ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯೋಗ ಶಿಕ್ಷಕಿಯಾಗಲು 26 ಲಕ್ಷದ ಕಾರ್ಪೊರೇಟ್ ಉದ್ಯೋಗವನ್ನೇ ತ್ಯಜಿಸಿದ ಬೆಂಗಳೂರಿನ ಯುವತಿ

Viral News: ಕೆಲಸದ ಒತ್ತಡ, ಕೆಲಸದ ಅವಧಿ ಇದಕ್ಕೆಲ್ಲಾ ಹೊಂದಾಣಿಕೆಯಾಗದೆ ಕೈತುಂಬಾ ಸಂಬಳ ಬರುವ ಐಷಾರಾಮಿ ಕಾರ್ಪೊರೇಟ್ ಕೆಲಸ ತ್ಯಜಿಸಿದವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗ ಳೂರಿನ ಮುಕುಲಿತಾ ಗಂಗೂಲಿ ಎನ್ನುವ ಯುವತಿ ಕೈತುಂಬಾ 26 ಲಕ್ಷ ರೂಪಾಯಿ ಸಂಬಳ ಬಿಟ್ಟು ನೆಮ್ಮದಿಯ ಜೀವನದ ಕಡೆ ಹೊರಟಿದ್ದಾರೆ. ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಯೋಗ ಹಾಗೂ ನೃತ್ಯ ಶಿಕ್ಷಕಿಯಾಗಿದ್ದಾರೆ. ಕೆಲಸ ತ್ಯಜಿಸಲು ಕಾರಣವೇನು ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

26 ಲಕ್ಷದ ಕಾರ್ಪೊರೇಟ್ ಉದ್ಯೋಗ ತ್ಯಜಿಸಿದ ಬೆಂಗಳೂರಿನ ಯುವತಿ

ಬೆಂಗಳೂರು,ಜೂ.12: ಇತ್ತೀಚೆಗೆ ಕೆಲವರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕರೂ ನಾನಾ ಕಾರಣದಿಂದ ಕೆಲಸ ತೊರೆದವರು ಅನೇಕ ಮಂದಿ ಇದ್ದಾರೆ‌. ಕೆಲಸದ ಒತ್ತಡ, ಕೆಲಸದ ಅವಧಿ ಇದಕ್ಕೆಲ್ಲಾ ಹೊಂದಾಣಿಕೆಯಾಗದೆ ಕೈತುಂಬಾ ಸಂಬಳ ಬರುವ ಐಷಾರಾಮಿ ಕಾರ್ಪೊರೇಟ್ ಕೆಲಸ ತ್ಯಜಿಸಿದವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಮುಕುಲಿತಾ ಗಂಗೂಲಿ ಎನ್ನುವ ಯುವತಿ ಕೈತುಂಬಾ 26 ಲಕ್ಷ ರೂಪಾಯಿ ಸಂಬಳ ಬಿಟ್ಟು ನೆಮ್ಮದಿಯ ಜೀವನದ ಕಡೆ ಹೊರಟಿ ದ್ದಾರೆ. ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಯೋಗ ಹಾಗೂ ನೃತ್ಯ ಶಿಕ್ಷಕಿಯಾಗಿದ್ದಾರೆ. ಕೆಲಸ ತ್ಯಜಿಸಲು ಕಾರಣವೇನು ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ (Viral News) ಕೊಂಡಿದ್ದಾರೆ.

ಸಿಟಿ ಬ್ಯಾಂಕ್ (Citi) ಉದ್ಯೋಗಿಯಾಗಿದ್ದ ಮುಕುಲಿತಾ ತಮ್ಮ ಕೆಲಸವನ್ನು ತೊರೆದು ಈಗ ಯೋಗ ಮತ್ತು ನೃತ್ಯ ಶಿಕ್ಷಕಿಯಾಗಿದ್ದಾರೆ. ಈ ಹಿಂದೆ ಅವರು ವಾರ್ಷಿಕವಾಗಿ 26 ಲಕ್ಷ ರೂ. ಗಳಿಸುತ್ತಿದ್ದರು. ಈಗ ಅವರು ಪೂರ್ಣ ಸಮಯ ಯೋಗ ಮತ್ತು ನೃತ್ಯದಲ್ಲಿ ತೊಡಗಿಕೊಂಡರೂ ಕಡಿಮೆ ಸ್ಯಾಲರಿ ಪಡೆಯುತ್ತಿದ್ದರೂ ಇಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದೇನೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿಡಿಯೋ ನೋಡಿ:



ಆದಾಯ ಮುಂಚಿಗಿಂತ ಕಡಿಮೆಯಾಗಿದ್ದರೂ ಜೀವನದಲ್ಲಿ ಬಹಳಷ್ಟು ತೃಪ್ತಿ ಗಳಿಸಿದ್ದೇನೆ ಎಂದಿದ್ದಾರೆ‌. ಕಾರ್ಪೊರೇಟ್ ದಿನಗಳ ಕಹಿ ನೆನಪನ್ನು ಹಂಚಿಕೊಂಡ ಅವರು ಕೆಲಸದ ಒತ್ತಡದಿಂದಾಗಿ ತೀವ್ರ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪರಿಸ್ಥಿತಿ ಎಲ್ಲಿಯವರೆಗೆ ಹೋಯಿತೆಂದರೆ ನಾನು ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಅಲ್ಲಿನ ಒತ್ತಡದ ಕೆಲಸದ ಬಗ್ಗೆ ಬಿಚ್ಚಿಟ್ಟಿದ್ದಾರೆ.

Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

​ಕ್ಯಾಂಪಸ್ ಸೆಲೆಕ್ಷನ್ ಮೂಲಕ ಸಿಟಿ ಬ್ಯಾಂಕ್ ಸೇರಿದ್ದ ಮುಕುಲಿತಾ ಅವರಿಗೆ ಅಮೆರಿಕಾದ ಗ್ರಾಹಕರು ಸಾಲದ ಸುಳಿಗೆ ಸಿಲುಕಿದ್ದರೂ, ಅವರಿಗೆ ಕ್ರೆಡಿಟ್ ಕಾರ್ಡ್ ಬಳಸಿ ಮತ್ತಷ್ಟು ಖರ್ಚು ಮಾಡುವಂತೆ ಪ್ರೇರೇಪಿಸುವುದು ಕೆಲಸವಾಗಿತ್ತು. ಇದು ತನ್ನ ಖುಷಿಯನ್ನೆ ಕೆಡಿಸಿತ್ತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ವೈದ್ಯರು ಅವರ ಪ್ಯಾನಿಕ್ ಅಟ್ಯಾಕ್‌ಗಳನ್ನು ನಿರ್ವಹಿಸಲು ಯೋಗ ಅಭ್ಯಾಸಕ್ಕೆ ಶಿಫಾರಸು ಮಾಡಿದ್ದರು.‌ ನಂತರ ಗಂಗೂಲಿ ಅವರು ಯೋಗ ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಅವರ ಜೀವನವನ್ನೇ ಬದಲಾಯಿಸಿದೆ.

​ಭವಿಷ್ಯದ ನಿರ್ವಹಣೆಗಾಗಿ ಹಣವನ್ನು ಉಳಿತಾಯ ಮಾಡಿಕೊಂಡು ಕೆಲಸದಲ್ಲಿದ್ದಾಗಲೇ ಯೋಗ ಮತ್ತು ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದು ತರಬೇತಿ ಮುಗಿಸಿದರು. ಈಗ ತಿಂಗಳಿಗೆ ಸುಮಾರು 50,000 ರೂ.ಗಳನ್ನು ಗಳಿಸುತ್ತಿದ್ದು ಮಾಡುವ ಕೆಲಸದಲ್ಲಿ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡಿದ್ದೇನೆ ಅಂದರು.