ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯ್ತು ಆಕಾಶ್ ವಿಮಾನ ಪ್ರಯಾಣ.. ಗೋಳು ಹಂಚಿಕೊಂಡ ಮಹಿಳೆ

ವಿಮಾನಗಳ ನೈರ್ಮಲ್ಯದ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿ ಬರುತ್ತಲೇ ಇದೆ. ಇದೀಗ ಆಕಾಶ್ ಏರ್ ವಿಮಾನ ಪ್ರಯಾಣದ ಬಳಿಕ ತನಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದೆ.

(ಸಂಗ್ರಹ ಚಿತ್ರ)

ನವದೆಹಲಿ: ಆಕಾಶ್ ಏರ್ (akash air flight) ನಲ್ಲಿ ಪ್ರಯಾಣ ಮಾಡಿದ ಬಳಿಕ ನನ್ನ ಆರೋಗ್ಯ (health issue) ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ (social media) ಹೇಳಿಕೊಂಡಿದ್ದು, ತಕ್ಷಣವೇ ವಿಮಾನಯಾನ ಸಂಸ್ಥೆ (indian airlines) ಪ್ರತಿಕ್ರಿಯಿಸಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ. ಆಕಾಶ್ ಏರ್ ವಿಮಾನದಲ್ಲಿ ಪ್ರಯಾಣ ಮಾಡಿದ ಬಳಿಕ ಶಿಲಿಂದ್ರಗಳ ಸೋಂಕಿಗೆ ತಾವು ತುತ್ತಾಗಿರುವುದಾಗಿ ಮಹಿಳೆಯೊಬ್ಬರು ಲಿಂಕ್ಡ್‌ಇನ್ ನಲ್ಲಿ ಪೋಸ್ಟ್ ಮಾಡಿದ್ದು, ವಿಮಾನದಲ್ಲಿ ನೈರ್ಮಲ್ಯವಿಲ್ಲದೇ ಇದ್ದುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಇದಕ್ಕೆ ಅನೇಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಆಕಾಶ್ ಏರ್ ವಿಮಾನದಲ್ಲಿ ಪ್ರಯಾಣ ಮಾಡಿದ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಇದಕ್ಕೆ ಕಳಪೆ ನಿರ್ವಹಣೆಯೇ ಕಾರಣ ಎಂದು ಮಹಿಳೆ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆಯು ಇದನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಮಹಿಳೆಯನ್ನು ಸಂಪರ್ಕಿಸುವುದಾಗಿ ಹೇಳಿದೆ.

ನಡು ರಸ್ತೆಯಲ್ಲಿ ಬಿಯರ್ ಬಾಟಲಿ ಹಿಡಿದು ಕ್ಯಾಮೆರಾ ಕಣ್ಣಿಗೆ ಬಿದ್ದ ಸಚಿನ್ ಪುತ್ರಿ ಸಾರಾ: ವಿಡಿಯೋ ವೈರಲ್

ಲಿಂಕ್ಡ್‌ಇನ್ ನಲ್ಲಿ ಜಹಾನ್ವಿ ತ್ರಿಪಾಠಿ ಎಂಬ ಮಹಿಳೆ ಡಿಸೆಂಬರ್ 26 ರಂದು ಬೆಂಗಳೂರಿನಿಂದ ಅಹಮದಾಬಾದ್‌ಗೆ ರಾತ್ರಿ 10:25 ಕ್ಕೆ ಹೊರಡುವ ಅಕಾಶ್ ಏರ್ ವಿಮಾನದಲ್ಲಿ ಸ್ನೇಹಿತರೊಂದಿಗೆ ಪ್ರಯಾಣ ಮಾಡಿದ್ದರು. ವಿಮಾನದಲ್ಲಿ ಸ್ವಚ್ಛತೆ, ನಿರ್ವಹಣೆ ಇಲ್ಲದೇ ಇದ್ದುದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾಗಿ ಹೇಳಿದ್ದಾರೆ.

