ಕುವೈತ್: ಯುಎಸ್ ಮಿಲಿಟರಿಯ (US Military) ಮತ್ತೊಂದು ಎಫ್-15 ಜೆಟ್ (US military F-15 jet) ಮಧ್ಯಪ್ರಾಚ್ಯದಲ್ಲಿ (Middle East conflict) ಪತನಗೊಂಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ದಿನಾಂಕವಿಲ್ಲದೇ ಇದ್ದರೂ ಇದು ಭಾನುವಾರ ಹೊರ್ಮುಜ್ ದ್ವೀಪದ (Hormuz island) ಬಳಿ ನಡೆದ ದಾಳಿಯಾಗಿದೆ ಎಂದು ಇರಾನ್ ಮಾಧ್ಯಮಗಳು ಹೇಳಿಕೊಂಡಿವೆ. ಹೊರ್ಮುಜ್ ದ್ವೀಪದ ಬಳಿ ದೇಶದ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಎಫ್ -15 ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ಇರಾನ್ ತಿಳಿಸಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇದರ ವಿವಿಧ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಕುವೈತ್‌ನಲ್ಲಿ ಯುಎಸ್ ಮಿಲಿಟರಿಯ ಮತ್ತೊಂದು ಎಫ್-15ಇ ಫೈಟರ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ. ಸುಮಾರು 29 ಸೆಕೆಂಡುಗಳ ಈ ವಿಡಿಯೊ ಕುವೈತ್ ನಗರದ ವಸತಿ ಪ್ರದೇಶದ ಬಳಿ ನಡೆದಿದೆ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಿಂದ 3,75,000ಕ್ಕೂ ಹೆಚ್ಚು ಭಾರತೀಯರು ವಾಪಸ್: ಸಹಾಯ ಮಾಡಲು ಕೇಂದ್ರ ಸರ್ಕಾರ ಬದ್ಧ ಎಂದ ಪ್ರಧಾನಿ ಮೋದಿ
ಇದಕ್ಕೆ ಸಂಬಂಧಿಸಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿ ತಾನು ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಇದನ್ನು ನಿರಾಕರಿಸಿದೆ. ಆಪರೇಷನ್ ಎಪಿಕ್ ಫ್ಯೂರಿ ಸಮಯದಲ್ಲಿ ಯುಎಸ್ ಪಡೆಗಳು 8,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಿದೆ. ಯಾವುದೇ ಯುಎಸ್ ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸಿಲ್ಲ ಎಂದು ಅದು ಭಾನುವಾರ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಯುಎಸ್ ಅಧಿಕೃತವಾಗಿ ಕುವೈತ್‌ನಲ್ಲಿ ಮೂರು ಎಫ್-15 ಗಳನ್ನು ಕಳೆದುಕೊಂಡಿದೆ. ಅದು ಈ ತಿಂಗಳ ಆರಂಭದಲ್ಲಿ ನಡೆದಿತ್ತು. ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಹೊರಹಾರುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಆರು ವಿಮಾನ ಸಿಬ್ಬಂದಿ ಸುರಕ್ಷಿತವಾಗಿದ್ದು, ಚೇತರಿಸಿಕೊಂಡಿದ್ದಾರೆ. ಈ ಕುರಿತು ಸೆಂಟ್ ಕಾಮ್ ಸಂಪೂರ್ಣ ತನಿಖೆ ನಡೆಸಿ ಹೆಚ್ಚುವರಿ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.
ಈ ನಡುವೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಶೀಘ್ರದಲ್ಲೇ ಕೊನೆಯಾಗುವ ಭರವಸೆ ಉಂಟಾಗಿದೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಳೆದ ಎರಡು ದಿನಗಳಲ್ಲಿ ನಡೆದ ಮಾತುಕತೆಯ ಬಳಿಕ ಮುಂದಿನ ಐದು ದಿನಗಳವರೆಗೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡದಂತೆ ಅವರು ಯುಎಸ್ ಪಡೆಗಳಿಗೆ ಸೂಚಿಸಿದ್ದಾರೆ.
ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇಸ್ರೇಲ್ ಮತ್ತು ಯುಎಸ್ ನೇತೃತ್ವದಲ್ಲಿ ಪ್ರಾರಂಭಿಸಲಾದ ಆಪರೇಷನ್ ಎಪಿಕ್ ಫ್ಯೂರಿಯ ಮೂಲಕ ಇರಾನ್‌ನ ಕ್ಷಿಪಣಿ ಸಾಮರ್ಥ್ಯಗಳು, ನೌಕಾ ಪಡೆಗಳು, ಪ್ರಾಕ್ಸಿ ನೆಟ್‌ವರ್ಕ್‌ಗಳು ಮತ್ತು ಪರಮಾಣು ಸಂಬಂಧಿತ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ.