ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ಕೂಟರ್‌ನಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಕಾರು- ಭೀಕರ ವಿಡಿಯೊ ವೈರಲ್

18 ವರ್ಷದ ಯುವತಿಯೊಬ್ಬಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಚಾನಕ್ ಆಗಿ ರಸ್ತೆಗೆ ಬಿದ್ದು ಅಪಘಾತ ಆಗಿದ್ದ ಘಟನೆ ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿರುವ ಯೂನಿಯನ್ ಅವೆನ್ಯೂನಲ್ಲಿ ನಡೆದಿದೆ. ರಸ್ತೆಯಲ್ಲಿ ಆಕೆ ಬಿದ್ದಿದ್ದ ಪರಿಣಾಮ ಟ್ರಾಫಿಕ್ ಸಿಗ್ನಲ್‌ನಲ್ಲಿದ್ದ ಕಾರು ಯುವತಿ ಮೇಲೆ ಹರಿದಿದೆ. ಈ ರಸ್ತೆ ಅಪಘಾತದಲ್ಲಿ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಕೂಟರ್ ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಕಾರು

ಸ್ಕೂಟರ್ ನಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿ -

Profile
Pushpa Kumari Nov 18, 2025 5:31 PM

ನವದೆಹಲಿ: ರಸ್ತೆಯಲ್ಲಿ ಸಂಚಾರ ಮಾಡುವಾಗ ಎಷ್ಟು ಸುರಕ್ಷಿತ ವಾಗಿದ್ದರೂ ಅದು ಕಡಿಮೆ ಎಂದು ಹೇಳಬಹುದು. ಎಷ್ಟೇ ಜಾಗೃತಿ ಯಿಂದ ವಾಹನ ಚಲಾಯಿಸಿದರೂ ಗ್ರಹಚಾರ ಎಂಬಂತೆ ಅಪಘಾತಗಳು ಸಂಭವಿಸಿ ಸಾವನಪ್ಪುವುದು ಇದೆ. ಇಂತಹ ಅಪಘಾತಗಳು ಕೆಲವೊಮ್ಮ ಬಹಳ ಭೀಕರವಾಗಿರುತ್ತದೆ. ಅಂತೆಯೇ 18 ವರ್ಷದ ಯುವತಿಯೊಬ್ಬಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಚಾನಕ್ ಆಗಿ ರಸ್ತೆಗೆ ಬಿದ್ದು ಅಪಘಾತ ಆಗಿದ್ದ ಘಟನೆ ಟೆನ್ನೆಸ್ಸೀಯ ಮೆಂಫಿಸ್‌ ನಲ್ಲಿರುವ ಯೂನಿಯನ್ ಅವೆನ್ಯೂನಲ್ಲಿ ನಡೆದಿದೆ. ರಸ್ತೆಯಲ್ಲಿ ಆಕೆ ಬಿದ್ದಿದ್ದ ಪರಿಣಾಮ ಟ್ರಾಫಿಕ್ ಸಿಗ್ನಲ್‌ ನಲ್ಲಿದ್ದ ಕಾರು ಯುವತಿ ಮೇಲೆ ಹರಿದಿದೆ. ಈ ರಸ್ತೆ ಅಪಘಾತದಲ್ಲಿ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಅಪಘಾತದ ಭಯಾನಕ ಕ್ಷಣಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆ ಯಾಗಿದ್ದನ್ನು ಕಾಣಬಹುದು. ನವೆಂಬರ್ 14ರ ರಾತ್ರಿಯಂದು 18ವರ್ಷದ ಯುವತಿಯು ತನ್ನ ಎಲೆಕ್ಟ್ರಾನಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಳು. ಟ್ರಾಫಿಕ್ ಸಿಗ್ನಲ್ ಇದ್ದ ಕಾರಣ ಮುಖ್ಯ ರಸ್ತೆಯ ಎಲ್ಲ ವಾಹನಗಳು ಸ್ತಬ್ಧವಾಗಿ ನಿಂತಿದ್ದವು. ಅದೇ ವೇಳೆ ಮಹಿಳೆಯೂ ಒಳರಸ್ತೆಯ ಬೀದಿಯಿಂದ ತನ್ನ ಎಲೆಕ್ಟ್ರಾನಿಕ್ ಮಿನಿ ಸ್ಕೂಟರ್ ನಲ್ಲಿ ಬರುತ್ತಿ ದ್ದಳು. ಈ ಸಂದರ್ಭ ಆಕೆಯ ಎಲೆಕ್ಟ್ರಾನಿಕ್ ವೆಹಿಕಲ್ ಸ್ಕಿಡ್ ಆಗಿದ್ದು ಯುವತಿ ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬಿದ್ದಿದ್ದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ಇಲ್ಲಿದೆ:

ಯುವತಿಯೂ ರಸ್ತೆಯ ಝಿಬ್ರಾ ಕ್ರಾಸಿಂಗ್ ಬಳಿಯಲ್ಲಿಯೇ ಬಿದ್ದಿದ್ದಾಳೆ. ಆಕೆಯು ಬೀಳುತ್ತಿದ್ದಂತೆ ಆಕೆಯ ಮೂಗು ಮತ್ತು ಮೊಣ ಕೈಗೆ ಗಾಯ ಆಗಿದೆ. ಹೀಗಾಗಿ ರಸ್ತೆಯಲ್ಲಿ ಬಿದ್ದ ಬಳಿಕ ಭಯಗೊಂಡ ಯುವತಿ ಮೇಲೆ ಏಳಲೇ ಇಲ್ಲ. ಅದೇ ಸಮಯಕ್ಕೆ ಗ್ರೀನ್ ಸಿಗ್ನಲ್ ಲೈಟ್ ಬಿದ್ದಿದ್ದ ಕಾರಣ ಟೊಯೋಟಾ ಆರ್ ಎವಿ 4 ಕಾರು ಸಡನ್ ಆಗಿ ಚಲಿಸಿದೆ. ಆಕೆ ರಸ್ತೆಯಲ್ಲಿ ಬಿದ್ದಿರುವುದು ಚಾಲಕ ನಿಗೂ ಅರಿವಾಗಲಿಲ್ಲ. ಹೀಗಾಗಿ ಆಕೆಯ ಮೇಲೆ ಆಕಸ್ಮಿಕವಾಗಿ ಕಾರು ಡಿಕ್ಕಿ ಆಗಿದೆ.

Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್‌ ವೈರ್‌! ವಿಡಿಯೊ ಫುಲ್‌ ವೈರಲ್‌

ಟೈರ್‌ ಹೊಡೆದ ರಭಸಕ್ಕೆ ಆಕೆಗೆ ನೋವಾಗಿದ್ದು ಕಿರುಚಿ ಕೊಂಡಿದ್ದಾಳೆ. ಬಳಿಕ ಚಾಲಕ ಗಾಡಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಈಗಾಗಲೇ ಸ್ಪೀಡ್ ನಲ್ಲಿದ್ದ ಗಾಡಿ ಒಮ್ಮೆಗೆ ನಿಯಂತ್ರಣ ಸಿಗದ ಕಾರಣ ಚಾಲಕನು ಏನು ಮಾಡಲು ಆಗಲಿಲ್ಲ ಎಂದು ಕಾರು ಪ್ರಯಾಣಿಕ ಪೊಲೀಸರಿಗೆ ತಿಳಿಸಿದ್ದಾರೆ. ವರದಿ ಯೊಂದರ ಪ್ರಕಾರ, ಆಕೆಯನ್ನು ಘಟನೆಯ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕೆಲವು ಗಂಟೆಗಳ ಚಿಕಿತ್ಸೆ ನೀಡಲಾಗಿದ್ದರು ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.

ಚಾಲಕನು ಕೂಡ ರಸ್ತೆಯ ಸುರಕ್ಷತೆ ಮಾನದಂಡ ಅನುಸರಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಲ್ಲಾಸ್‌ನಲ್ಲಿ ಮೊನ್ನೆಯಷ್ಟೆ 23 ವರ್ಷದ ನರ್ಸ್‌ಗೆ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ.‌ ಆದರೆ ಅವಳು ಬದುಕುಳಿ ಯಲಿಲ್ಲ" ಎಂದು ಬಳಕೆದಾರರೊಬ್ಬರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.