Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು ಹೋಟೆಲ್ ಉದ್ಯಮ ಹಾಗೂ ವಿವಿಧ ವ್ಯವಹಾರಗಳಿಗೆ ಭಾರಿ ನಷ್ಟ ಉಂಟಾಗಿದೆ. ಈ ನಡುವೆ ಜ್ಯೋತಿಷಿ ಒಬ್ಬರು ಐದು ತಿಂಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿರುವ ಪೋಸ್ಟ್ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮಾ. 12: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಹಾಗೂ ವಿವಿಧ ವ್ಯವಹಾರಗಳು ಭಾರಿ ನಷ್ಟ ಎದುರಿಸುತ್ತಿವೆ. ಈ ನಡುವೆ ಜ್ಯೋತಿಷಿಯೊಬ್ಬರು ಐದು ತಿಂಗಳ ಹಿಂದೆಯೇ ಭವಿಷ್ಯ ನುಡಿದಿರುವ ಪೋಸ್ಟ್ ವೈರಲ್ (Viral Video) ಆಗಿದೆ.
ಫೆಬ್ರವರಿ 27ರಿಂದ ಮಾರ್ಚ್ 2ರ ಒಳಗೆ ಮಧ್ಯಪ್ರಾಚ್ಯದಲ್ಲಿ ಭಾರಿ ಅಶಾಂತಿ ಮತ್ತು ಸಂಘರ್ಷ ಉಂಟಾಗಿ ಜನರಲ್ಲಿ ಗೊಂದಲ ಮೂಡಬಹುದು ಎಂದು ಟ್ರಾವೆಲ್ ಅಸ್ಟ್ರೋಲಜರ್ ಒಬ್ಬರು ಭವಿಷ್ಯ ನುಡಿದಿದ್ದರು. ಈ ನಡುವೆ ಭಾರತವು ನೈಸರ್ಗಿಕ ಅನಿಲದ ಕೊರತೆಯಿಂದ ಸಮಸ್ಯೆ ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದ ಮತ್ತೊಂದು ಪೋಸ್ಟ್ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್:
This prediction i made almost
— Prashanth Kini (@AstroPrashanth9) March 11, 2026
5 months back ....!! https://t.co/oxJxbjuaLl
ಈ ಪೋಸ್ಟ್ ಅನ್ನು 2025ರ ಸೆಪ್ಟೆಂಬರ್‌ನಲ್ಲಿ ಜ್ಯೋತಿಷಿ ಪ್ರಶಾಂತ್ ಕಿಣಿ ಹಂಚಿಕೊಂಡಿದ್ದರು. ಎಕ್ಸ್‌ನಲ್ಲಿ ಅವರು, 2026ರ ಮಾರ್ಚ್ ನಂತರ ಭಾರತ ಇಂಧನ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸಬಹುದು ಎಂದು ಭವಿಷ್ಯ ನುಡಿದಿದ್ದರು. ಭಾರತವು ಇಂಧನ ಮತ್ತು ನೈಸರ್ಗಿಕ ಅನಿಲದ ಕೊರತೆಯನ್ನು ಬಹಳಷ್ಟು ಎದುರಿಸಲಿದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬರೆದುಕೊಂಡಿದ್ದರು.
ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಇದೀಗ ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಕೊರತೆಯಿಂದ ಸಮಸ್ಯೆ ಹೆಚ್ಚಾಗಿದ್ದು, ಈ ಭವಿಷ್ಯ ನಿಜವಾಯಿತೇ ಎಂಬ ಚರ್ಚೆಗೆ ಕಾರಣವಾಗಿದೆ. ಕಿಣಿ ಮಾರ್ಚ್ 11ರಂದು ಅದೇ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದು "ನಾನು ಸುಮಾರು 5 ತಿಂಗಳ ಹಿಂದೆ ಮಾಡಿದ ಈ ಭವಿಷ್ಯವಾಣಿ" ಎಂದಿದ್ದಾರೆ.
ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಸ್ಥಗಿತಗೊಂಡಿರುವುದರಿಂದ ಸಮಸ್ಯೆಯಾಗಿದ್ಭಾದು, ಭಾರತದ ತೈಲ ಆಮದಿನ ಪರಿಣಾಮ ಬೀರಿದೆ. ಇದು ಇಂಧನ ಪೂರೈಕೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ನಿಜವಾದ ಜ್ಯೋತಿಷಿ ಎಂದು ಬಣ್ಣಿಸಿದರೆ ಕೆಲವರು ಇದಕ್ಕೆ ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ.