ತಿರುವನಂತಪುರಂ, ಸೆ. 2: ಇತ್ತೀಚೆಗೆ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ನುಗ್ಗಿ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ ಸುಲ್ತಾನ್ ಬತ್ತೇರಿ- ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಭೀಕರ ಅನುಭವವೊಂದು ಎದುರಾಗಿದೆ. ರಸ್ತೆ ದಾಟಿ ಕಾಡಿನತ್ತ ಸಾಗುತ್ತಿದ್ದ ಆನೆ ಏಕಾಏಕಿ ಕಾರಿನ ಬಳಿ ರಭಸವಾಗಿ ನುಗ್ಗಲು ಯತ್ನಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಗುಂಡ್ಲುಪೇಟೆಯಿಂದ ಹಿಂತಿರುಗುತ್ತಿದ್ದ ಕುಟುಂಬವೊಂದು ಕೇರಳಂನ ಸುಲ್ತಾನ್ ಬತ್ತೇರಿ-ಗುಂಡ್ಲುಪೇಟೆ ರಸ್ತೆಯಲ್ಲಿ ಕಾಡು ಆನೆಗಳ ಹಿಂಡಿನೊಂದಿಗೆ ಮುಖಾಮುಖಿಯಾಯಿತು. ಅದೇ ಗುಂಪಿನಲ್ಲಿದ್ದ ಆನೆಯೊಂದು ಅನಿರೀಕ್ಷಿತವಾಗಿ ರಸ್ತೆಯ ಕಡೆಗೆ ತಿರುಗಿ ಏಕಾಏಕಿ ಕಾರಿನತ್ತ ಧಾವಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ವಿಡಿಯೊ ನೋಡಿ:
ತ್ರಿಕೈಪೇಟೆಯ ಸೇಂಟ್ ಥಾಮಸ್ ಜಾಕೋಬೈಟ್ ಚರ್ಚ್‌ನ ಧರ್ಮಗುರು ಫಾದರ್ ರೇಗಿ ಪಾಲ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ವಿವರಗಳ ಪ್ರಕಾರ, ಕುಟುಂಬವು ಗುಂಡ್ಲುಪೇಟೆಯಿಂದ ಹಿಂತಿರುಗುವಾಗ ಮೂರು ಕಾಡು ಆನೆಗಳು ರಸ್ತೆಯ ಕೆಳಗಿನಿಂದ ಹೊರಬಂದು ಮಾರ್ಗವನ್ನು ದಾಟಲು ಪ್ರಾರಂಭಿಸಿದವು.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಈ ಸಂದರ್ಭದಲ್ಲಿ ಹಲವು ಚಾಲಕರು ತಕ್ಷಣ ತಮ್ಮ ವಾಹನಗಳನ್ನು ನಿಲ್ಲಿಸಿ ಆನೆಗಳು ರಸ್ತೆಯಿಂದ ದೂರ ಸರಿಯುವವರೆಗೆ ಕಾಯುತ್ತಿದ್ದರು. ಆನೆಗಳು ಕಾಡಿನತ್ತ ಸಾಗಿದ್ದನ್ನು ಗಮನಿಸಿದ ವಾಹನ ಸವಾರರು ನಿಧಾನವಾಗಿ ಮುಂದೆ ಸಾಗಿದರು. ಈ ಸಾಲಿನಲ್ಲೇ ಫಾದರ್ ರೆಜಿ ಪೌಲ್ ಅವರ ಕಾರೂ ಚಲಿಸುತ್ತಿತ್ತು.
ಆದರೆ ಕಾಡಿನತ್ತ ಸಾಗಿದ್ದ ಆನೆಗಳಲ್ಲಿ ಒಂದು ಏಕಾಏಕಿ ಹಿಂತಿರುಗಿ ಮತ್ತೆ ರಸ್ತೆಯ ಕಡೆಗೆ ನುಗ್ಗಿದೆ. ಮುಂಭಾಗದಲ್ಲಿದ್ದ ಎರ್ಟಿಗಾ ಕಾರಿನ ಹತ್ತಿರಕ್ಕೆ ಆನೆ ಬಂದಾಗ, ಹಿಂಭಾಗದಲ್ಲಿ ಸಾಲಾಗಿ ವಾಹನಗಳು ಇರುವ ಕಾರಣ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳಲು ಜಾಗವಿರಲಿಲ್ಲ. ಫಾದರ್ ರೆಜಿ ಪೌಲ್ ಅವರ ಕಾರ್ ಆನೆಯಿಂದ ಕೇವಲ ಕೆಲವೇ ಮೀಟರ್‌ಗಳ ಅಂತರದಲ್ಲಿದ್ದು ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕುಟುಂಬವು ಯಾವುದೇ ಗಾಯಗಳಿಲ್ಲದೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಯಿತು. ಚಾಲಕನ ಸಮಯಪ್ರಜ್ಞೆ ಹಾಗೂ ಅದೃಷ್ಟದಿಂದಾಗಿ ಕಾರಿನಲ್ಲಿದ ಪ್ರಯಾಣಿಕರು ಪಾರಾಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.