Viral Video: ಭಾರತದ ಪ್ರಸಿದ್ಧ ಕೊಳಕು ಬೀದಿಬದಿ ಆಹಾರವಿದು ಎಂದ ವಿದೇಶಿ ಪ್ರವಾಸಿಗ; ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ
Dirty Street Food In India: ಭಾರತದ ಪ್ರಮುಖ ನಗರಗಳಲ್ಲಿ ಒಂದಾದ ಕೋಲ್ಕತ್ತಾದ ಬೀದಿಬದಿಯ ಆಹಾರದ ವಿಡಿಯೊವೊಂದನ್ನು ವಿದೇಶಿ ಪ್ರವಾಸಿಗ ಮತ್ತು ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕೊಳಕು ಬೀದಿ ಬದಿಯ ಆಹಾರಕ್ಕಾಗಿ ಉದ್ದದ ಕ್ಯೂ ನಿಲ್ಲಲಾಗಿದೆ ಎಂಬ ಶೀರ್ಷಿಕೆ ನೀಡಿದ್ದಾರೆ.

-

ಕೋಲ್ಕತ್ತಾ: ವಿದೇಶಿ ಪ್ರವಾಸಿಗ ಮತ್ತು ಕಂಟೆಂಟ್ ಕ್ರಿಯೇಟರ್ ನೇವಿಟಿ ಎಂಬವನು ಭಾರತದ ಬೀದಿ ಬದಿಯ ಆಹಾರದ (street food) ಬಗೆಗಿನ ವಿಡಿಯೊವೊಂದನ್ನು ಹಂಚಿಕೊಂಡಿದ್ದಾನೆ. ಅಲ್ಲದೆ ಇದನ್ನು ಆತ, ಭಾರತದಲ್ಲಿ ಕೊಳಕು ಬೀದಿ ಬದಿಯ ಆಹಾರಕ್ಕಾಗಿ ಉದ್ದದ ಕ್ಯೂ ನಿಲ್ಲಲಾಗಿದೆ ಎಂಬ ಶೀರ್ಷಿಕೆ ನೀಡಿದ್ದಾನೆ. ಕೋಲ್ಕತಾದ ಬೀದಿಯೊಂದರಲ್ಲಿ ಸ್ಥಳೀಯ ಖಾದ್ಯಕ್ಕಾಗಿ ಡಜನ್‍ಗಟ್ಟಲೆ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವಿಡಿಯೊ ಇದೀಗ ವೈರಲ್ (Viral Video) ಆಗಿದೆ.
ವಿಡಿಯೊದಲ್ಲಿ ಆತ ಇದನ್ನು ಹುಚ್ಚುತನ ಎಂದು ಉದ್ಗರಿಸುತ್ತಾ, ಗ್ರಾಹಕರ ಉದ್ದನೆಯ ಸರತಿ ಸಾಲನ್ನು ತೋರಿಸಿದನು. ಸಾಲಿನಲ್ಲಿ ಕಾಯುತ್ತಿರುವಾಗ ಆತ ಓರ್ವ ಭಾರತೀಯ ಯುವಕನೊಂದಿಗೆ ಈ ಖಾದ್ಯ ಮತ್ತು ಅದರ ಜನಪ್ರಿಯತೆಯ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: Viral Video: ಮದುವೆಗೆ ಬಂದ ಅತಿಥಿಯನ್ನು ಸ್ವಾಗತಿಸುವ ಬದಲು ದಿಕ್ಕುಪಾಲಾಗಿ ಓಡಿದ ಜನ; ಇಲ್ಲಿದೆ ವೈರಲ್ ವಿಡಿಯೊ
ಭಾರತದ ಪ್ರಸಿದ್ಧ ಕೊಳಕು ಬೀದಿ ಬದಿಯ ಆಹಾರ ಎಂದು ವಿದೇಶಿ ಕಂಟೆಂಟ್ ಕ್ರಿಯೇಟರ್ ಕರೆದರೂ, ಆತನು ಅದರ ರುಚಿ ನೋಡಲು ಉತ್ಸುಕನಾಗಿದ್ದ. ಇದು ವಿಶ್ವದ ಅತ್ಯಂತ ಅನೈರ್ಮಲ್ಯ ಬೀದಿ ಆಹಾರವಾಗಿದೆ. ಆದರೆ ಇದು ಬಹಳ ರುಚಿಕರವಾಗಿದೆ ಎಂಬುದನ್ನು ಕೇಳಿದ್ದೇನೆ ಎಂದು ಹೇಳುತ್ತಾ ಆಹಾರವನ್ನು ಸವಿಯಲು ಮುಂದಾಗಿದ್ದಾನೆ. ಕಚೋರಿಯನ್ನು ಆರ್ಡರ್ ಮಾಡಿ ತಿಂದ ಅವನು, ಅದರ ರುಚಿಗೆ ಮನಸೋತಿದ್ದಾನೆ.
