ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಆಗ್ರಾದಲ್ಲಿ ಫ್ರಿಜ್‌ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು

Shivling-Like Ice Formation: ಉತ್ತರ ಪ್ರದೇಶದ ಆಗ್ರಾದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ ಆಕಾರ ಮೂಡಿದ್ದು, ಸ್ಥಳೀಯರು ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಫ್ರಿಜ್‌ನಲ್ಲಿ ಮೂಡಿದ ಹಿಮ ಶಿವಲಿಂಗಕ್ಕೆ ಜಲಾಭಿಷೇಕ; ವಿಡಿಯೊ ಇಲ್ಲಿದೆ

ಫ್ರಿಜ್‌ನಲ್ಲಿ ಮೂಡಿಬಂದ ಶಿವಲಿಂಗ ಆಕಾರದ ಮಂಜುಗಡ್ಡೆ -

Profile
Sushmitha Jain Jul 14, 2026 4:18 PM

ಲಖನೌ, ಜು. 14: ಉತ್ತರ ಪ್ರದೇಶದ (Uttar Pradesh) ಆಗ್ರಾದ ಖೇರಿಯಾ ಮೋಡ್‌ನ (Kheria Mod) ನಾಗ್ಲಾ ಭುಜಾ ಪ್ರದೇಶದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ (Shivalinga) ಆಕಾರ ಮೂಡಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ನೆರೆಹೊರೆಯವರು ಆಗಮಿಸಿ, ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಮನೆಯ ಫ್ರಿಜ್‌ನ ಫ್ರೀಜರ್ ವಿಭಾಗದಲ್ಲಿ ಸಹಜವಾಗಿ ರೂಪುಗೊಂಡಿರುವ ಹಿಮದ ರಚನೆ ಶಿವಲಿಂಗವನ್ನು ಹೋಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಮನೆಯವರು ಮೊದಲು ಆಶ್ಚರ್ಯ ವ್ಯಕ್ತಪಡಿಸಿದ್ದು, ಬಳಿಕ ಈ ವಿಷಯ ಸುತ್ತಮುತ್ತಲಿನ ನಿವಾಸಿಗಳಿಗೆ ತಿಳಿದಿದೆ. ಸುದ್ದಿ ಹರಡುತ್ತಿದ್ದಂತೆಯೇ ಭಕ್ತರು ಮನೆಗೆ ಆಗಮಿಸಿ ಜಲಾಭಿಷೇಕ ನೆರವೇರಿಸಿ, ಹೂವು ಹಾಗೂ ನಾಣ್ಯಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಸ್ಥಳದಲ್ಲಿ "ಹರ ಹರ ಮಹಾದೇವ" ಎಂಬ ಘೋಷಣೆಗಳು ಮೊಳಗಿದವು.

ವೈರಲ್‌ ವಿಡಿಯೊ ಇಲ್ಲಿದೆ:



ಈ ಘಟನೆಯ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಇದನ್ನು ಜಮ್ಮು-ಕಾಶ್ಮೀರದ ಅಮರನಾಥ ಗುಹೆಯಲ್ಲಿ ಸಹಜವಾಗಿ ರೂಪುಗೊಳ್ಳುವ ಹಿಮ ಶಿವಲಿಂಗಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಕೆಲವರು ಇದನ್ನು ದೈವಿಕ ಪವಾಡ ಎಂದು ನಂಬಿದರೆ, ಇನ್ನೂ ಕೆಲವರು ಇದು ಫ್ರೀಜರ್‌ನಲ್ಲಿನ ತಾಪಮಾನ ಮತ್ತು ತೇವಾಂಶದ ಪರಿಣಾಮವಾಗಿ ಸಹಜವಾಗಿ ರೂಪುಗೊಂಡ ಹಿಮದ ಆಕಾರವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದು, ಕುಟುಂಬ ಸಮೇತರಾಗಿ ಭೇಟಿ ನೀಡಿದವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ತಿಳಿದು ದೂರದ ಪ್ರದೇಶಗಳಿಂದಲೂ ಕೆಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ಅಮರನಾಥ ಹಿಮ ಶಿವಲಿಂಗ ಕರಗುತ್ತಿದೆ

ಇದರ ನಡುವೆ ಜಮ್ಮು-ಕಾಶ್ಮೀರದ ಅಮರನಾಥ ಗುಹೆಯಲ್ಲಿ ಸಹಜವಾಗಿ ರೂಪುಗೊಳ್ಳುವ ಹಿಮ ಶಿವಲಿಂಗ ಈ ಬಾರಿ ವೇಗವಾಗಿ ಕರಗುತ್ತಿದೆ. 57 ದಿನಗಳ ಅಮರನಾಥ ಯಾತ್ರೆ ಪೂರ್ಣಗೊಳ್ಳುವ ಮುನ್ನವೇ ಹಿಮ ಶಿವಲಿಂಗದ ಶೇ. 90ಕ್ಕೂ ಹೆಚ್ಚು ಭಾಗ ಕರಗಿರುವುದಾಗಿ ವರದಿಗಳು ತಿಳಿಸಿವೆ.

ತಜ್ಞರ ಪ್ರಕಾರ, ಹಿಮಾಲಯ ಪ್ರದೇಶದಲ್ಲಿ ತಾಪಮಾನ ಏರಿಕೆಯಾಗುತ್ತಿರುವುದು ಹಾಗೂ ಹವಾಮಾನ ಬದಲಾವಣೆಯ ಪರಿಣಾಮದಿಂದ ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮ ಉಳಿಯಲು ಅಗತ್ಯವಾದಷ್ಟು ಕಡಿಮೆ ತಾಪಮಾನ ಈ ಬಾರಿ ನಿರಂತರವಾಗಿ ದಾಖಲಾಗಿಲ್ಲ ಎನ್ನಲಾಗಿದೆ.