ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಾರ್ಚ್ 21ಕ್ಕೆ ಭಾರತ-ಪಾಕಿಸ್ತಾನ ಯುದ್ಧ ಶುರುವಾಗುತ್ತಾ? ಭಾರೀ ವೈರಲ್ ಆಗ್ತಿದೆ ಈ ಜ್ಯೋತಿಷಿಯ ಭವಿಷ್ಯವಾಣಿ!

Viral Video: ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಮಾರ್ಚ್ 21, 2026 ರಂದು ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಭಾರತ- ಪಾಕಿಸ್ತಾನ‌ ದಾಳಿಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

ಟೆಹ್ರಾನ್,ಮಾ.6: ಇರಾನ್​-ಇಸ್ರೇಲ್​ ನಡುವಿನ ಮಿಲಿಟರಿ ಸಂಘರ್ಷದ ಉದ್ವಿಗ್ನತೆ ಹೆಚ್ಚಾಗಿದೆ. ದೇಶ ದೆಲ್ಲೆಡೆ ಯುದ್ಧದ ಭೀತಿ ಜೋರಾಗಿದ್ದು ಕೆಲವೆಡೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರ ವಿಡಿಯೋ ಭಾರೀ ವೈರಲ್ (Viral Video) ಆಗುತ್ತಿದೆ. ಮಾರ್ಚ್ 21, 2026 ರಂದು ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈ ಜ್ಯೋತಿಷಿ ತನ್ನ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಕೆಲವು ಆತಂಕಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ದಯವಿಟ್ಟು ಸ್ವಲ್ಪ ನಗದು, ಔಷಧಿ, ನಿಮ್ಮ ಫೋನ್‌ಗೆ ಸೌರ ಚಾರ್ಜರ್ ಮತ್ತು ಕನಿಷ್ಠ 1-2 ತಿಂಗಳವರೆಗೆ ರೇಷನ್ ಸಿದ್ಧವಾಗಿ ಇಟ್ಟುಕೊಳ್ಳಿ.‌ ಏಕೆಂದರೆ ಇರಾನ್ ನಂತರ, ಇದು ಪಾಕಿಸ್ತಾನದ ಸರದಿ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ:



ಜ್ಯೋತಿಷ್ಯದ ಪ್ರಕಾರ, ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ದಿನಾಂಕ ಮಾರ್ಚ್ 21, 2026. ಆ ದಿನ ರಿಕ್ತ ತಿಥಿ ಆಗಿರುತ್ತದೆ, ಮಾರ್ಚ್ 21 ರಂದು, ಜಾತಕವು ಬುಧ, ರಾಹು ಮತ್ತು ಮಂಗಳ ಗ್ರಹಗಳು 4 ನೇ ಮನೆಯಲ್ಲಿರುವುದನ್ನು ತೋರಿಸುತ್ತದೆ, ಇದು ಅಂಗಾರಕ ಯೋಗವನ್ನು ರೂಪಿ ಸುತ್ತದೆ ಮತ್ತು ಸೂರ್ಯ, ಶನಿ, ನೆಪ್ಚೂನ್ ಮತ್ತು ಶುಕ್ರ 5 ನೇ ಮನೆಯಲ್ಲಿ ಸಂಯೋಗ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜಾತಕದಲ್ಲಿ ಮಂಗಳನ ಮಹಾದಶೆ ನಡೆಯುತಿದ್ದು ಮತ್ತು ದೇಶದ ಜಾತಕದಲ್ಲಿ ರಾಹುವಿನ ಅಂತರ್ದಶೆ ಇರುವುದು ಈ ಘಟನೆಗೆ ಕಾರಣವಾಗಬಹುದು ಎಂದಿದ್ದಾರೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಅವರ ಪ್ರಕಾರ ಈ ದಾಳಿಯಿಂದ ಶೀಘ್ರದಲ್ಲೇ, ನಮ್ಮ ದೇಶದ ಗಡಿಗಳಲ್ಲಿ ಬದಲಾವಣೆಗಳು ಆಗಲಿವೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು "ಪ್ರತಿಯೊಬ್ಬ ಜ್ಯೋತಿಷಿಯೂ ತನ್ನ ಭವಿಷ್ಯವನ್ನು ವೈರಲ್ ಮಾಡಲು ಇಂತಹ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸಿ ಜ್ಯೋತಿಷ್ಯರೊಬ್ಬರ ಹಳೆಯ ವಿಡಿಯೊ ಭಾರಿ ವೈರಲ್ ಆಗಿತ್ತು. ಈ ವರ್ಷ ಭೀಕರ ಯುದ್ಧ ಉಂಟಾಗಲಿದೆ ಎಂದು ಅವರು ಹೇಳಿಕೊಂಡಿದ್ದರು. ಇರಾನ್- ಇಸ್ರೇಲ್ ಉದ್ವಿಗ್ನತೆಗಳು ಉಲ್ಬಣ ಗೊಳ್ಳುವ ಕೆಲವೇ ದಿನಗಳ ಮೊದಲು ವಿಡಿಯೊ ಪೋಸ್ಟ್ ಮಾಡಿದ ಅವರು ಕೆಲವೊಂದು ಪ್ರದೇಶವನ್ನು "ಅನಿಶ್ಚಿತತೆಯ ತಾಣ" ಎಂದು ಹೇಳಿದ್ದರು.