ಇಲ್ಲಿದೆ ವಿದೇಶಿ ವ್ಯಕ್ತಿ ಹಂಚಿಕೊಂಡಿರುವ ವಿಡಿಯೊ:
ಬೀದಿ ಬದಿ ಆಹಾರದ ರುಚಿ ನೋಡುತ್ತಿದ್ದಂತೆ ಅವನ ಮುಖಭಾವ ಬದಲಾಯಿತು. ವ್ಹಾವ್, ಬಹಳ ಅದ್ಭುತವಾಗಿದೆ ಎಂದು ಉದ್ಘರಿಸಿದ್ದಾನೆ. ಇದು ತುಂಬಾ ಖಾರವಾಗಿದೆ, ಬಿಸಿ-ಬಿಸಿಯಾಗಿದೆ. ಆದರೂ ಬಹಳ ರುಚಿಕರವಾಗಿದೆ ಎಂದು ಅಚ್ಚರಿಯಲ್ಲಿ ಹೇಳಿದ್ದಾನೆ. ಆತ ರುಚಿ ಪರೀಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಯಿತು. ಕೆಲವರು ಅವನ ಸಾಹಸ ಮನೋಭಾವವನ್ನು ಹೊಗಳಿದರೆ, ಇನ್ನು ಕೆಲವರು ಅವನ ಆಯ್ಕೆಯನ್ನು ಪ್ರಶ್ನಿಸಿದರು. ನಿಮಗೆಷ್ಟು ಅನಾರೋಗ್ಯ ಬಂತು ಎಂದು ಪ್ರಶ್ನಿಸಿದರು.
ನೇವಿಟಿ ಕಚೋರಿ ರುಚಿ ಸವಿದಿರುವ ವಿಡಿಯೊ ಇಲ್ಲಿದೆ:
ವೇಗದ ಆಹಾರವಲ್ಲ ಇದು ಕೊನೆಯ ಆಹಾರ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದರು. ಕೆಲವರು ಕಳವಳ ವ್ಯಕ್ತಪಡಿಸಿದರು. ನಾನು ಭಾರತದಿಂದ ಬಂದವನು, ಈ ರೀತಿಯ ಖಾದ್ಯಗಳನ್ನು ತಿಂದ ನಂತರ ನನಗೆ ಆಹಾರ ವಿಷವಾಯಿತು ಎಂದು ಒಬ್ಬರು ಬರೆದಿದ್ದಾರೆ. ಆಹಾರ ಬಹಳ ರುಚಿಯನ್ನೇನೋ ಹೊಂದಿದೆ. ಮಾರಾಟಗಾರರು ಗಮನ ಸೆಳೆಯಲು ಹೆಚ್ಚು ಗಲೀಜು ಮಾಡುತ್ತಿದ್ದಾರೆ ಎಂದು ಒಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ.
ಒಮ್ಮೆ ಒಬ್ಬ ವ್ಯಕ್ತಿಯು ಅದನ್ನು ತಿಂದು ಹೊಟ್ಟೆ ನೋವಿನಿಂದ ಕಿರುಚುತ್ತ ಆಸ್ಪತ್ರೆಗೆ ಸೇರಿರುವುದನ್ನು ನಾನು ನೋಡಿದ್ದೇನೆ ಎಂದು ಮತ್ತೊಬ್ಬರು ಹೇಳಿದರು. ಇಷ್ಟಪಟ್ಟರೂ ಅಥವಾ ದ್ವೇಷಿಸದಿದ್ದರೂ, ಈ ವಿಡಿಯೊ ಮಾತ್ರ ಭಾರತದ ಬೀದಿ ಆಹಾರದ ಬಗ್ಗೆಗಿನ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.