ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಆಕಸ್ಮಿಕವಾಗಿ ಪ್ರಯಾಣಿಕನೊಬ್ಬನ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ಈತನಿಗೆ ವಿಮಾನ ಮಿಸ್ ಆಗಿದೆ ಎಂಬ ಶೀರ್ಷಿಕೆ ನೀಡಲಾಗಿದೆ. ಕುರ್ಚಿಯಲ್ಲಿ ಆರಾಮಾಗಿ ನಿದ್ರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅದು ಬೇರಾರು ಅಲ್ಲ ಶ್ವಾನ. ಹೌದು, ನಾಯಿಯೊಂದರ ಈ ಹೃದಯಸ್ಪರ್ಶಿ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ (Viral Video) ಆಗಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಅಖಿಲೇಶ್ ರಾವತ್ ಹಂಚಿಕೊಂಡ ಈ ವಿಡಿಯೊವು, ಪ್ರಯಾಣಿಕರು ಕುರ್ಚಿಗಳ ಮೇಲೆ ಕುಳಿತಿರುವುದನ್ನು ಅಥವಾ ವಿಶ್ರಾಂತಿ ಪಡೆಯುವುದನ್ನು, ಹೊರಾಂಗಣ ಕಾಯುವ ಪ್ರದೇಶದಲ್ಲಿ ಕಾಣಬಹುದು. ನಂತರ ಕ್ಯಾಮರಾ ಅಸಾಮಾನ್ಯ ದೃಶ್ಯವನ್ನು ಸೆರೆಹಿಡಿದಿದೆ. ಒಂದು ಬೀದಿ ನಾಯಿ ಪ್ರಯಾಣಿಕರ ಆಸನದಲ್ಲಿ ಕುಳಿತಿರುವುದನ್ನು ಕಾಣಬಹುದು.
ಈ ದೃಶ್ಯ ನೋಡಲು ತುಂಬಾ ಮುದ್ದಾಗಿದೆ. ಡಾಗೇಶ್ ಅಣ್ಣನಿಗೆ ವಿಮಾನ ಮಿಸ್ ಆಗಿದೆ ಎಂಬ ಹಾಸ್ಯಮಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ. ಈ ಪೋಸ್ಟ್ ವೀಕ್ಷಕರ ಮನಗೆದ್ದಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ನಾಯಿಯು ಕುರ್ಚಿಯ ಮೇಲೆ ಶಾಂತವಾಗಿ ಮಲಗಿರುವ ವಿಡಿಯೊ ಇಲ್ಲಿದೆ.
ವಿಡಿಯೊ ವೀಕ್ಷಿಸಿ:
ನೆಗೆಟಿವ್ ಆಗಿ ನೋಡುವ ಬದಲು ನೆಟ್ಟಿಗರು ಇದನ್ನು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾಯಿಯ ವಿಡಿಯೊ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಫಿದಾ ಆಗಿದ್ದಾರೆ. ಶ್ವಾನವನ್ನು ಯಾವುದೇ ತೊಂದರೆಯಿಲ್ಲದೆ ವಿಶ್ರಾಂತಿ ಪಡೆಯಲು ಅವಕಾಶ ನೀಡಿದ್ದಕ್ಕಾಗಿ ಅನೇಕರು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ನಾಯಿಯನ್ನು ಅಲ್ಲಿಂದ ಓಡಿಸದೆ ಆರಾಮಾಗಿ ಇರಲು ಬಿಟ್ಟಿದ್ದಕ್ಕೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಬಳಕೆದಾರರೊಬ್ಬರು ನಮಸ್ಕಾರ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಕರ್ನಾಟಕ, ನಾವು ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆಗಾಗ ಪ್ರಯಾಣಿಸುವವರು ಈ ನಾಯಿಯು ಯಾವಾಗಲೂ ವಿಮಾನ ನಿಲ್ದಾಣದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ. ಅದು ಯಾವಾಗಲೂ ಅಲ್ಲಿ ಇರುತ್ತದೆ. ನಾನು ನಾಲ್ಕು ಬಾರಿ ಅಲ್ಲಿಗೆ ಹೋಗಿದ್ದೇನೆ. ಕಳೆದ ಎರಡು ವರ್ಷಗಳಿಂದ ನಾನು ಅದನ್ನು ಯಾವಾಗಲೂ ನೋಡುತ್ತಿದ್ದೇನೆ ಎಂದು ಒಬ್ಬ ವ್ಯಕ್ತಿ ಹೇಳಿದರು. ಈ ವಿಡಿಯೊ ತಿಳಿಸುವ ಶಾಂತತೆಯ ಭಾವನೆಯಿಂದ ಇತರರು ಭಾವುಕರಾದರು. ಶ್ವಾನವು ಶಾಂತಿಯಿಂದ ಮಲಗಲಿ ಎಂದು ಒಬ್ಬ ಬಳಕೆದಾರರು ಹೇಳಿದರೆ, ಇನ್ನೊಬ್ಬರು, ನಾಯಿಯು ಈ ರೀತಿ ನಿಶ್ಚಿಂತೆಯಿಂದ ನಿದ್ರಿಸುತ್ತಿರುವುದನ್ನು ನೋಡುವುದರಿಂದ ನನಗೆ ನಿರಾಳವಾಗುತ್ತದೆ ಎಂದು ಹೇಳಿದರು. ಇನ್ನೂ ಅನೇಕರು ಕಾಮೆಂಟ್ ವಿಭಾಗದಲ್ಲಿ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಲಿಫ್ಟ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ನಾಯಿ ಡೆಡ್ಲಿ ಅಟ್ಯಾಕ್! ಶಾಕಿಂಗ್ ವಿಡಿಯೊ ಇಲ್ಲಿದೆ