ ಕೇಳುತ್ತಾರೆ. "ಇದು ಯಾವ ಫೇಸ್ ಮಾಸ್ಕ್? ಕಡಲಕಳೆ ಅಥವಾ ಸಮುದ್ರದ ಪಾಚಿಯೇ?
Viral Video: ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಅದಕ್ಕೆ ಆ ಉದ್ಯೋಗಿ ಯಾವುದೇ ರೀತಿ ಭಯ ಪಡದೆ "ಇದು ಬೇವು ..ನೀವು ಕೂಡ ಇದನ್ನು ಹಚ್ಚಿಕೊಳ್ಳಿ" ಎಂದು ಸಿಒಓ ಗೆ ಸಲಹೆ ನೀಡಿದ್ದಾರೆ. ಇದು ಉದ್ಯೋಗಿಗಳೇ ಸೇರಿ ಬಾಸ್ ಗೆ ಮಾಡಿದ ತಮಾಷೆಯಾಗಿತ್ತು. ಈ ಕ್ಲಿಪ್ ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆದಿದ್ದು ಎಂಟು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಒಬ್ಬ ಬಳಕೆದಾರರು, "ಸಿಇಒ ಪೇಸ್ ಮಾಸ್ಕ್ ಇಷ್ಟ ಪಟ್ಟಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಇತಿಹಾಸದಲ್ಲಿ ಇದುವರೆಗಿನ ಅತ್ಯುತ್ತಮ ಸಿಇ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಜೆನ್- ಜಿ ಉದ್ಯೋಗಿಗಳು ಭಾರೀ ಧೈರ್ಯ ವಂತರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.