ದಿಸ್‌ಪುರ, ಜ. 24: ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ಮೇಣದ ಬತ್ತಿ ಹೊತ್ತಿಸಿ, ಕೇಕ್ ಕಟ್ ಮಾಡಿ ಪ್ರೀತಿಪಾತ್ರರ ಸಮ್ಮುಖದಲ್ಲಿ ಆಚರಿಸಲಾಗುತ್ತದೆ. ಅಸ್ಸಾಂನ (Assam) ಆನೆ ಪ್ರಿಯ ಬಿಪಿನ್ ಕಶ್ಯಪ್ ಎಂಬವವರು ಪ್ರಿಯಾಂಶಿ (ಇದನ್ನು ಮೊಮೊ ಎಂದೂ ಕರೆಯುತ್ತಾರೆ) ಎಂಬ ಮರಿ ಆನೆಯ (Baby Elephant Momo) ಒಂದು ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಗಮನ ಸೆಏಳದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊವನ್ನು ಕಶ್ಯಪ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಆಚರಣೆಯು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದೆ. ವಿಡಿಯೊದಲ್ಲಿ ಕಶ್ಯಪ್ ಪ್ರಿಯಾಂಶಿಯ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದನ್ನು ಮತ್ತು ಹುಟ್ಟುಹಬ್ಬದ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಆನೆಯ ಮೇಲಿನ ಅವರ ಪ್ರೀತಿ ನೆಟ್ಟಿಗರ ಹೃದಯ ಗೆದ್ದಿದೆ.
ಈ ವಿಡಿಯೊವನ್ನು ಫ್ರೆಂಡ್ ಎಲಿಫೆಂಟ್ ಎಂಬ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೊ ಪ್ರಿಯಾಂಶಿ ಮತ್ತು ಬಿಪಿನ್ ಕಶ್ಯಪ್ ನಡುವಿನ ಬಲವಾದ ಬಾಂಧವ್ಯವನ್ನು ತೋರಿಸುತ್ತದೆ. ಈ ಆಚರಣೆಯು ಪುಟ್ಟ ಆನೆಯನ್ನು ಗೌರವಿಸಲು ಸರಳ ಮಾರ್ಗವಾಗಿದೆ.
ವಿಡಿಯೊ ವೀಕ್ಷಿಸಿ:
ಈ ಹೃದಯ ಸ್ಪರ್ಶಿ ಆಚರಣೆಯು ಬಿಪಿನ್ ಕಶ್ಯಪ್ ಅವರ ಪುಟ್ಟ ಆನೆ ಪ್ರಿಯಾಂಶಿಯ ಮೇಲಿನ ನಿಜವಾದ ಪ್ರೀತಿಯನ್ನು ತೋರಿಸುತ್ತದೆ. ಪ್ರಿಯಾಂಶಿಗಾಗಿ ವಿಶೇಷವಾಗಿ ನೀಲಿ ಕೇಕ್ ಅನ್ನು ತಯಾರಿಸಲಾಗಿದೆ. ಅದರ ಸುತ್ತಲೂ ಹಣ್ಣುಗಳು ಮತ್ತು ಧಾನ್ಯಗಳನ್ನು ಇರಿಸಲಾಗಿದೆ. ಹುಟ್ಟುಹಬ್ಬದ ಮೆನುವಿನಲ್ಲಿ ಬಾಳೆಹಣ್ಣುಗಳು, ಸೇಬುಗಳು, ದ್ರಾಕ್ಷಿಗಳು, ತರಕಾರಿಗಳು ಮತ್ತು ಪುಟ್ಟ ಆನೆಗಾಗಿ ವಿಶೇಷವಾಗಿ ತಯಾರಿಸಿದ ಇತರ ಪೌಷ್ಟಿಕ ಭಕ್ಷ್ಯಗಳು ಸೇರಿವೆ.
ಆನೆ ಗುಂಪಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ, 8 ಆನೆಗಳ ದಾರುಣ ಸಾವು
ಈ ವಿಡಿಯೊವನ್ನು ನೋಡಿದ ನಂತರ ಬಳಕೆದಾರರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮರಿ ಆನೆಯ ಈ ಮುದ್ದಾದ ದೃಶ್ಯವನ್ನು ಅನೇಕರು ಆನಂದಿಸುತ್ತಿದ್ದಾರೆ. ನಟಿ ಟೀನಾ ದತ್ತ ಕೂಡ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೊ ನೋಡಿದ ಒಬ್ಬರು ಪ್ರಾಣಿಗಳನ್ನು ಪ್ರೀತಿಸುವ ಮತ್ತು ಅವುಗಳ ಬಗ್ಗೆ ಕರುಣೆ ಹೊಂದಿರುವ ಜನರನ್ನು ನಾನು ಪ್ರೀತಿಸುತ್ತೇನೆ. ಮೊಮೊಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಾನು ಕಂಡ ಅತ್ಯಂತ ಸುಂದರವಾದ ದೃಶ್ಯ ಎಂದು ಮತ್ತೊಬ್ಬರು ಬರೆದಿದ್ದಾರೆ.
ಪ್ರವಾಹದ ನಡುವೆಯೂ ಹುಲಿಯನ್ನು ರಕ್ಷಿಸಿದ ಆನೆ
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭೀಕರ ಪ್ರವಾಹದ ಮಧ್ಯೆ ಆನೆಯೊಂದು ಹುಲಿಯನ್ನು ರಕ್ಷಿಸಿದ ದೃಶ್ಯವೊಂದು ಭಾರಿ ವೈರಲ್ ಆಗಿತ್ತು. ತೀವ್ರ ಪ್ರವಾಹದ ನಡುವೆ ಆನೆಯೊಂದು ತನ್ನ ಸೊಂಡಿಲು ನೀಡಿ ಹುಲಿಯನ್ನು ತನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಕಾಪಾಡಿರುವ ವಿಡಿಯೊ ಸಂಚಲನ ಸೃಷ್ಟಿಸಿತ್ತು. ಈ ಹೃದಯಸ್ಪರ್ಶಿ ದೃಶ್ಯವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ಇದು ನಿಜವಲ್ಲ, ಎಐ ವಿಡಿಯೊ ಎನ್ನುವುದು ಬಳಿಕ ತಿಳಿದು ಬಂತು.