ನಡು ರಸ್ತೆಯಲ್ಲಿ ಬಿಯರ್ ಬಾಟಲಿ ಹಿಡಿದು ಕ್ಯಾಮೆರಾ ಕಣ್ಣಿಗೆ ಬಿದ್ದ ಸಚಿನ್ ಪುತ್ರಿ ಸಾರಾ: ವಿಡಿಯೋ ವೈರಲ್
Viral Video: ಇತ್ತೀಚೆಗಷ್ಟೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಬಿಯರ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಗೋವಾದಲ್ಲಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತಾವು ದೊಡ್ಡ ಸ್ಟಾರ್ ಕ್ರಿಕೆಟಿಗರ ಮಗಳೆಂದು ತಿಳಿದಿದ್ದರು ಸಾರ್ವಜನಿಕರ ಸ್ಥಳದಲ್ಲಿ ಬಿಯರ್ ಬಾಟಲಿಯನ್ನು ಓಪನ್ ಆಗಿ ಹಿಡಿದುಕೊಂಡು ರಸ್ತೆಯ ಪಕ್ಕದಲ್ಲಿ ಓಡಾಡಿದ್ದು ಅದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ.
ಸಚಿನ್ ಪುತ್ರಿ ಸಾರಾ -
ಮುಂಬೈ, ಜ. 1: ಸಿನಿಮಾ , ಕ್ರೀಡೆ, ರಾಜಕೀಯ ಇತರ ರಂಗದಲ್ಲಿ ಸಾಧನೆ ಮಾಡಿದ್ದ ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಮೇಲೆ ಸಾಮಾನ್ಯ ಜನರಿಗೆ ಕುತೂಹಲ ಇದ್ದೇ ಇರಲಿದೆ. ಸೆಲೆಬ್ರಿಟಿ ಗಳ ಕುಟುಂಬದವರ ಹಿನ್ನೆಲೆ , ಅವರ ಬಗ್ಗೆ ಇರುವ ಕೆಲವು ಅಪರೂಪದ ಸಂಗತಿಗಳು ಸೋಶಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ (Viral Video) ಆಗುತ್ತಿರುತ್ತದೆ. ಅಂತೆಯೇ ಇತ್ತೀಚೆಗಷ್ಟೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಬಿಯರ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಗೋವಾದಲ್ಲಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತಾವು ದೊಡ್ಡ ಸ್ಟಾರ್ ಕ್ರಿಕೆಟಿಗರ ಮಗಳೆಂದು ತಿಳಿದಿದ್ದರು ಸಾರ್ವಜನಿಕರ ಸ್ಥಳದಲ್ಲಿ ಬಿಯರ್ ಬಾಟಲಿಯನ್ನು ಓಪನ್ ಆಗಿ ಹಿಡಿದುಕೊಂಡು ರಸ್ತೆಯ ಪಕ್ಕದಲ್ಲಿ ಓಡಾಡಿದ್ದು ಅದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಸಾರಾ ಯಾವುದೆ ಬಾಡಿಗಾರ್ಡ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ತೆರಳಿದ್ದರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟುಪರ, ವಿರೋಧ ಚರ್ಚೆಗಳು ಹುಟ್ಟುಹಾಕಿದೆ.
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ಇತ್ತೀಚೆಗಷ್ಟೇ ತಮ್ಮ ಸ್ನೇಹಿತೆಯರ ಜೊತೆಗೆ ಗೋವಾಕ್ಕೆ ಪ್ರವಾಸಕ್ಕೆಂದು ತೆರಳಿದ್ದಾರೆ. ಗೋವಾ ದಾರಿಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ತಮ್ಮ ಸ್ನೇಹಿತೆಯರ ಜೊತೆಗೆ ಸಾರಾ ನಡೆದುಕೊಂಡು ಹೋಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಸಾರಾ ಗ್ಲಾಮರಸ್ ಆಗಿ ಕಂಡಿದ್ದಾರೆ.
ವಿಡಿಯೋ ನೋಡಿ:
.@sachin_rt never promoted tobacco and liquor during his career but his daughter Sara Tendulkar seen with a Beer bottle on the roads of Goa
— Gautam Agarwal 🇮🇳 (@gauagg) December 31, 2025
https://t.co/Ihh7SgzElk
ಸಾರಾ ತೆಂಡೂಲ್ಕರ್ ಪ್ರಸ್ತುತ ಗೋವಾದಲ್ಲಿ ತಮ್ಮ ಸ್ನೇಹಿತರ ಜೊತೆಗೆ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಅವರು ಕೆಂಪು ಬಣ್ಣದ ಫ್ಲೋರಲ್ ವಿನ್ಯಾಸದ ಉಡುಪನ್ನು ಧರಿಸಿದ್ದನ್ನು ಕಾಣಬಹುದು. ಮೂವರು ಸ್ನೇಹಿತರೊಂದಿಗೆ ಗೋವಾದ ಬೀದಿಗಳಲ್ಲಿ ಅಡ್ಡಾಡುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಸಾರಾ ಅವರು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ. ಇವರ ಸರಳ ಜೀವನಶೈಲಿಯು ಆಗಾಗ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಪ್ರಶಂಸೆ ಪಡೆಯುತ್ತಿತ್ತು. ಆದರೆ ಈ ಬಾರಿ ಅವರ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ. ಖ್ಯಾತ ಕ್ರಿಕೆಟಿಗ ಸಚಿನ್ ಪುತ್ರಿಯಾಗಿ ಸಾರಾ ಈ ರೀತಿ ಬಿಯರ್ ಬಾಟಲ್ ಹಿಡಿದುಕೊಂಡು ಊರುರು ಸುತ್ತುವುದು ಅವರ ತಂದೆಯ ಗೌರವಕ್ಕೆ ಧಕ್ಕೆ ತರಲಿದೆ. ಪಾರ್ಟಿ ಮಸ್ತಿ ಏನೆ ಇದ್ದರೂ ಅದಕ್ಕೊಂದು ಚೌಕಟ್ಟು ಅಗತ್ಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿ ಕಿಡಿಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ಸಾರಾ ಅವರು ಸ್ಟಾರ್ ಕಿಡ್ ಆಗಿದ್ದರು ಯಾವುದೆ ಸೆಕ್ಯೂರಿಟಿ ಫೋರ್ಸ್ ಇಲ್ಲದೆ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಅವರನ್ನು ಹೊಗಳಿದ್ದಾರೆ.
ಸಾರಾ ಅವರು ಸಚಿನ್ ಪುತ್ರಿಯಾಗಿದ್ದರೂ ಕೂಡ ಕ್ರೀಡಾ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿಲ್ಲ. ಶೈಕ್ಷಣಿಕವಾಗಿ ಸಾರಾ ಲಂಡನ್‌ನಿಂದ ಪೌಷ್ಟಿಕಾಂಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಕ್ರೀಡೆ ಮತ್ತು ಚಲನಚಿತ್ರದಿಂದ ದೂರವೇ ಉಳಿದಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಅವರು ತಮ್ಮದೇ ಆದ ಪೈಲೇಟ್ಸ್ ಸ್ಟುಡಿಯೋವನ್ನು ಕೂಡ ನಡೆಸುತ್ತಿದ್ದಾರೆ. ಅದರ ಜೊತೆಗೆ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಉತ್ತೇಜಿಸುವ ಕೆಲವು ಕಂಪೆನಿಯಲ್ಲಿಯೂ ಹೂಡಿಕೆ ಮಾಡಿದ್ದಾರೆ.