ವಿಮಾನದೊಳಗೆ ಸ್ವಚ್ಛತೆ ಇರಲಿಲ್ಲ. ಆಸನ ಪರಿಸ್ಥಿತಿಗಳು ಚೆನ್ನಾಗಿರಲಿಲ್ಲ. ಇದು ಅತ್ಯಂತ ಕಳವಳಕಾರಿ ಮತ್ತು ಸ್ವೀಕಾರಾರ್ಹವಲ್ಲ. ಇದರಿಂದ ವಿಮಾನ ಪ್ರಯಾಣದ ಸಮಯದಲ್ಲೇ ತಮಗೆ ತೀವ್ರ ಅಸ್ವಸ್ಥತೆ ಉಂಟಾಗಿದೆ. ಅನಂತರ ಇದು ದೈಹಿಕ ತೊಂದರೆಗೂ ಕಾರಣವಾಯಿತು. ಈ ಪ್ರಯಾಣ ಅತ್ಯಂತ ಕೆಟ್ಟ ಅನುಭವವಾಯಿತು ಎಂದು ಮಹಿಳೆ ತಿಳಿಸಿದ್ದಾರೆ. ಇವರ ಸ್ನೇಹಿತರು ಕೂಡ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡರು.

ಪ್ರಯಾಣದ ವೇಳೆ ತಮ್ಮ ಕಾಲುಗಳಲ್ಲಿ ತೀವ್ರವಾದ ಶಿಲೀಂಧ್ರ ಸೋಂಕು ಉಂಟಾಯಿತು. ಕ್ರಮೇಣ ಇದರಿಂದ ಸರಿಯಾಗಿ ನಡೆಯಲು, ಆರಾಮವಾಗಿ ಮಲಗಲು ಅಥವಾ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕೂಡ ಕಷ್ಟವಾಯಿತು. ಪ್ರಸ್ತುತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ವಿಮಾನದಲ್ಲಿನ ನೈರ್ಮಲ್ಯ ಮತ್ತು ನೈರ್ಮಲ್ಯ ಮಾನದಂಡಗಳ ಬಗ್ಗೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿರುವ ಅವರು ಪ್ರಯಾಣದ ಸಮಯದಲ್ಲಿ ಸ್ವಚ್ಛವಿಲ್ಲದ ಆಸನ, ಕ್ಯಾಬಿನ್ ಪರಿಸ್ಥಿತಿಗಳಿಂದ ಈ ಸೋಂಕು ಉಂಟಾಗಿರಬಹುದು ಎಂದು ತಿಳಿಸಿದ್ದಾರೆ.

ವಯನಾಡು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್: ಪ್ರಿಯಾಂಕಾ ಗಾಂಧಿ ಪರ ಪ್ರಚಾರದ ವಿಡಿಯೊ ವೈರಲ್

ಮಹಿಳೆಯ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಆಕಾಶ ಏರ್, ಇದಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ನಾವು ಉನ್ನತ ಮಟ್ಟದ ನೈರ್ಮಲ್ಯ ಮತ್ತು ಗ್ರಾಹಕರ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ. ನಿಮ್ಮ ಪ್ರತಿಕ್ರಿಯೆಯನ್ನು ತಕ್ಷಣದ ಪರಿಶೀಲನೆಗಾಗಿ ಹಂಚಿಕೊಳ್ಳಲಾಗಿದೆ ಮತ್ತು ಆದಷ್ಟು ಬೇಗ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದೆ.

ಮಹಿಳೆ ಹಂಚಿಕೊಂಡಿರುವ ಪೋಸ್ಟ್ ಆನ್‌ಲೈನ್ ಚರ್ಚೆಗೆ ಕಾರಣವಾಯಿತು. ಅನೇಕರು ಇದು ತೀವ್ರವಾದ ಸೋಂಕಿನಂತೆ ಕಾಣುತ್ತಿದೆ. ಆಸನಗಳು ಮತ್ತು ಸಂಪೂರ್ಣ ಕ್ಯಾಬಿನ್‌ ತಪಾಸಣೆ ಅಗತ್ಯವಿದೆ ಎಂದು ಹೇಳಿದರು. ಕೆಲವರು ವಿಮಾನಯಾನ ಸಂಸ್ಥೆಯನ್ನು ಸಮರ್ಥಿಸಿಕೊಂಡರು.

ವಿದ್ಯಾ ಇರ್ವತ್ತೂರು

View all posts by this author